ದಾಬಸ್ಪೇಟೆ: ಕನ್ನಡಿಗ ರವಿಕುಮಾರ್ ಕೆ. ವೆಂಕಟೇಶ್ ಅವರು ಇಂಗ್ಲೆಂಡ್ನಲ್ಲಿನ ಸ್ಥಳೀಯ ಆಡಳಿತ ಸಂಸ್ಥೆಯಾಗಿರುವ ಪ್ಯಾರಿಸ್ ಕೌನ್ಸಿಲ್ಗೆ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

ಬೆಂಗಳೂರು ಗ್ರಾಮಾಂತರ ಜಿಲ್ಲೆ ಕುದುರಗೆರೆ ಗ್ರಾಮದ ಕೆ.ಆರ್. ವೆಂಕಟೇಶ್ ಮತ್ತು ರಮಾದೇವಿ ಮಗನಾಗಿರುವ ರವಿಕುಮಾರ್ ಎಂಬಿಎ ಪದವಿ ಪಡೆದಿದ್ದು, ಇಂಗ್ಲೆಂಡ್ನಲ್ಲಿ ಐಟಿ ಉದ್ಯೋಗಿಯಾಗಿದ್ದಾರೆ.

ಅಲ್ಲಿ ಕನ್ನಡ ಕಾರ್ಯಕ್ರಮಗಳನ್ನು ಆಯೋಜಿಸುತ್ತಾ, ಅಲ್ಲಿನ ಕನ್ನಡಿಗರಲ್ಲಿ ಭಾಷಾಭಿಮಾನ ಮೂಡಿಸುತ್ತಿದ್ದಾರೆ. ಇವರುಲೇಬರ್ ಪಾರ್ಟಿಯ ಸ್ಥಳೀಯ ಮುಖಂಡರಾಗಿದ್ದಾರೆ.

ರವಿಕುಮಾರ್ ಅವರು ದಾಬಸ್ಪೇಟೆ ಮಾರ್ಗದ ಕಂಬಾಳುವಿನಲ್ಲಿ ಪ್ರಜ್ಞಾ ಜನ್ಯ ಇಂಟರ್ ನ್ಯಾಷನಲ್ ಶಾಲೆಯನ್ನು ಆರಂಭಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.