ಹೆಸರಘಟ್ಟ: ಚಿಕ್ಕಬಾಣಾವರ ಗ್ರಾಮದ ಸ್ಮಶಾನದಲ್ಲಿ ಸ್ನಾನ ಗೃಹ, ಶೌಚಾಲಯ ನಿರ್ಮಾಣ ಮತ್ತು ಮಹಾರುದ್ರೇಶ್ವರ ನಗರ, ವಿವೇಕಾನಂದ ನಗರಗಳ ರಸ್ತೆ ಅಭಿವೃದ್ಧಿ ಸೇರಿದಂತೆ ₹4 ಕೋಟಿ ವೆಚ್ಚದ ಕಾಮಗಾರಿಗಳಿಗೆ ದಾಸರಹಳ್ಳಿ ಶಾಸಕ ಆರ್. ಮಂಜುನಾಥ್ ಬುಧವಾರ ಗುದ್ದಲಿ ಪೂಜೆ ನೆರವೇರಿಸಿದರು.

ಬಳಿಕ ಮಾತನಾಡಿದ ಅವರು, ‘ಕೆರೆಗುಡ್ಡದ ಹಳ್ಳಿ ಸರ್ಕಾರಿ ಶಾಲೆಯಲ್ಲಿ ಪರಿಶುದ್ಧ ನೀರಿನ ಘಟಕ ಮತ್ತು ಬಿಸಿಯೂಟ ಮಾಡಲು ಸುಸಜ್ಜಿತ ಕೊಠಡಿಯನ್ನು ₹50 ಲಕ್ಷ ವೆಚ್ಚದಲ್ಲಿ ನಿರ್ಮಿಸಲಾಗುವುದು ಎಂದು ತಿಳಿಸಿದ್ದರು. ಸೋಮಶೆಟ್ಟಿಹಳ್ಳಿಯಿಂದ ಕೆರೆಗುಡ್ಡದಹಳ್ಳಿ ಗ್ರಾಮದ ಮುಖ್ಯರಸ್ತೆಯಲ್ಲಿ ಸೇತುವೆ ನಿರ್ಮಾಣ ಮಾಡಲಾಗುವುದು’ ಎಂದರು.

‘ಚಿಕ್ಕಬಾಣಾವರ ಕೆರೆಯನ್ನು ₹42 ಕೋಟಿ ವೆಚ್ಚದಲ್ಲಿ ಅಭಿವೃದ್ಧಿಪಡಿಸಲಾಗುವುದು. ಕೆರೆ ಅಭಿವೃದ್ಧಿಯ ನೀಲನಕ್ಷೆ ರೂಪಿಸಿದ್ದು, ಸರ್ಕಾರ ಹಣ ಬಿಡುಗಡೆ ಮಾಡಲಿದೆ. ಚಿಕ್ಕಬಾಣಾವರದ ಗ್ರಾಮ ಪಂಚಾಯಿತಿ ಕಚೇರಿ ಗೋಡೆ ಬಿರುಕು ಬಿಟ್ಟಿದೆ. ಪಂಚಾಯಿತಿ ಕಚೇರಿಯನ್ನು ಸುಸಜ್ಜಿತವಾಗಿ ನಿರ್ಮಿಸಲಾಗುವುದು’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.