ಬೆಂಗಳೂರು: ಮೊದಲ ಬಾರಿಗೆ ನಗರದ ನಾರಾಯಣ ಹೆಲ್ತ್ ಸಿಟಿ ವೈದ್ಯರು ಯಶಸ್ವಿಯಾಗಿ ಅವಳಿ ಕೈಗಳನ್ನು ಕಸಿ ಮಾಡಿದ್ದಾರೆ.

ಪುದುಚೇರಿಯ ಜೆಐಪಿಎಂಇಆರ್ ಸಂಸ್ಥೆಯ ಜೊತೆಗೂಡಿ ಕೈಗಳನ್ನು ಜೋಡಿಸುವಲ್ಲಿ ವೈದ್ಯರ ತಂಡ ಯಶಸ್ವಿಯಾಗಿದೆ. ಚಿಲ್ಲರೆ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದ 22 ವರ್ಷದ ಆನೇಕಲ್‌ನ ಯುವಕನ ಮಿದುಳು ನಿಷ್ಕ್ರಿಯಗೊಂಡಿದೆ ಎಂದು ವೈದ್ಯರು ಭಾನುವಾರ ಘೋಷಿಸಿದ್ದರು. ಪೋಷಕರ ಒಪ್ಪಿಗೆ ಪಡೆದು ಯುವಕನ, ಹೃದಯದ ಕವಾಟಗಳು, ಶ್ವಾಸಕೋಶ, ಯಕೃತ್, ಮೂತ್ರಪಿಂಡ, ಕಣ್ಣ ಮತ್ತು ಕೈಗಳನ್ನು ದಾನ ಪಡೆದುಕೊಳ್ಳಲಾಗಿದೆ.

18 ವರ್ಷದ ಬಾಲಕಿಗೆ ಹೃದಯ ಕಸಿ ಮಾಡಲಾಗಿದೆ. 67 ವರ್ಷದ ವೃದ್ಧರೊಬ್ಬರಿಗೆ ಯಕೃತ್, ತಮಿಳುನಾಡಿನ 31 ವರ್ಷದ ವ್ಯಕ್ತಿಗೆ ಕೈಗಳನ್ನು ದಾನ ಮಾಡಲಾಗಿದೆ.

‘ಕೆಲಸದ ವೇಳೆ ಯಂತ್ರದಲ್ಲಿ ಸಿಕ್ಕಿದ್ದ ಯುವಕನ ಕೈಗಳು ಜಜ್ಜಿಹೋಗಿದ್ದವು. ಆದ್ದರಿಂದ ಕಸಿ ಮಾಡಿ ಜೋಡಿಸಲಾಗಿದೆ’ ಎಂದು ಡಾ. ಸಂಜಯ್ ಕುಮಾರ್ ಗೋಜಾ ನೇತೃತ್ವದ ವೈದ್ಯರ ತಂಡ ಹೇಳಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.