ಬೆಂಗಳೂರು: ಕಲೆ, ವೇಷ ಭೂಷಣ, ಆಹಾರ, ಸಾಹಿತ್ಯ ಸೇರಿ ನಾಡಿನ ಹಲವು ವೈವಿಧ್ಯಗಳನ್ನು ಒಂದೇ ಸೂರಿನಡಿ ತಂದ ಅಜೀಂ ಪ್ರೇಮ್ಜಿ ವಿಶ್ವವಿದ್ಯಾಲಯ, ‘ಕೃಷ್ಣೆಯಿಂದ ಕಾವೇರಿವರೆಗೆ’ ಶೀರ್ಷಿಕೆಯಡಿ ದೊಮ್ಮಲೂರಿನಲ್ಲಿರುವ ಬೆಂಗಳೂರು ಅಂತರರಾಷ್ಟ್ರೀಯ ಕೇಂದ್ರದಲ್ಲಿ (ಬಿಐಸಿ) ಹಮ್ಮಿಕೊಂಡ ಉತ್ಸವವು ಇಲ್ಲಿನ ಸಂಸ್ಕೃತಿ, ಪರಂಪರೆಯನ್ನು ಪರಿಚಯಿಸಿತು.

ಕರ್ನಾಟಕ ರಾಜ್ಯೋತ್ಸವದ ಪ್ರಯುಕ್ತ ಬಿಐಸಿ ಸಹಯೋಗದಲ್ಲಿ ವಿಶ್ವವಿದ್ಯಾಲಯವು ಹಮ್ಮಿಕೊಂಡಿದ್ದ ಉತ್ಸವಕ್ಕೆ ಚಲನಚಿತ್ರ ನಿರ್ದೇಶಕ ಟಿ.ಎಸ್. ನಾಗಾಭರಣ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ನಿರ್ದೇಶಕಿ ಧರಣೀದೇವಿ ಮಾಲಗತ್ತಿ ಚಾಲನೆ ನೀಡಿದರು. ಇದಕ್ಕೆ ಮುನ್ನ ಕೊಡವ ನೃತ್ಯ, ಡೊಳ್ಳು ಕುಣಿತ, ಗೊರವರ ಕುಣಿತ ಸೇರಿ ವಿವಿಧ ಜಾನಪದ ತಂಡಗಳ ಮೆರವಣಿಗೆ ಉತ್ಸವಕ್ಕೆ ಮೆರುಗು ತಂದಿತು.

ಬಿಐಸಿ ಪ್ರವೇಶ ದ್ವಾರದಲ್ಲಿ ಇರಿಸಲಾಗಿದ್ದ ಜಾನಪದ ಕಲಾವಿದರ ಬೃಹತ್ ಪ್ರತಿಕೃತಿಗಳು, ಕಲೆ, ಸಂಸ್ಕೃತಿ ಮತ್ತು ಇತಿಹಾಸದ ದರ್ಶನ ಮಾಡಿಸುವ ಕಲಾಕೃತಿಗಳು ಕರ್ನಾಟಕ ದರ್ಶನಕ್ಕೆ ಕೈಬೀಸಿ ಕರೆಯುತ್ತಿದ್ದವು. ನೆಲ ಮಹಡಿಯಲ್ಲಿ ಇರಿಸಲಾಗಿದ್ದ ಕಸೂತಿ ಹಾಗೂ ಕರಕುಶಲ ವಸ್ತುಗಳು ಗಮನ ಸೆಳೆದವು. ಕುವೆಂಪು ಅವರು ಗಾಂಭೀರ್ಯದಲ್ಲಿ ಕುಳಿತಿದ್ದ ಕಲಾಕೃತಿಯೂ ಆಕರ್ಷಣೆಯ ಕೇಂದ್ರ ಬಿಂದುವಾಗಿತ್ತು.

ಗಾಯನ, ಪ್ರದರ್ಶನ: ‘ಸಂಗೀತ ಗಂಗಾ ಕಾವೇರಿ’ ಶೀರ್ಷಿಕೆಯಡಿ ನಡೆದ ಕಾರ್ಯಕ್ರಮದಲ್ಲಿ ಹಿಂದೂಸ್ತಾನಿ ಸಂಗೀತದ ಬಗ್ಗೆ ಹಿಂದೂಸ್ತಾನಿ ಗಾಯಕ ನಾಗರಾಜರಾವ್ ಹವಾಲ್ದಾರ್ ಅವರು ಉಪನ್ಯಾಸ ಹಾಗೂ ಪ್ರಾತ್ಯಕ್ಷಿಕೆ ನೀಡಿದರು.

