ಬೆಂಗಳೂರು: ಬೆಂಗಳೂರು ವಿದ್ಯುತ್ ಸರಬರಾಜು ಕಂಪನಿಯ(ಬೆಸ್ಕಾಂ) ಮಾಹಿತಿ ತಂತ್ರಜ್ಞಾನ ವ್ಯವಸ್ಥೆಯ ಉನ್ನತೀಕರಣದ ಕಾರಣ, ಅಕ್ಟೋಬರ್ 5 ಮತ್ತು 6 ರಂದು ಆನ್ಲೈನ್ ಸೇವೆಗಳು ಲಭ್ಯ ಇರುವುದಿಲ್ಲ ಎಂದು ಬೆಸ್ಕಾಂ ಪ್ರಕಟಣೆ ತಿಳಿಸಿದೆ.

ಐ.ಟಿ. ಅಪ್ಲಿಕೇಷನ್ ಉನ್ನತೀಕರಣಕ್ಕೆ ಸಮಯ ನಿಗದಿಪಡಿಸಿರುವುದರಿಂದ ಐಪಿಡಿಎಸ್ ಐಟಿ ಹಂತ-2ರ ಯೋಜನೆಯ ಭಾಗವಾಗಿ ಆರ್ಎಪಿಡಿಆರ್ಪಿ ಅಪ್ಲಿಕೇಷನ್ ಸೇವೆ ಲಭ್ಯ ಇರುವುದಿಲ್ಲ. ಸಿಸ್ಟಂ ಡೌನ್ಟೈಮ್ ಅ.4ರ ರಾತ್ರಿ 9ರಿಂದ ಆರಂಭವಾಗಿ 7ರ ಬೆಳಿಗ್ಗೆ 6 ಗಂಟೆಗೆ ಕೊನೆಗೊಳ್ಳುತ್ತದೆ. ಅ.7ರಿಂದ ಕಾರ್ಯಾಚರಣೆಗೆ ಮುಕ್ತವಾಗಲಿವೆ ಎಂದು ಮಾಹಿತಿ ನೀಡಿದೆ.

‘30 ಸಾವಿರಕ್ಕಿಂತ ಹೆಚ್ಚು ಜನಸಂಖ್ಯೆ ಹೊಂದಿರುವ ಪಟ್ಟಣಗಳನ್ನು ಒಳಗೊಂಡಿರುವ ರಾಜ್ಯದ ಎಲ್ಲಾ ಎಸ್ಕಾಂಗಳಿಗೆ ಭಾಗ-ಎಐಟಿ ಯೋಜನೆಯ ಅನುಷ್ಠಾನಕ್ಕೆ ಬೆಸ್ಕಾಂ ನೋಡಲ್ ಏಜೆನ್ಸಿಯಾಗಿದೆ. ಹೊಸ ಅಪ್ಲಿಕೇಶನ್ಗಳು ಅಕ್ಟೋಬರ್ 7ರ ಬೆಳಿಗ್ಗೆ 6ಗಂಟೆರೆಗೆ ಕಾರ್ಯನಿರ್ವಹಿಸಿದ ನಂತರ ಅಪ್ಲಿಕೇಶನ್ ದಕ್ಷತೆ ಹೆಚ್ಚಲಿದೆ. ಇದರಿಂದಾಗಿ, ಬಳಕೆದಾರರಿಗೂ ಉತ್ತಮ ಸೇವೆ ಲಭ್ಯವಾಗಲಿದೆ‘ ಎಂದು ಬೆಸ್ಕಾಂ ವ್ಯವಸ್ಥಾಪಕ ನಿರ್ದೇಶಕ ಮಹಾಂತೇಶ್ ಬೀಳಗಿ ತಿಳಿಸಿದ್ದಾರೆ.

