ಬೆಂಗಳೂರು: ಕೋವಿಡ್ ಪರೀಕ್ಷೆಯ ನಕಲಿ ವರದಿ ಹಾಗೂ ನಕಲಿ ವೀಸಾ ತಯಾರಿಸಿ ಕೊಡುತ್ತಿದ್ದ ಆರೋಪದಡಿ ನಿಪುಣ್ ಎಂಬಾತನನ್ನು ಹುಳಿಮಾವು ಪೊಲೀಸರು ಬಂಧಿಸಿದ್ದಾರೆ.

'ಕೇರಳದ ನಿಪುಣ್, ಪಿಯುಸಿವರೆಗೂ ಓದಿದ್ದಾನೆ. ಕೆಲ ವರ್ಷಗಳ ಹಿಂದೆ ನಗರಕ್ಕೆ ಬಂದಿದ್ದ. ಕಾಲೇಜುಗಳಲ್ಲಿ ವಿದ್ಯಾರ್ಥಿಗಳಿಗೆ ಸೀಟು ಕೊಡಿಸುವ ಮಧ್ಯವರ್ತಿ ಕೆಲಸ ಮಾಡುತ್ತಿದ್ದ. ಲಾಕ್‌ಡೌನ್‌ನಲ್ಲಿ ಕೆಲಸವಿರಲಿಲ್ಲ. ಅವಾಗಲೇ ನಕಲಿ ವರದಿ ಹಾಗೂ ನಕಲಿ ವೀಸಾ ತಯಾರಿಸಿ ಮಾರಲಾರಂಭಿಸಿದ್ದ' ಎಂದು ಪೊಲೀಸರು ಹೇಳಿದರು.

'ಗ್ರಾಹಕರನ್ನು ಫೇಸ್‌ಬುಕ್ ಮೂಲಕ ಸಂಪರ್ಕಿಸುತ್ತಿದ್ದ ಆರೋಪಿ, ವಾಟ್ಸ್‌ಆ್ಯಪ್ ಮೂಲಕ ಮಾಹಿತಿ ಪಡೆದು ವರದಿ ತಯಾರಿಸುತ್ತಿದ್ದ. ಆನ್‌ಲೈನ್ ಮೂಲಕ ಹಣ ಪಡೆದು ವರದಿಯನ್ನುಗ್ರಾಹಕರ ಕೈಗೆ ತಲುಪಿಸುತ್ತಿದ್ದ.ಕೋವಿಡ್ ನಕಲಿ ವರದಿಗೆ ₹2,000-₹5,000 ಪಡೆಯುತ್ತಿದ್ದ. ನಕಲಿ ವೀಸಾಗೆ ₹25 ಸಾವಿರದಿಂದ ಲಕ್ಷದವರೆಗೂ ಹಣ ಪಡೆಯುತ್ತಿದ್ದ' ಎಂದೂ ಪೊಲೀಸರು ತಿಳಿಸಿದರು.

'ಆರೋಪಿ ಕಡೆಯಿಂದ ಲ್ಯಾಪ್‌ಟಾಪ್, ಮುದ್ರಣ ಯಂತ್ರ ಹಾಗೂ ನಕಲಿ ವರದಿಗಳನ್ನು ಜಪ್ತಿ ಮಾಡಲಾಗಿದೆ' ಎಂದರು.

ಪ್ರಶಾಂತ್ ಕಿಶೋರ್ ಕಾಂಗ್ರೆಸ್ಗೆ ಸೇರ್ಪಡೆ ಕುರಿತು ಸೋನಿಯಾ ಗಾಂಧಿ ಅಂತಿಮ ನಿರ್ಧಾರ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್‌ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.