ಬೆಂಗಳೂರು: ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಹೊಸದಾಗಿ ನಿರ್ಮಿಸಲಾಗಿರುವ ಎರಡನೇ ರನ್ವೇಯಲ್ಲಿ ಶುಕ್ರವಾರ ಸಂಜೆಯಿಂಲೇ ವಿಮಾನಗಳ ಹಾರಾಟ ಶುರುವಾಯಿತು.

ಸದ್ಯದ ರನ್ವೇಗೆ ಸಮಾನಾಂತರವಾಗಿ ಎರಡನೇ ರನ್ವೇ ನಿರ್ಮಿಸಲಾಗಿದೆ. ಸಂಜೆ 4.37ಕ್ಕೆ ಮೊದಲ ಬಾರಿಗೆ ಇಂಡಿಗೊ ವಿಮಾನ ಟೇಕಾಫ್ ಆಯಿತು. ಆ ಮೂಲಕ ರನ್ವೇ ವಿಮಾನಗಳ ಕಾರ್ಯಾಚರಣೆಗೆ ಲಭ್ಯವಾಯಿತು.

‘4 ಕಿ.ಮೀ ಮೀಟರ್ ಉದ್ದ ಮತ್ತು 45 ಮೀಟರ್ ಅಗಲವಿರುವ ಎರಡನೇ ರನ್ವೇಯಲ್ಲಿ ಕಾರ್ಯಾಚರಣೆ ಆರಂಭವಾಗಿದ್ದು ಐತಿಹಾಸಿಕ ದಿನವಾಗಿದೆ’ ಎಂದು ನಿಲ್ದಾಣದ ಕಾರ್ಯನಿರ್ವಾಹಕ ಅಧಿಕಾರಿ ಹರಿ ಮರಾರ್ ಹೇಳಿದರು.

‘11 ವರ್ಷಗಳ ಹಿಂದೆ ಮೊದಲ ರನ್ವೇ ಆರಂಭವಾಗಿತ್ತು. ಭಾರತದಲ್ಲಿ ವಿಮಾನಯಾನ ಉದ್ಯಮ ವೇಗವಾಗಿ ಬೆಳೆಯುತ್ತಿದ್ದು, ಇದೀಗ ಎರಡನೇ ರನ್ವೇ ಶುರುವಾಗಿದೆ. ಇದು ಕರ್ನಾಟಕ ಹಾಗೂ ಭಾರತದ ಅಭಿವೃದ್ಧಿಗೆ ಸಹಕಾರಿಯಾಗಲಿದೆ’ ಎಂದರು.

’ಅತ್ಯಾಧುನಿಕ ಸೌಲಭ್ಯವನ್ನು ಈ ರನ್ವೇ ಹೊಂದಿದೆ. ಮಂಜು ಕವಿದ ವಾತಾವರಣದ ಸಂದರ್ಭದಲ್ಲೂ ಈ ರನ್ವೇಯಲ್ಲಿ ವಿಮಾನಗಳ ಕಾರ್ಯಾಚರಣೆ ನಡೆಸಬಹುದಾಗಿದೆ. ಇದರಿಂದ ವಿಮಾನಗಳ ಹಾರಾಟದಲ್ಲಿ ವ್ಯತ್ಯಯವಾಗುವುದು ತಪ್ಪಲಿದೆ’ ಎಂದು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.