ಬೆಂಗಳೂರು: ‘ನಾನು ಲವ್ ಜಿಹಾದ್ ಸಂತ್ರಸ್ತೆ. ನನ್ನ ಜೀವಕ್ಕೆ ಅಪಾಯವಿದೆ’ ಎಂಬುದಾಗಿ ಯುವತಿಯೊಬ್ಬರು ಪೋಸ್ಟ್ ಪ್ರಕಟಿಸಿದ್ದು, ಈ ಪ್ರಕರಣದ ಬಗ್ಗೆ ಬೆಳ್ಳಂದೂರು ಠಾಣೆ ಪೊಲೀಸರು ಮಾಹಿತಿ ಕಲೆ ಹಾಕುತ್ತಿದ್ದಾರೆ.

ಸಾಮಾಜಿಕ ಮಾಧ್ಯಮದ ‘ಎಕ್ಸ್ (ಟ್ವಿಟರ್)’ನಲ್ಲಿರುವ ‘ಗುಪ್ತ ಭಾರತ’ ಹೆಸರಿನ ಖಾತೆಯಲ್ಲಿ ಪೋಸ್ಟ್ ಪ್ರಕಟಿಸಲಾಗಿದೆ. ಪ್ರಧಾನ ಮಂತ್ರಿ, ಬೆಂಗಳೂರು ಪೊಲೀಸ್ ಕಮಿಷನರ್ ಹಾಗೂ ಡಿಜಿ– ಐಜಿಪಿ ಅವರಿಗೆ ಟ್ಯಾಗ್ ಮಾಡಲಾಗಿದೆ.

‘ನನ್ನ ಮೇಲೆ ಅತ್ಯಾಚಾರ ಎಸಗಲಾಗಿದೆ. ಒತ್ತಾಯದಿಂದ ಮತಾಂತರ ಮಾಡಲಾಗಿದೆ. ಜೀವಕ್ಕೆ ಅಪಾಯವಿರುವುದರಿಂದ, ಬೆಂಗಳೂರು ಪೊಲೀಸರು ನನಗೆ ರಕ್ಷಣೆ ನೀಡಬೇಕು’ ಎಂದು ಯುವತಿ ಬರೆದುಕೊಂಡಿದ್ದಾರೆ.

‘ಸಾಮಾಜಿಕ ಮಾಧ್ಯಮದ ಮೂಲಕ ಕಾಶ್ಮೀರದ ಯುವಕನೊಬ್ಬನ ಪರಿಚಯವಾಗಿತ್ತು. ಮದುವೆಯಾಗುವುದಾಗಿ ನಂಬಿಸಿದ್ದ ಆತ, ಹಣ ಪಡೆದಿದ್ದ. ಅತ್ಯಾಚಾರ ಎಸಗಿದ್ದ. ಇದೀಗ, ಪ್ರಾಣ ಬೆದರಿಕೆಯೊಡ್ಡುತ್ತಿದ್ದಾನೆ’ ಎಂದೂ ಹೇಳಿಕೊಂಡಿದ್ದಾರೆ.

ಪೋಸ್ಟ್ ಗಮನಿಸಿದ್ದ ಪೊಲೀಸರು, ಯುವತಿ ಯಾರು ಎಂಬುದನ್ನು ಪತ್ತೆ ಮಾಡುತ್ತಿದ್ದಾರೆ.

ಈ ಬಗ್ಗೆ ಪ್ರತಿಕ್ರಿಯಿಸಿರುವ ಪೊಲೀಸ್ ಅಧಿಕಾರಿಯೊಬ್ಬರು, ‘ಯುವತಿ ಹೆಸರು ಹಾಗೂ ವಿಳಾಸ ಗೊತ್ತಾಗಿಲ್ಲ. ಯುವತಿಯನ್ನು ಪತ್ತೆ ಮಾಡಿ, ಆರೋಪದ ಬಗ್ಗೆ ದೂರು ಪಡೆಯಲು ಪ್ರಯತ್ನಿಸಲಾಗುವುದು. ದೂರು ನೀಡಿದ ಬಳಿಕವೇ ಮುಂದಿನ ಕ್ರಮ’ ಎಂದಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.