ವಿಮರ್ಶಕ ರಾಜೇಂದ್ರ ಚೆನ್ನಿ ಹಾಗೂ ಪತ್ರಕರ್ತ ವಿಕಾರ್ ಅಹ್ಮದ್ ಸೈಯದ್ ಅವರು ಕರ್ನಾಟಕ ರಾಜ್ಯ ಉಗಮದ ಕಥೆಯನ್ನು ವಿವರಿಸಿದರು. ಚಿತ್ತಾರ ಕಲಾ ಕಾರ್ಯಾಗಾರ, ಕಸೂತಿ ಕಲಾ ಶಿಬಿರಗಳಲ್ಲಿ ಕಲಾಸಕ್ತರು ಉತ್ಸಾಹದಿಂದ ಪಾಲ್ಗೊಂಡಿದ್ದರು.

ರಂಗಗೀತೆ, ಡೊಳ್ಳು ಕುಣಿತ, ‘ಅದ್ಭುತ ರಾಮಾಯಣ’ ತೊಗಲು ಬೊಂಬೆಯಾಟ, ಕರ್ನಾಟಕದ ಜಾನಪದ ಪರಂಪರೆ ಪ್ರತಿನಿಧಿಸುವ ‘ಸಂಗಮಂ ಹಬ್ಬ’ ಸಾಂಸ್ಕೃತಿಕ ಕಾರ್ಯಕ್ರಮ ಹಾಗೂ ಹಾಸ್ಯ ಕಾರ್ಯಕ್ರಮಗಳು ನೆರದಿದ್ದವರನ್ನು ರಂಜಿಸಿದವು.

‘ಮಲೆನಾಡಿನ ಹುಲಿ, ಚಿರತೆಗಳ ಜಾಡಿನಲ್ಲಿ’ ಶೀರ್ಷಿಕೆಯಡಿ ನಡೆದ ಕಾರ್ಯಕ್ರಮದಲ್ಲಿ ಉಲ್ಲಾಸ ಕಾರಂತ ಅವರು ಆರು ದಶಕಗಳ ಅನುಭವ ಹಂಚಿಕೊಂಡರು. ‘ಚಾಂಪಿಯನ್ಗಳ ಕೂಟ’ ಶೀರ್ಷಿಕೆಯಡಿ ನಡೆದ ಕಾರ್ಯಕ್ರಮದಲ್ಲಿ ಕರ್ನಾಟಕದ ಕ್ರೀಡಾ ಭವಿಷ್ಯದ ಬಗ್ಗೆ ಚರ್ಚಿಸಲಾಯಿತು. ಕರ್ನಾಟಕದ ವಿವಿಧ ಭಾಗಗಳ ಆಹಾರಗಳೂ ಉತ್ಸವದಲ್ಲಿ ಇದ್ದವು.

‘ಹಲವು ಕಲೆಗಳ ಸಮ್ಮಿಳನ’

ಕರ್ನಾಟಕವು ಹಲವು ‘ವೈವಿಧ್ಯ’ಗಳನ್ನು ಒಳಗೊಂಡ ನಾಡು. 180 ಕಲಾ ಪ್ರಕಾರಗಳನ್ನು ಇಲ್ಲಿ ಕಾಣಬಹುದಾಗಿದೆ. ಒಂದು ಭಾಗದಿಂದ ಇನ್ನೊಂದು ಭಾಗಕ್ಕೆ ಭೌಗೋಳಿಕದ ಜತೆಗೆ ಜೀವನ ಕ್ರಮದಲ್ಲಿಯೂ ವ್ಯತ್ಯಾಸ ಕಾಣಬಹುದು. ಕಲೆಗಳನ್ನು ಒಗ್ಗೂಡಿಸಲು ಹಾಗೂ ಅವುಗಳ ಶಕ್ತಿ ಪ್ರದರ್ಶಿಸಲು ವೇದಿಕೆಗಳು ಅಗತ್ಯ. ಸರ್ಕಾರಗಳ ಜತೆಗೆ ಸಂಘ–ಸಂಸ್ಥೆಗಳೂ ಕಲೆಗಳಿಗೆ ಪ್ರೋತ್ಸಾಹ ನೀಡಬೇಕು. ಟಿ.ಎಸ್. ನಾಗಾಭರಣ ಚಲನಚಿತ್ರ ನಿರ್ದೇಶಕ ‘ಭಾಷೆಯ ಬಗ್ಗೆ ಕೀಳರಿಮೆ ಬೇಡ’ ಮಾಸ್ತಿ ವೆಂಕಟೇಶ ಅಯ್ಯಂಗಾರ್ ದ.ರಾ. ಬೇಂದ್ರೆ ಗೋವಿಂದ ಪೈ ಸೇರಿ ಹಲವು ಅನ್ಯಭಾಷಿಕರು ಕನ್ನಡಕ್ಕೆ ಕೊಡುಗೆ ನೀಡಿದ್ದಾರೆ. ಭಾಷೆಗೆ ಎಲ್ಲೆ ಮಿತಿ ಎಂಬುದು ಇಲ್ಲ. ಬೇರೆ ಪ್ರದೇಶದವರು ಇಲ್ಲಿಗೆ ಬಂದು ವೃತ್ತಿ ಮಾಡಿ ಕನ್ನಡ ಭಾಷೆ ಕಲಿಯಬೇಕು. ಇಲ್ಲಿಯವರಿಗೆ ಕನ್ನಡ ಭಾಷೆಯ ಬಗೆಗಿನ ಕೀಳರಿಮೆ ಹೋಗಬೇಕು. ಕನ್ನಡದ ಜತೆಗೆ ಇಂಗ್ಲಿಷ್ ಬೆರೆಸಿ ಮಾತನಾಡಿದರೆ ಸಾಕಷ್ಟು ಕಲಿತವರು ಅಂದುಕೊಳ್ಳುತ್ತಾರೆ ಎಂಬ ಮನೋಭಾವವೂ ತೊಲಗಬೇಕು. ಧರಣೀದೇವಿ ಮಾಲಗತ್ತಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ನಿರ್ದೇಶಕಿ

