ಬೆಂಗಳೂರು:ಕರ್ನಾಟಕ ವೈದ್ಯಕೀಯ ಪರಿಷತ್ತಿನ (ಕೆಎಂಸಿ) ಆಡಳಿತ ಮಂಡಳಿಯ ಪದಾಧಿಕಾರಿಗಳ ಆಯ್ಕೆಗೆ ರಾಜ್ಯದ ವಿವಿಧೆಡೆ ಚುನಾವಣೆ ನಡೆದಿದ್ದು, ನಗರದಲ್ಲಿ ಶೇ 20 ರಷ್ಟು ಮತದಾನ ನಡೆದಿದೆ.

ಚುನಾವಣೆಯ ಫಲಿತಾಂಶ ಜ.25ರಂದು ಘೋಷಣೆಯಾಗಲಿದೆ.ಸಹಕಾರ ಸಂಘಗಳ ಜಂಟಿ ನಿಬಂಧಕರ ನೇತೃತ್ವದಲ್ಲಿ ಬೆಂಗಳೂರು, ಮೈಸೂರು, ಬೆಳಗಾವಿ ಹಾಗೂ ಕಲಬುರ್ಗಿ ಒಳಗೊಂಡ ನಾಲ್ಕು ಕಂದಾಯ ವಿಭಾಗಗಳಲ್ಲಿ ಚುನಾವಣೆ ನಡೆಯಿತು.

ಬೆಂಗಳೂರು ವೈದ್ಯಕೀಯ ಕಾಲೇಜು ಮತ್ತು ಸಂಶೋಧನಾ ಸಂಸ್ಥೆ (ಬಿಎಂಸಿಆರ್ಐ) ಸೇರಿದಂತೆ ಆಯಾ ವಿಭಾಗಗಳ ಎಲ್ಲ ಜಿಲ್ಲಾ ಕೇಂದ್ರಗಳಲ್ಲಿ ಮತಗಟ್ಟೆ ಸ್ಥಾಪಿಸಲಾಗಿತ್ತು.ವಿಳಾಸದ ಗೊಂದಲ, ನೋಂದಣಿ ನವೀಕರಣ ಸೇರಿದಂತೆ ನಾನಾ ರೀತಿಯ ಸಮಸ್ಯೆಗಳಿಂದ ಕೆಲ ಮತದಾರರು ಮತದಾನ ಮಾಡದೆಯೇ ಹಿಂದಿರುಗಿದರು.

ಬೆಂಗಳೂರಿನಲ್ಲಿ 19 ವೈದ್ಯರು ಹಾಗೂ 13 ವೈದ್ಯಕೀಯ ಶಿಕ್ಷಕರು ಸೇರಿದಂತೆ ರಾಜ್ಯಾದಾದ್ಯಂತ 67 ಮಂದಿ ಸ್ಫರ್ಧಿಸಿದ್ದರು. ಇವರಲ್ಲಿ 8 ವೈದ್ಯರು ಹಾಗೂ ನಾಲ್ವರು ವೈದ್ಯಕೀಯ ಶಿಕ್ಷಕರನ್ನು (ವೈದ್ಯಕೀಯ ಕಾಲೇಜುಗಳಲ್ಲಿ ಸೇವೆ ಸಲ್ಲಿಸುತ್ತಿರುವವರು) ಆಡಳಿತ
ಮಂಡಳಿ ಪದಾಧಿಕಾರಿಗಳನ್ನಾಗಿ ಚುನಾಯಿಸಲಾಗುವುದು.

ಸರ್ಕಾರ ಐವರು ಸದಸ್ಯರನ್ನು ಪರಿಷತ್ತಿಗೆ ನಾಮ ನಿರ್ದೇಶನ ಮಾಡಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.