ಸ್ಥಗಿತದ ಸಮಯದಲ್ಲಿ ಈ ಸೇವೆಗಳು ಅಲಭ್ಯ:

ಹೊಸ ಸಂಪರ್ಕಗಳ ಪ್ರಕ್ರಿಯೆ, ಹೆಸರು ಮತ್ತು ಸುಂಕ ಬದಲಾವಣೆಗಳು, ಹೆಸರು ವರ್ಗಾವಣೆ ಮತ್ತು ತಾತ್ಕಾಲಿಕ ಸಂಪರ್ಕಗಳಂತಹ ಕಾರ್ಯಾಚರಣೆಗಳಿಗೆ 'ಆರ್ಎಪಿಡಿಆರ್ಪಿ' ಅಪ್ಲಿಕೇಶನ್ ಲಭ್ಯವಿರುವುದಿಲ್ಲ.

ಬೆಸ್ಕಾಂ ನಗದು ಕೌಂಟರ್ಗಳಲ್ಲಿ ಪಾವತಿ ಮಾಡಲು ಸಾಧ್ಯವಾಗುವುದಿಲ್ಲ.

ಹೊಸ ಸಂಪರ್ಕಗಳು, ಹೆಸರು ಮತ್ತು ವಿಳಾಸ ಬದಲಾವಣೆ ಸೇರಿದಂತೆ ಇನ್ನಿತರ ಸೇವೆಗಳಿಗಾಗಿ ಗ್ರಾಹಕ ಪೋರ್ಟಲ್ ಲಭ್ಯವಿರುವುದಿಲ್ಲ.

ಗ್ರಾಹಕ ಪೋರ್ಟಲ್ ಮತ್ತು ಮೂರನೇ ವ್ಯಕ್ತಿ ಪಾವತಿ ಚಾನಲ್ಗಳ ಮೂಲಕ ಆನ್ಲೈನ್ ಬಿಲ್ ಪಾವತಿಗಳು ಅಕ್ಟೋಬರ್ 4ರ ರಾತ್ರಿ 9ರಿಂದ ಅಕ್ಟೋಬರ್ 5ರ ಬೆಳಗ್ಗೆ 11ರವರೆಗೆ ಲಭ್ಯವಿರುವುದಿಲ್ಲ. ಅಕ್ಟೋಬರ್ 5ರ ಬೆಳಗ್ಗೆ 11ರ ನಂತರ ಬಿಲ್ ಪಾವತಿ ಕಾರ್ಯವನ್ನು ಮಾತ್ರ ಪುನರಾರಂಭಿಸಲಾಗುತ್ತದೆ.

'ಆರ್ಎಪಿಡಿಆರ್ಪಿ' ಸೇವೆ ಇಲ್ಲದ ಕಾರಣ, ಮೊಬೈಲ್ ಅಪ್ಲಿಕೇಶನ್ಗಳ ಸೇವೆಯೂ ಅಲಭ್ಯ.

* ಡಬ್ಲ್ಯುಎಎಂಎಸ್ ಮೂಲಕ ವಹಿವಾಟುಗಳನ್ನು ಸ್ಥಗಿತಗೊಳಿಸಲಾಗುತ್ತದೆ.

ಆನ್ಲೈನ್ ಸೇವೆ ಇರದ ನಗರಗಳು:

ಬೆಂಗಳೂರು, ಶಿಡ್ಲಘಟ್ಟ, ಚಿಕ್ಕಬಳ್ಳಾಪುರ, ಕೋಲಾರ, ಚಿಂತಾಮಣಿ, ಕನಕಪುರ, ರಾಮನಗರ, ದಾವಣಗೆರೆ, ಚಿತ್ರದುರ್ಗ, ತುಮಕೂರು, ಶಿರಾ, ಚನ್ನಪಟ್ಟಣ, ಆನೇಕಲ್, ಮುಳುಬಾಗಿಲು, ಬಂಗಾರಪೇಟೆ, ಹೊಸಕೋಟೆ, ದೊಡ್ಡಬಳ್ಳಾಪುರ, ಕೆ.ಜಿ.ಎಫ್, ಚಳ್ಳಕೆರೆ, ಕುಣಿಗಲ್, ಹರಪನಹಳ್ಳಿ, ಹರಿಹರ, ಹಿರಿ ಯೂರು,ತಿಪಟೂರು ಹಾಗೂ ಗೌರಿಬಿದನೂರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.