ಬೆಂಗಳೂರು: ಪಾನಮತ್ತನಾಗಿ ಮನೆಗೆ ಬಂದು ತಾಯಿ ಮೇಲೆ ಹಲ್ಲೆ ನಡೆಸಿದ ವಿನೋದ್ (25) ಎಂಬಾತನನ್ನು ಆತನ ತಮ್ಮ ಚಾಕುವಿನಿಂದ ಇರಿದು ಕೊಲೆ ಮಾಡಿದ್ದಾನೆ.

ಚುಂಚಘಟ್ಟದಲ್ಲಿ ಶುಕ್ರವಾರ ನಸುಕಿನ ವೇಳೆ (4 ಗಂಟೆ ಸುಮಾರಿಗೆ) ಈ ಘಟನೆ ನಡೆದಿದ್ದು, ಕೋಣನಕುಂಟೆ ಪೊಲೀಸರು ಆರೋಪಿ ಸಂಜಯ್ನನ್ನು ಬಂಧಿಸಿದ್ದಾರೆ.

ಈ ಸೋದರರು ತಾಯಿ ಜತೆ ಚುಂಚಘಟ್ಟದಲ್ಲಿ ನೆಲೆಸಿದ್ದರು.ಸಂಜಯ್ ಕಾಲ್ಸೆಂಟರ್ ಉದ್ಯೋಗಿಯಾಗಿದ್ದರೆ, ವಿನೋದ್ ಎಲೆಕ್ಟ್ರಾನಿಕ್ ಉಪಕರಣಗಳ ರಿಪೇರಿ ಅಂಗಡಿ ಇಟ್ಟುಕೊಂಡಿದ್ದ.

ಮದ್ಯವ್ಯಸನಿಯಾದ ವಿನೋದ್, ಗುರುವಾರ ರಾತ್ರಿಯೂ ಪಾನಮತ್ತನಾಗಿ ಮನೆಗೆ ಬಂದಿದ್ದ. ನಸುಕಿನವರೆಗೂ ಮನೆಯಲ್ಲಿ ಗಲಾಟೆ ಮಾಡಿದ್ದ ಆತ, ಬುದ್ಧಿ ಹೇಳಲು ಬಂದ ತಾಯಿ ಮೇಲೆ ಹಲ್ಲೆ ನಡೆಸಿದ್ದ. ಇದರಿಂದ ಕೆರಳಿದ ಸಂಜಯ್, ತರಕಾರಿ ಕತ್ತರಿಸಲು ಇಟ್ಟಿದ್ದ ಚಾಕು ತಂದು ಹೊಟ್ಟೆಗೆ ಇರಿದಿದ್ದ. ಕುಸಿದು ಬಿದ್ದ ಅಣ್ಣನನ್ನು ತಾನೇ ಆಸ್ಪತ್ರೆಗೆ ಕರೆದೊಯ್ದನಾದರೂ, ಮಾರ್ಗಮಧ್ಯೆಯೇ ವಿನೋದ್ ಕೊನೆಯುಸಿರೆಳೆದಿದ್ದ ಎಂದು ಪೊಲೀಸರು ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.