ಬೆಂಗಳೂರು: ಸ್ವಾತಂತ್ರ್ಯೊತ್ಸವದ ಅಂಗವಾಗಿ ತೋಟಗಾರಿಕೆ ಇಲಾಖೆ ಮತ್ತು ಮೈಸೂರು ಉದ್ಯಾನ ಕಲಾಸಂಘ ವತಿಯಿಂದ ಅಗಸ್ಟ್ 5ರಿಂದ 15ರ ವರೆಗೆ ಲಾಲ್ಬಾಗ್ನಲ್ಲಿ ಫಲಪುಷ್ಪ ಪ್ರದರ್ಶನ ಸ್ಪರ್ಧೆ ಹಾಗೂ ವಿವಿಧ ಸ್ಪರ್ಧೆಗಳನ್ನು ಆಯೋಜಿಸಲಾಗಿದೆ.

ಅಗಸ್ಟ್ 2ರಂದು ನಡೆಯುವ ‘ಬಾಲ ನಟನಾಗಿ ಪುನೀತ್ ರಾಜಕುಮಾರ್ ಅಭಿನಯದ ನನ್ನಿಷ್ಟಿದ ಚಿತ್ರ’ ಎಂಬ ವಿಷಯದ ಪ್ರಬಂಧ ಸ್ಪರ್ಧೆ 5–7ನೇ ತರಗತಿವರೆಗೆ ಅಧ್ಯಯನ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ನಡೆಯಲಿದೆ. 8ರಿಂದ 10ನೇ ತರಗತಿವರೆಗೆ ಅಧ್ಯ ಯನ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ಪುನೀತ್ ರಾಜಕುಮಾರ್ ಅಭಿನಯದ ‘ರಾಜಕುಮಾರ’ ಚಿತ್ರದ ಆಶಯದ ಕುರಿತು ಪ್ರಬಂಧ ಸ್ಪರ್ಧೆ ನಡೆಯಲಿದೆ. ಆಗಸ್ಟ್ 1ರೊಳಗೆ ಪ್ರಬಂಧ ಸ್ಪರ್ಧೆಯಲ್ಲಿ ಪಾಲ್ಗೊಳ್ಳುವವರು ಹೆಸರು ನೋಂದಾಯಿಸಕೊಳ್ಳಬೇಕು.

ತೋಟಗಳ ಸ್ಪರ್ಧೆ ಜುಲೈ 20ರಿಂದ ಅಗಸ್ಟ್ 1ರ ವರೆಗೆ ನಡೆಯಲಿದೆ. ಕುಂಡಗಳಲ್ಲಿ ಬೆಳೆದ ಗಿಡಗಳನ್ನು ಗಾಜಿನ ಮನೆಯ ಒಳಗೆ ಪ್ರದರ್ಶಿಸಲು ಅಗಸ್ಟ್ 3ರೊಳಗೆ ಆಸಕ್ತರು ಹೆಸರು ನೋಂದಣಿ ಮಾಡಿಕೊಳ್ಳಬೇಕು.

ಇಕೆಬಾನ, ತರಕಾರಿ ಕೆತ್ತನೆ, ಇಂಡಿಯನ್ ಫ್ಲೋರಲ್ ಆರ್ಟ್, ಡಚ್ ಮತ್ತು ಒಣ ಹೊವಿನ ಪ್ರದರ್ಶನ, ಜಾನೂರು ಆರ್ಟ್, ರಂಗೋಲಿ ಮತ್ತು ತಾಯ್ ಆರ್ಟ್ ಸ್ಪರ್ಧೆಗಳಲ್ಲಿ ಭಾಗವಹಿಸಲು ಅಗಸ್ಟ್ 6ರೊಳಗೆ ಹೆಸರು ನೋಂದಾಯಿಸಿಕೊಳ್ಳಬೇಕು.

ಡಾ. ರಾಜ್ಕುಮಾರ್ ಹಾಗೂ ಪುನೀತರಾಜಕುಮಾರ್ ಅವರ ಚಿತ್ರವನ್ನು ಸ್ಥಳದಲ್ಲೇ ಬಿಡಿಸುವ ಸ್ಪರ್ಧೆಯನ್ನು ಅಗಸ್ಟ್ 5ರ ಬೆಳಿಗ್ಗೆ 8ರಿಂದ ಆಯೋಜಿಸಲಾಗಿದೆ ಎಂದು ಪ್ರಕಟಣೆ ತಿಳಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.