ಬೆಂಗಳೂರು: ಅಖಿಲ ಭಾರತ ಮಟ್ಟದಲ್ಲಿ ಎಂಜಿನಿಯರಿಂಗ್ ಕೋರ್ಸ್ಗಳ ಪ್ರವೇಶಕ್ಕೆ ನಡೆದಿದ್ದ ಜೆಇಇ ಮೇನ್ (2022) ಪರೀಕ್ಷೆಯಲ್ಲಿ ನಗರದ ಬೊಯಾ ಹರೇನ್ ಸಾತ್ವಿಕ್ ಪೂರ್ಣ (100) ಅಂಕಗಳನ್ನು ಪಡೆದಿದ್ದಾರೆ.

ರಾಷ್ಟ್ರಮಟ್ಟದಲ್ಲಿ 10ನೇ ರ್ಯಾಂಕ್ ಪಡೆದಿರುವ ಸಾತ್ವಿಕ್, ರಾಜ್ಯಕ್ಕೆ ಮೊದಲ ಸ್ಥಾನ ಪಡೆದಿದ್ದಾರೆ. ಜತೆಗೆ,ಸಂಪೂರ್ಣ 100 ಅಂಕಗಳನ್ನು ಪಡೆದಿರುವ ಕರ್ನಾಟಕ ಏಕೈಕ ವಿದ್ಯಾರ್ಥಿಯಾಗಿದ್ದಾರೆ.

ಸಾತ್ವಿಕ್, ಬೆಂಗಳೂರಿನ ಸಹಕಾರ ನಗರದಲ್ಲಿರುವ ‘ನಾರಾಯಣ ಕೊ ಸಿಂಧುಭವನ’ ಶಾಲೆಯ ವಿದ್ಯಾರ್ಥಿಯಾಗಿದ್ದಾರೆ. ಇದೇ ಶಾಲೆಯ ವಿ. ಮಹೇಶ್ಕುಮಾರ್ ಮತ್ತು ಶಿಷಿಕ್ ಆರ್.ಕೆ. ಅವರು ಕ್ರಮವಾಗಿ ಅಖಿಲ ಭಾರತ ಮಟ್ಟದಲ್ಲಿ 47 ಮತ್ತು 56 ರ್ಯಾಂಕ್ಗಳನ್ನು ಪಡೆದಿದ್ದಾರೆ.

ಇವರು ಭಾರತೀಯ ತಂತ್ರಜ್ಞಾನ ಸಂಸ್ಥೆ-ಬಾಂಬೆಯಲ್ಲಿ ಕಂಪ್ಯೂಟರ್ ವಿಜ್ಞಾನ ಅಧ್ಯಯನ ಕೈಗೊಳ್ಳುವ ಅಭಿಲಾಷೆ ಹೊಂದಿದ್ದಾರೆ.

ಸಾತ್ವಿಕ್,ಆಂಧ್ರಪ್ರದೇಶದ ಹಿಂದೂಪುರದವರು. ಇವರ ತಂದೆ ದೈಹಿಕ ಶಿಕ್ಷಣ ಶಿಕ್ಷಕರಾಗಿದ್ದು, ತಾಯಿ ಹಿಂದೂಪುರದಲ್ಲಿ ಶಿಕ್ಷಕಿಯಾಗಿದ್ದಾರೆ.

ಇದನ್ನೂ ಓದಿ:JEE Main 2022 Exam Result: ಸೆಷನ್–2ರ ಫಲಿತಾಂಶ ಪ್ರಕಟ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.