ಬೆಂಗಳೂರು: ನಗರ ಪೊಲೀಸ್ ಕಮಿಷನರ್ ಬಿ. ದಯಾನಂದ ಅವರು ಸೋಮವಾರ ನಡೆಸಿದ ಸುದ್ದಿಗೋಷ್ಠಿಯ ವಿವರಗಳನ್ನು ಅಂತರರಾಷ್ಟ್ರೀಯ ಸಂಜ್ಞಾ ಭಾಷಾ ದಿನದ ಅಂಗವಾಗಿ ನಿರೂಪಕಿಯೊಬ್ಬರು ಸಂಜ್ಞೆಗಳಲ್ಲಿ ವಿವರಿಸಿದರು.

ಸುದ್ದಿಗೋಷ್ಠಿಯ ಮಾಹಿತಿಗಳನ್ನು ವಿ–ಶೇಷ್ ಸ್ವಯಂ ಸೇವಾ ಸಂಸ್ಥೆಯ ನಿರೂಪಕಿ ಮೋಕ್ಷಾ ಕುಮಾರಿ ಅವರು ಸಂಜ್ಞಾ ಭಾಷೆಯಲ್ಲಿ ವಿವರಿಸಿದರು. ಸಂಜ್ಞಾ ಭಾಷೆಯ ಕುರಿತು ಸ್ವಯಂ ಸೇವಾ ಸಂಸ್ಥೆ ಆಯೋಜಿಸಿದ್ದ ಕಾರ್ಯಾಗಾರದಲ್ಲಿ ನಗರದ ಎಲ್ಲಾ ವಿಭಾಗಗಳ ಡಿಸಿಪಿಗಳು ಸೇರಿದಂತೆ ಹಿರಿಯ ಪೊಲೀಸ್ ಅಧಿಕಾರಿಗಳು ಭಾಗಿಯಾಗಿದ್ದರು.

‘ಜನರ ಜಾತಿ, ಧರ್ಮ, ಲಿಂಗ ಹಾಗೂ ದೈಹಿಕ ನ್ಯೂನತೆಗಳ ಆಧಾರದಲ್ಲಿ ತಾರತಮ್ಯ ಮಾಡದೆ ನಗರದ ಎಲ್ಲ ಜನರನ್ನು ರಕ್ಷಿಸುವ ಜವಾಬ್ದಾರಿ ಪೊಲೀಸ್ ಇಲಾಖೆ ಮೇಲಿದೆ. ಇಲಾಖೆ ನೀಡುವ ಮಾಹಿತಿಗಳು ಎಲ್ಲ ವರ್ಗದ ಜನರನ್ನು ತಲುಪಬೇಕು. ಆ ನಿಟ್ಟಿನಲ್ಲಿ ಎಲ್ಲ ವರ್ಗಗಳ ಜನರ ಅಹವಾಲುಗಳನ್ನು ಅರ್ಥೈಸಿಕೊಳ್ಳುವುದು ಹಾಗೂ ಸಂವಹನ ಸಾಧಿಸುವ ಉದ್ದೇಶದಿಂದ ಅಂತರರಾಷ್ಟ್ರೀಯ ಸಂಜ್ಞಾ ಭಾಷಾ ದಿನದ (ಸೆಪ್ಟೆಂಬರ್ 23) ಕಾರಣ ಈ ಪ್ರಯತ್ನ ಮಾಡಲಾಗಿದೆ’ ಎಂದು ದಯಾನಂದ ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.