ಬೆಂಗಳೂರು: ‘ಯುವ ಜನತೆ ದುಷ್ಚಟಗಳಿಂದ ಅಂತರ ಕಾಯ್ದುಕೊಂಡು ಉತ್ತಮ ಜೀವನ ರೂಪಿಸಿಕೊಳ್ಳಿ’ ಎಂದು ಮಾಜಿ ಕ್ರಿಕೆಟಿಗ ಜಾವಗಲ್ ಶ್ರೀನಾಥ್ ಕರೆ ನೀಡಿದರು.

ಬೆಂಗಳೂರು ನಗರ ಪೊಲೀಸ್ ಇಲಾಖೆ ವೈಟ್‌ಫೀಲ್ಡ್ ಉಪ ವಿಭಾಗದ ವತಿಯಿಂದ ಫಿನಿಕ್ಸ್ ಮಾರ್ಕೆಟ್ ಸಿಟಿಯಲ್ಲಿ ಆಯೋಜಿಸಿದ್ದ ಮಾದಕ ದ್ರವ್ಯ ವ್ಯಸನದ ವಿರುದ್ದದ ಅಭಿಯಾನದಲ್ಲಿ ಅವರು ಮಾತನಾಡಿದರು.

‘ಸಮಾಜದ ದೊಡ್ಡ ಪಿಡುಗಾಗಿರುವ ಮಾದಕ ವ್ಯಸನಗಳಿಂದ ಯುವ ಜನತೆ ದೂರವಿದ್ದು ದೇಶದ ಬೆಳವಣಿಗೆಗೆ ಶ್ರಮಿಸಬೇಕು. ನಾವು ಎಂದಿಗೂ ದುಷ್ಚಟಗಳಿಗೆ ಬಲಿಯಾಗುವುದಿಲ್ಲ' ಎಂಬ ಪ್ರತಿಜ್ಞಾವಿಧಿ ಬೋಧಿಸಿದರು.

ನಂತರ ಮಾತನಾಡಿದ ಶಾಸಕ ಅರವಿಂದ ಲಿಂಬಾವಳಿ ಮಾತನಾಡಿ, ‘ಪಂಜಾಬಿನಲ್ಲಿ ಯುವಕರು ಹೆಚ್ಚು ಮಾದಕ ದ್ರವ್ಯ ವ್ಯಸನಕ್ಕೆ ಒಳಗಾಗುತ್ತಿದ್ದಾರೆ. ಇದು ದೇಶದ ಬೆಳವಣಿಗೆಗೆ ಮಾರಕ. ಇದರ ಹಿಂದೆ ಪಾಕಿಸ್ತಾನದ ಕೈವಾಡವಿದೆ’ ಎಂದು ಹೇಳಿದರು.

‘ಬೆಂಗಳೂರು ನಗರದಲ್ಲಿ ಬಾಂಗ್ಲಾ ಮತ್ತು ದಕ್ಷಿಣ ಅಫ್ರಿಕಾ ಪ್ರಜೆಗಳು ಅಕ್ರಮವಾಗಿ ನೆಲೆಸಿದ್ದು ಇವರು ಹೆಚ್ಚು ಮಾದಕ ದ್ರವ್ಯ ಸಾಗಾಟ ಚಟುವಟಿಕೆಗಳಲ್ಲಿ ತೊಡಗಿದ್ದಾರೆ. ಆದರೆ, ನಾವು ಬೆಂಗಳೂರನ್ನು ಪಂಜಾಬ್ ಮಾಡಲು ಬಿಡುವುದಿಲ್ಲ’ ಎಂದರು.

ನಗರದ ಪೊಲೀಸರು ಡ್ರಗ್ಸ್ ಹಾವಳಿಯನ್ನು ತಡೆಗಟ್ಟಲು ವಿಶೇಷ ಪ್ರಯತ್ನ ಮಾಡುತ್ತಿದ್ದಾರೆ. ಅವರೊಂದಿಗೆ ನಾವು ಕೈಜೋಡಿಸಿ ಡ್ರಗ್ಸ್ ಮಾಫಿಯಾ ನಡೆಸುತ್ತಿರುವವರ ಮಾಹಿತಿಯನ್ನು ಪೊಲಿಸರಿಗೆ ನೀಡುವ ಮೂಲಕ ಈ ಪಿಡುಗಿನ ವಿರುದ್ದ ಹೋರಾಟ ನಡೆಸಬೇಕು’ ಎಂದರು.

ನಗರ ಪೊಲೀಸ್ ಆಯುಕ್ತ ಟಿ. ಸುನಿಲ್ ಕುಮಾರ್ ಮಾತನಾಡಿ, ‘ಯುವ ಜನತೆ ದುಷ್ಚಟಗಳಿಗೆ ದಾಸರಾದರೆ ನಿಮ್ಮನ್ನೇ ನಂಬಿರುವ ನಿಮ್ಮ ಕುಟುಂಬ ಹಾಗೂ ಪೋಷಕರ ಭವಿಷ್ಯ ಏನಾಗಬಹುದು ಎಂದು ಒಮ್ಮೆ ಯೋಚಿಸಿ ದುಷ್ಚಟಗಳಿಂದ ಮುಕ್ತರಾಗಿ’ ಎಂದರು.

ಈ ಜಾಗೃತಿ ಅಭಿಯಾನದ ಅಂಗವಾಗಿ ಅಕರ್ಷಕ ದೇಹಧಾರ್ಢ್ಯ ಪ್ರದರ್ಶನ, ಕೇರಳದ ಕಳರಿಪಟ್ಟು ಸಮರಕಲೆ ಪ್ರದರ್ಶನ ಹಾಗೂ ಮಾದಕ ವ್ಯಸನಗಳ ದುಷ್ಪರಿಣಾಮಗಳ ಕುರಿತು ಬೆಂಗಳೂರು ಪೊಲಿಸರು ನಿರ್ಮಿಸಿರುವ ಕಿರು ಚಿತ್ರ ಪ್ರದರ್ಶಿಸಲಾಯಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.