ಬೆಂಗಳೂರು: ಉದ್ಯೋಗ ಕೊಡಿಸುವ ಆಮಿಷವೊಡ್ಡಿ ಯುವತಿಯೊಬ್ಬರ ಮೇಲೆ ಅತ್ಯಾಚಾರ ಎಸಗಿದ್ದ ಆರೋಪದಡಿ ದಿಲ್ಲಿ ಪ್ರಸಾದ್ ಎಂಬುವವರನ್ನು ಆಗ್ನೇಯ ವಿಭಾಗದ ಸೈಬರ್ ಕ್ರೈಂ ಠಾಣೆ ಪೊಲೀಸರು ಬಂಧಿಸಿದ್ದಾರೆ.

‘ಆಂಧ್ರಪ್ರದೇಶದ ದಿಲ್ಲಿ ಪ್ರಸಾದ್, ನಗರದ ಸಾಫ್ಟ್ವೇರ್ ಕಂಪನಿಯೊಂದರಲ್ಲಿ ಎಂಜಿನಿಯರ್ ಕೆಲಸ ಮಾಡುತ್ತಿದ್ದ. ಕೋರಮಂಗಲದಲ್ಲಿ ನೆಲೆಸಿದ್ದ. ಸಂತ್ರಸ್ತೆ ನೀಡಿದ್ದ ದೂರು ಆಧರಿಸಿ ಈತನನ್ನು ಬಂಧಿಸಲಾಗಿದೆ’ ಎಂದು ಪೊಲೀಸರು ಹೇಳಿದರು.

ನಕಲಿ ಖಾತೆ ತೆರೆದು ಪರಿಚಯ: ‘ಮೋನಿಕಾ ಹಾಗೂ ವ್ಯವಸ್ಥಾಪಕ ಎಂಬ ಹೆಸರಿನಲ್ಲಿ ಇನ್ಸ್ಟಾಗ್ರಾಂ ಸಾಮಾಜಿಕ ಮಾಧ್ಯಮದಲ್ಲಿ ಎರಡು ನಕಲಿ ಖಾತೆಗಳನ್ನು ಆರೋಪಿ ಸೃಷ್ಟಿಸಿದ್ದ. ಪ್ರತಿಷ್ಠಿತ ಕಂಪನಿಗಳಲ್ಲಿ ಕೆಲಸ ಖಾಲಿ ಇರುವುದಾಗಿ ಜಾಹೀರಾತು ನೀಡುತ್ತಿದ್ದ. ಅದನ್ನು ನಂಬಿ ಹಲವು ಯುವತಿಯರು, ಆರೋಪಿಗೆ ಸಂದೇಶ ಕಳುಹಿಸುತ್ತಿದ್ದರು’ ಎಂದು ಪೊಲೀಸರು ತಿಳಿಸಿದರು.

‘ಸಂತ್ರಸ್ತೆ ಸಹ ಉದ್ಯೋಗ ಸಿಗುವ ಆಸೆಯಿಂದ ಆರೋಪಿಗೆ ಸಂದೇಶ ಕಳುಹಿಸಿದ್ದರು. ಅದಕ್ಕೆ ಪ್ರತಿಕ್ರಿಯಿಸಿದ್ದ ಆರೋಪಿ, ‘ಪ್ರತಿಷ್ಠಿತ ಕಂಪನಿಯಲ್ಲಿ ಕೆಲಸ ಖಾಲಿ ಇದೆ. ಸ್ವ–ವಿವರ ಸಮೇತ ಸಂದರ್ಶನಕ್ಕೆ ಬನ್ನಿ’ ಎಂದು ಕರೆದಿದ್ದ. ಮಡಿವಾಳ ಬಳಿಯ ಇರುವ ‘ಒಯೊ’ ಕೊಠಡಿ ವಿಳಾಸ ನೀಡಿದ್ದ.’

‘ನಿಗದಿತ ಸಮಯದಂದು ಯುವತಿ ಕೊಠಡಿಗೆ ಬಂದಿದ್ದರು. ಅವರ ಜೊತೆ ಅನುಚಿತವಾಗಿ ವರ್ತಿಸಿದ್ದ ಆರೋಪಿ, ಕೈ ಹಿಡಿದು ಎಳೆದಾಡಿದ್ದ. ಯುವತಿಯನ್ನು ಅರೆನಗ್ನಗೊಳಿಸಿದ್ದ. ಈ ದೃಶ್ಯವನ್ನು ರಹಸ್ಯ ಕ್ಯಾಮೆರಾದಲ್ಲಿ ಸೆರೆ ಹಿಡಿದಿದ್ದ. ಇದಾದ ನಂತರ, ಯುವತಿಯನ್ನು ಪೀಡಿಸುತ್ತಿದ್ದ. ವಿಡಿಯೊಗಳನ್ನು ಕಳುಹಿಸಿ ತನ್ನೊಂದಿಗೆ ಲೈಂಗಿಕವಾಗಿ ಸಹಕರಿಸುವಂತೆ ಒತ್ತಾಯಿಸುತ್ತಿದ್ದ. ವಿಡಿಯೊಗಳನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಅಪ್ಲೋಡ್ ಮಾಡುವುದಾಗಿ ಬೆದರಿಸಿದ್ದ’ ಎಂದು ಪೊಲೀಸರು ಹೇಳಿದರು.

‘ಮರ್ಯಾದೆ ಹೋಗುವ ಭಯದಲ್ಲಿ ಯುವತಿ, ಆರೋಪಿ ಜೊತೆ ಹೋಗಿದ್ದರು. ಪುನಃ ಕೊಠಡಿಗೆ ಕರೆದೊಯ್ದಿದ್ದ ಆರೋಪಿ, ಯುವತಿ ಮೇಲೆ ಅತ್ಯಾಚಾರ ಎಸಗಿದ್ದ. ಇದಾದ ನಂತರವೂ ಆರೋಪಿ ಪುನಃ ಪೀಡಿಸಲಾರಂಭಿಸಿದ್ದ. ಬೇಸತ್ತ ಸಂತ್ರಸ್ತೆ ಠಾಣೆಗೆ ದೂರು ನೀಡಿದ್ದರು’ ಎಂದು ತಿಳಿಸಿದರು.

ಹಲವರಿಗೆ ವಂಚನೆ: ‘ಉದ್ಯೋಗ ಆಮಿಷವೊಡ್ಡಿ ಮಹಿಳೆಯರನ್ನು ಪರಿಚಯ ಮಾಡಿಕೊಳ್ಳುತ್ತಿದ್ದ ಆರೋಪಿ, ಹಲವರಿಂದ ಹಣ ಪಡೆದು ವಂಚಿಸಿದ್ದಾನೆ. ಕೆಲವರನ್ನು ಲೈಂಗಿಕವಾಗಿ ಬಳಸಿಕೊಂಡಿದ್ದಾನೆ. ಸದ್ಯ ಯುವತಿಯೊಬ್ಬರೇ ದೂರು ನೀಡಿದ್ದಾರೆ. ಉಳಿದ ಸಂತ್ರಸ್ತೆಯರ ಹೇಳಿಕೆ ಪಡೆಯಲು ಪ್ರಯತ್ನಿಸಲಾಗುತ್ತಿದೆ’ ಎಂದು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.