ಸ್ವಾತಂತ್ರ್ಯೋತ್ಸವದ ಅಂಗವಾಗಿ ಲಾಲ್ಬಾಗ್ನ ಗಾಜಿನ ಮನೆಯಲ್ಲಿ ಆಯೋಜಿಸುತ್ತಿರುವ ಫಲಪುಷ್ಪ ಪ್ರದರ್ಶನದಲ್ಲಿ ಸಂಸತ್ ಭವನದ ಪ್ರತಿಕೃತಿ ನಿರ್ಮಾಣ ಮಾಡುತ್ತಿರುವುದು -ಪ್ರಜಾವಾಣಿ ಚಿತ್ರ/ ರಂಜು ಪಿ
ಪ್ರವೇಶ ಶುಲ್ಕ ಹೀಗಿದೆ...
ಲಾಲ್ಬಾಗ್ನ ಎಲ್ಲ ಪ್ರವೇಶ ದ್ವಾರಗಳಲ್ಲಿ ಎಲೆಕ್ಟ್ರಾನಿಕ್ ಟಿಕೆಟ್ ಯಂತ್ರಗಳ ವ್ಯವಸ್ಥೆ ಮಾಡಲಾಗಿದ್ದು ಆನ್ಲೈನ್ ಬುಕಿಂಗ್ ಪಡೆದುಕೊಳ್ಳುವ ಸೌಲಭ್ಯ ಇದೆ. *ವಯಸ್ಕರಿಗೆ ₹ 80 * ರಜೆ ದಿನಗಳಲ್ಲಿ ₹ 100 * ಮಕ್ಕಳಿಗೆ ₹ 30 * ಸಮವಸ್ತ್ರ ಧರಿಸಿ ಬರುವ ಶಾಲಾ ವಿದ್ಯಾರ್ಥಿಗಳಿಗೆ ಪ್ರವೇಶ ಉಚಿತ * ಪ್ರದರ್ಶನದ ಸಮಯ: ಬೆಳಿಗ್ಗೆ 6ರಿಂದ ಸಂಜೆ 6.30ರವರೆಗೆ
ವಾಹನ ನಿಲುಗಡೆ ಎಲ್ಲಿ?
* ಹಾಪ್ಕಾಮ್ಸ್ ಆವರಣ ಮತ್ತು ಜೆ.ಸಿ. ರಸ್ತೆಯಲ್ಲಿರುವ ಬಿಬಿಎಂಪಿ ಬಹುಮಹಡಿ ವಾಹನ ನಿಲ್ದಾಣ * ಶಾಂತಿನಗರ ಬಸ್ ನಿಲ್ದಾಣದ ಬಹುಮಹಡಿ ವಾಹನ ನಿಲ್ದಾಣ * ಅಲ್ ಅಮೀನ್ ಕಾಲೇಜು ಮೈದಾನ