ಬೆಂಗಳೂರು: ಸಂಸದ ತೇಜಸ್ವಿ ಸೂರ್ಯ ಅವರು ಇಂದು ನಡೆದ ನಾಗಸಂದ್ರ–ಮಾದಾವರ ಮೆಟ್ರೊ ರೈಲಿನ ಪ್ರಾಯೋಗಿಕ ಸಂಚಾರವನ್ನು ಪರಿಶೀಲಿಸಿದರು.

ಈ ವೇಳೆ ಅವರು ಬಸವನಗುಡಿಯಿಂದ ಯಶವಂತಪುರಕ್ಕೆ ಮೆಟ್ರೊ ರೈಲಿನಲ್ಲಿ ತೆರಳಿದ್ದು ವಿಶೇಷವಾಗಿತ್ತು. ಯಶವಂತಪುರದಲ್ಲಿ ಇಳಿದು ಅಲ್ಲಿಂದ ಡಿ.ಕೆ ಶಿವಕುಮಾರ್ ಜೊತೆಯಾಗಿ ನಾಗಸಂದ್ರಕ್ಕೆ ಮೆಟ್ರೊದಲ್ಲಿ ತೆರಳಿದರು.

ಈ ವೇಳೆ ವಿಡಿಯೊ ಸಂದೇಶ ಹಂಚಿಕೊಂಡ ತೇಜಸ್ವಿ ಸೂರ್ಯ ಅವರು ಬೆಂಗಳೂರು ಟ್ರಾಫಿಕ್ ಸಮಸ್ಯೆಗೆ ಮೆಟ್ರೊ ರಾಮಬಾಣ ಎಂದರು.

ಪ್ರಾಯೋಗಿಕ ಸಂಚಾರ ನೋಡಲು ನಾಗಸಂದ್ರಕ್ಕೆ ಡಿಸಿಎಂ ಅವರು ರಸ್ತೆ ಮೂಲಕ ಬರುತ್ತಿದ್ದಾರೆ. ಅವರು ಬೇಗ ಬರುತ್ತಾರೋ?, ಮೆಟ್ರೊದಲ್ಲಿ ನಾನು ಬೇಗ ಹೋಗುತ್ತೇನೋ? ಎಂದು ಹೇಳಿ ಗಮನ ಸೆಳೆದರು.

ಮೋದಿ ಅವರ ಸೂಚನೆ ಮೇರೆಗೆ ಯಾವುದೇ ಔಪಚಾರಿಕ ಕಾರ್ಯಕ್ರಮವಿಲ್ಲದೇ ಮೆಟ್ರೊ ಸಂಚಾರ ನಾಳೆಯಿಂದ ಆರಂಭವಾಗುತ್ತಿದೆ. ಜನ ಇದಕ್ಕಾಗಿ ಕಾಯುತ್ತಿದ್ದರು ಎಂದು ಹೇಳಿದ್ದಾರೆ.

ನಮ್ಮ ಮೆಟ್ರೊದ ಹಸಿರು ಮಾರ್ಗದ ವಿಸ್ತರಿತ ಮಾರ್ಗವಾದ ನಾಗಸಂದ್ರ–ಮಾದಾವರದಲ್ಲಿ ರೈಲುಗಳ ವಾಣಿಜ್ಯ ಸಂಚಾರಕ್ಕೆ ಕ್ಷಣಗಣನೆ ಶುರುವಾಗಿದೆ. ‘ಉದ್ಘಾಟನೆ’ ಎಂಬ ಯಾವುದೇ ಔಪಚಾರಿಕ ಕಾರ್ಯಕ್ರಮವಿಲ್ಲದೇ ಸಂಚಾರ ಆರಂಭವಾಗುತ್ತಿದೆ.

ನಾಳೆ ನವೆಂಬರ್ 6ರಂದು ಬೆಳಿಗ್ಗೆ 5ರಿಂದಲೇ ವಾಣಿಜ್ಯ ಸಂಚಾರ ಆರಂಭವಾಗಲಿದೆ. 10 ನಿಮಿಷಕ್ಕೊಂದು ರೈಲು ಸಂಚಾರ ಇರಲಿದೆ.
.ನಾಗಸಂದ್ರ–ಮಾದಾವರ ಮೆಟ್ರೊ: ಸದ್ಯದಲ್ಲೇ ಅಧಿಕೃತ ಉದ್ಘಾಟನೆ ಎಂದ ಡಿಕೆಶಿ.Namma Metro | ನಾಳೆಯಿಂದ ನಾಗಸಂದ್ರ–ಮಾದಾವರ ಮೆಟ್ರೊ ಸಂಚಾರ: ಟಿಕೆಟ್ ದರ ಎಷ್ಟು?.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.