ಜಿಐ ಟ್ಯಾಗ್ ಉತ್ಪನ್ನ ಪ್ರದರ್ಶನ

ಉತ್ಸವದಲ್ಲಿ ಭೌಗೋಳಿಕ ಮಾನ್ಯತೆ (ಜಿಐ ಟ್ಯಾಗ್) ಪಡೆದ ಉತ್ಪನ್ನ ಹಾಗೂ ವಸ್ತುಗಳನ್ನು ಪ್ರದರ್ಶಿಸಲಾಗಿದೆ. ಧಾರವಾಡ ಪೇಡ ಇಳಕಲ್ ಸೀರೆ ಮೈಸೂರು ವೀಳ್ಯದೆಲೆ ಶಿರಸಿಯ ಅಡಿಕೆ ಚನ್ನಪಟ್ಟಣದ ಆಟಿಕೆ ಹಡಗಲಿ ಮಲ್ಲಿಗೆ ಸೇರಿ ಜಿಐ ಟ್ಯಾಗ್ ಪಡೆದ ರಾಜ್ಯದ 48 ಉತ್ಪನ್ನ ವಸ್ತುಗಳಿದ್ದವು. ಕರ್ನಾಟಕದ ಸ್ಮಾರಕಗಳ ಛಾಯಾಚಿತ್ರ ಪದರ್ಶನ ರಾಜ್ಯವನ್ನಾಳಿದ ರಾಜಮನೆತನದ ಲಾಂಛನಗಳ ಮಾದರಿಯನ್ನೂ ಪ್ರದರ್ಶನದಲ್ಲಿ ಇರಿಸಲಾಗಿತ್ತು.

ಉತ್ಸವದಲ್ಲಿ ಇಂದು

ಉತ್ಸವದ ಎರಡನೇ ದಿನವಾದ ಭಾನುವಾರ ಬೆಳಿಗ್ಗೆ 11 ಗಂಟೆಯಿಂದ ರಾತ್ರಿ 8 ಗಂಟೆಯವರೆಗೆ ವಿವಿಧ ಕಾರ್ಯಕ್ರಮಗಳು ನಡೆಯಲಿವೆ. ಕಲಾಕೃತಿಗಳ ವಿಶೇಷ ಪ್ರದರ್ಶನವೂ ಇರಲಿದೆ. 11 ಗಂಟೆಗೆ ಗಾನ ಸೌರಭ ತಂಡವು ‘ಅಭಿಮನ್ಯು ಕಾಳಗ’ ಯಕ್ಷಗಾನ ಪ್ರಸ್ತುತಪಡಿಸಲಿದೆ. ನಂತರ ಅಡುಗೆಗಳ ಪ್ರಾತ್ಯಕ್ಷಿಕೆ ಪುಸ್ತಕಗಳ ಬಿಡುಗಡೆ ಅಡುಗೆ ಕುರಿತು ಮಾತುಕತೆ ಕೌದಿ ಕಲೆಯ ಕಾರ್ಯಾಗಾರ ‘ಕನ್ನಡ ಪ್ರಜ್ಞೆಯ ವಿಕಾಸ ಮತ್ತು ಜ್ಞಾನಪೀಠ ಪುರಸ್ಕೃತರು’ ವಿಷಯದ ಬಗ್ಗೆ ಚರ್ಚೆ ಫ್ಯೂಶನ್ ಸಂಗೀತ ಕಛೇರಿ ಸೇರಿ ಹಲವು ಕಾರ್ಯಕ್ರಮಗಳು ನಡೆಯಲಿವೆ. ಸಾರ್ವಜನಿಕರಿಗೆ ಪ್ರವೇಶ ಉಚಿತ ಇರಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.