ಬೆಂಗಳೂರು: ‘ಮನೆಯಲ್ಲಿ ಸಾವಾಗುತ್ತದೆ’ ಎಂದು ಹೇಳಿ ಭಯವನ್ನುಂಟು ಮಾಡಿ ಪೂಜೆ ನೆಪದಲ್ಲಿ ಮಹಿಳೆಯೊಬ್ಬರ ಚಿನ್ನಾಭರಣ ಕದ್ದೊಯ್ದಿದ್ದ ಆರೋಪಿ ಆನಂದ್ ಅಲಿಯಾಸ್ ಬುಡಬುಡಕೆ ಕೃಷ್ಣಪ್ಪ (36) ಅವರನ್ನು ಜ್ಞಾನಭಾರತಿ ಠಾಣೆ ಪೊಲೀಸರು ಬಂಧಿಸಿದ್ದಾರೆ.

‘ಹೆಗ್ಗನಹಳ್ಳಿ ನಿವಾಸಿ ಆನಂದ್, ಕೆಪಿಎಸ್‌ಸಿ ಬಡಾವಣೆಯಲ್ಲಿ ನೆಲೆಸಿರುವ ನಿವೃತ್ತ ನೌಕರರೊಬ್ಬರ ಪತ್ನಿಯ ಚಿನ್ನದ ಉಂಗುರ ಹಾಗೂ ಸರ ಕದ್ದೊಯ್ದಿದ್ದ. ಆರೋಪಿಯನ್ನು ಬಂಧಿಸಲಾಗಿದೆ’ ಎಂದು ಪೊಲೀಸರು ಹೇಳಿದರು.

‘ಮಹಿಳೆಯ ಮನೆಯಲ್ಲಿ ವೃದ್ಧರೊಬ್ಬರು ತೀರಿಕೊಂಡಿದ್ದರು. ಅದನ್ನು ಗಮನಿಸಿ ಮನೆಗೆ ಬಂದಿದ್ದ ಆರೋಪಿ, ‘ಈ ಮನೆಯಲ್ಲಿ ಮತ್ತೆ 3 ಸಾವಾಗುತ್ತದೆ. ಪೂಜೆ ಮಾಡಿದರೆ, ಸಾವು ತಡೆಯಬಹುದು’ ಎಂದಿದ್ದ. ಪೂಜೆ ನೆಪದಲ್ಲಿ ಚಿನ್ನಾಭರಣ ಬಿಚ್ಚಿಸಿದ್ದ ಆರೋಪಿ, ಧ್ಯಾನ ಮಾಡುವಂತೆ ಮಹಿಳೆಗೆ ಹೇಳಿ ಪರಾರಿಯಾಗಿದ್ದ’ ಎಂದೂ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.