ಕೆ.ಆರ್.ಪುರ: ಶಾಸಕ ಅರವಿಂದ ಲಿಂಬಾವಳಿ ಹುಟ್ಟು ಹಬ್ಬದ ಅಂಗವಾಗಿ ಕ್ಷೇತ್ರದ ವಿವಿಧೆಡೆ 109 ಸೇವಾ ಕಾರ್ಯಗಳು ನಡೆದವು.

ಜ್ಯೋತಿಪುರ ಗ್ರಾಮದ ಜ್ಯೋತಿಲಿಂಗೇಶ್ವರ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿ ಸೇವಾ ಕಾರ್ಯಗಳಿಗೆ ಶಾಸಕ ಅರವಿಂದ ಲಿಂಬಾವಳಿ ಚಾಲನೆ ನೀಡಿದರು.

ವೈಟ್ಫೀಲ್ಡ್ನ ಇನ್ನರ್ ಸರ್ಕಲ್ನಲ್ಲಿ ನೇತ್ರದಾನ ಶಿಬಿರಕ್ಕೆ ಚಾಲನೆ ನೀಡಿದರು. ಹೊಸೂರು ಬಂಡೆಯ ಗೋಶಾಲೆಯ ಗೋವುಗಳಿಗೆ ಮೇವು, ಬೆಲ್ಲ ನೀಡಿದರು. ಗೋಶಾಲೆಗೆ ಶಾಸಕರು ವೈಯಕ್ತಿಕವಾಗಿ ₹5 ಲಕ್ಷ ನೀಡಿದರು. ದೊಡ್ಡಗುಬ್ಬಿ ಗ್ರಾಮದ ಅಕ್ಸೆಪ್ಟ್ ಎಚ್ಐವಿ ಸೋಂಕಿತರ ಆಶ್ರಮಕ್ಕೆ ಭೇಟಿ ನೀಡಿ ಸಿಹಿ ಹಂಚಿದರು.

ಚಿಕ್ಕಗುಬ್ಬಿಯಲ್ಲಿರುವ ಎಐಆರ್ ಹ್ಯುಮಾನಿಟಿರೈನ್ ಆಶ್ರಮಕ್ಕೆ ಭೇಟಿ ನೀಡಿ ಹಣ್ಣು ಹಂಪಲು ವಿತರಣೆ ಮಾಡಿದರು. ಕ್ಷೇತ್ರದ ಹಲವೆಡೆ ಸ್ವಚ್ಚತಾ ಕಾರ್ಯ, ಸ್ವಯಂ ಪ್ರೇರಿತ ರಕ್ತದಾನ ಶಿಬಿರಗಳು, ವೃದ್ಧರಿಗೆ ಕಂಬಳಿ, ಬಡ ಮಹಿಳೆಯರಿಗೆ ಸೀರೆ, ನಿರ್ಗತಿಕರಿಗೆ ಹಾಲು, ಹಣ್ಣು ವಿತರಣೆ ಸೇರಿ ಅನೇಕ ಕಾರ್ಯಕ್ರಮಗಳನ್ನು ಬಿಜೆಪಿ ಮುಖಂಡರು ನಡೆಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.