ಬೆಂಗಳೂರು: ‘ವಿವಿಧತೆಗೆ ಧಕ್ಕೆ ತರುವ ‘ಹಿಂದಿ ದಿವಸ್’ ಆಚರಣೆಯನ್ನು ನಿಲ್ಲಿಸಿ, ದೇಶದ ಎಲ್ಲಾ ಭಾಷೆಗಳಿಗೂ ಸಮಾನ ಗೌರವ ಹಾಗೂ ಅವಕಾಶ ನೀಡಬೇಕು’ ಎಂದು ಕನ್ನಡ ಗೆಳೆಯರ ಬಳಗ ಆಗ್ರಹಿಸಿದೆ.

ಇದೇ 14ರಂದು ನಡೆಯಲಿರುವ ಹಿಂದಿ ದಿವಸ್ ಆಚರಣೆಗೆ ಬಳಗದ ಸಂಚಾಲಕ ರಾ.ನಂ. ಚಂದ್ರಶೇಖರ ವಿರೋಧ ವ್ಯಕ್ತಪಡಿಸಿದ್ದು, ‘ಕೇಂದ್ರ ಸರ್ಕಾರದ ಕಚೇರಿಗಳಲ್ಲಿ ಇತ್ತೀಚೆಗೆ ಹಿಂದಿ ಬಳಕೆ ಹೆಚ್ಚಿಸುವ ಪ್ರಯತ್ನ ತೀವ್ರಗತಿಯಲ್ಲಿ ನಡೆಯುತ್ತಿದೆ. ಕರ್ನಾಟಕದಲ್ಲಿರುವ ಅಂಚೆ, ವಿಮೆ, ರೈಲ್ವೆ, ಪಾಸ್‌ಪೋರ್ಟ್, ಬ್ಯಾಂಕ್ ಮುಂತಾದ ಕಡೆಗಳಲ್ಲಿ ಕನ್ನಡ ಬಳಕೆಗೆ ಸೀಮಿತ ಅವಕಾಶವಿದ್ದು, ಕನ್ನಡಿಗರಿಗೆ ಇಲ್ಲಿಯೇ ‘ಪರಕೀಯ ಪ್ರಜ್ಞೆ’ ಕಾಡುತ್ತಿದೆ. ಈಗ ಹಿಂದಿ ಹೇರಿಕೆ ಅತಿರೇಕಕ್ಕೆ ಹೋಗಿದೆ. ಕೇಂದ್ರ ಸರ್ಕಾರವು ರಾಷ್ಟ್ರೀಕೃತ ಬ್ಯಾಂಕ್‌ಗಳ ಸಿಬ್ಬಂದಿ ಆಯ್ಕೆಗೆ ಪ್ರಾದೇಶಿಕ ನೇಮಕಾತಿ ಮಂಡಳಿಗಳನ್ನು ರದ್ದುಪಡಿಸಿ, ಎಲ್ಲ ಬ್ಯಾಂಕ್‌ಗಳ ಸಿಬ್ಬಂದಿ ಆಯ್ಕೆಯನ್ನು ಕೇಂದ್ರೀಕೃತಗೊಳಿಸಿದೆ. ಬ್ಯಾಂಕ್ ಸಿಬ್ಬಂದಿ ನೇಮಕಾತಿ ಸಂಸ್ಥೆ (ಐಬಿಪಿಎಸ್) ಮೂಲಕ ಹಿಂದಿ ಹಾಗೂ ಇಂಗ್ಲಿಷ್‌ನಲ್ಲಿ ಲಿಖಿತ ಪರೀಕ್ಷೆ ನಡೆಸುತ್ತಿದೆ. ಇದರಿಂದಾಗಿ ಕನ್ನಡ ಬಾರದ ಅಭ್ಯರ್ಥಿಗಳು ಕ್ಲರ್ಕ್‌ಗಳಾಗಿ ಕರ್ನಾಟಕಕ್ಕೆ ಬರುತ್ತಿದ್ದಾರೆ’ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

‘ಬೆಂಗಳೂರಿನಲ್ಲಿ ಕೇಂದ್ರ ಸಿಬ್ಬಂದಿ ಆಯ್ಕೆ ಸಮಿತಿಯ ಪ್ರಾದೇಶಿಕ ಕಚೇರಿ ಇದೆ. ಸಿಬ್ಬಂದಿ ಆಯ್ಕೆ ಪರೀಕ್ಷೆ ಹಿಂದಿ ಹಾಗೂ ಇಂಗ್ಲಿಷ್‌ನಲ್ಲಿ ಮಾತ್ರ ನಡೆಯುತ್ತದೆ. ಅಭ್ಯರ್ಥಿಗಳಿಗೆ ಕನ್ನಡ ಜ್ಞಾನ ಕಡ್ಡಾಯ ಎಂಬ ನಿಬಂಧನೆ ಇಲ್ಲದಿರುವುದರಿಂದ ಕನ್ನಡ ಬಾರದವರೇ ಆಯ್ಕೆಯಾಗುತ್ತಿದ್ದಾರೆ. ಇಷ್ಟಾದರೂ ಹಿಂದಿ ಬಳಕೆ ಸಾಲದು ಎಂದು ಹಿಂದಿ ಬಳಕೆ ಹೆಚ್ಚಿಸುವ ಮತ್ತು ಜನಪ್ರಿಯಗೊಳಿಸುವ ಉದ್ದೇಶದಿಂದ ‘ಹಿಂದಿ ದಿವಸ್’ ಆಚರಿಸಲಾಗುತ್ತಿದೆ. ಸೆಪ್ಟಂಬರ್ ತಿಂಗಳು ಪೂರ್ತಿ ಹಿಂದಿ ಪ್ರಬಂಧ ಸ್ಪರ್ಧೆ, ಚರ್ಚಾ ಸ್ಪರ್ಧೆ, ನಾಟಕ, ಗೀತೆಗಳ ಸ್ಪರ್ಧೆ ನಡೆಸಿ, ಸಾವಿರಾರು ರೂಪಾಯಿ ಬಹುಮಾನ ನೀಡುವ ಮೂಲಕ ಜನರನ್ನು ಹಿಂದಿಯತ್ತ ಸೆಳೆಯವ ಕೆಲಸ ಆಗುತ್ತಿದೆ. ಹೀಗಾಗಿ, ಸಂವಿಧಾನದಲ್ಲಿ ಭಾಷಾ ನೀತಿಯ ಬಗ್ಗೆ ಇರುವ ವಿಧಿಗಳನ್ನು ತಿದ್ದುಪಡಿ ಮಾಡಿ, ದೇಶದ ಎಲ್ಲಾ ಭಾಷೆಗಳಿಗೆ ಸಮಾನ ಅವಕಾಶ ನೀಡಬೇಕು’ ಎಂದು ಆಗ್ರಹಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.