ಬೆಂಗಳೂರು: ಸೌಂದರ್ಯವರ್ಧಕ ಪಾರ್ಸೆಲ್‌ನಲ್ಲಿ ಬಚ್ಚಿಟ್ಟು ಸಾಗಿಸುತ್ತಿದ್ದ ₹ 40 ಲಕ್ಷ ಮೌಲ್ಯದ ಡ್ರಗ್ಸ್ ಜಪ್ತಿ ಮಾಡಿರುವ ಎನ್‌ಸಿಬಿ (ರಾಷ್ಟ್ರೀಯ ಮಾದಕ ವಸ್ತು ನಿಯಂತ್ರಣ ಘಟಕ) ಅಧಿಕಾರಿಗಳು, ಆರೋಪಿ ಎಸ್. ಯೋಗಿತಾ ಎಂಬುವರನ್ನು ಬಂಧಿಸಿದ್ದಾರೆ.

‘ಎಲೆಕ್ಟ್ರಾನಿಕ್ ಸಿಟಿಯ ಅಂಚೆ ಕಚೇರಿಗೆ ಬಂದಿದ್ದ ಪಾರ್ಸೆಲ್‌ನಲ್ಲಿ ಡ್ರಗ್ಸ್ ಇರುವ ಬಗ್ಗೆ ಮಾಹಿತಿ ಬಂದಿತ್ತು. ಸ್ಥಳಕ್ಕೆ ಹೋಗಿ ಕಚೇರಿ ಮೇಲೆ ನಿಗಾ ವಹಿಸಲಾಗಿತ್ತು. ಆರೋಪಿಯೇ ಪಾರ್ಸೆಲ್ ತೆಗೆದುಕೊಂಡು ಹೋಗಲು ಕಚೇರಿಗೆ ಬಂದಿದ್ದರು. ಅದೇ ಸಂದರ್ಭದಲ್ಲಿ ಅವರನ್ನು ವಶಕ್ಕೆ ಪಡೆಯಲಾಯಿತು’ ಎಂದು ಎನ್‌ಸಿಬಿ ಮೂಲಗಳು ಹೇಳಿವೆ.

‘ಸೌಂದರ್ಯವರ್ಧಕಗಳಲ್ಲಿ ಎಂಡಿಎಂಎ ಡ್ರಗ್ಸ್ ಹರಳುಗಳನ್ನು ಬಚ್ಚಿಟ್ಟು ಪಾರ್ಸೆಲ್ ಸಿದ್ಧಪಡಿಸಲಾಗಿತ್ತು. ಜರ್ಮನಿಯಿಂದ ಅಂತರರಾಷ್ಟ್ರೀಯ ಅಂಚೆ ಮೂಲಕ ಎಲೆಕ್ಟ್ರಾನಿಕ್ ಸಿಟಿ ಅಂಚೆ ಕಚೇರಿಗೆ ಕಳುಹಿಸಲಾಗಿತ್ತು. ಆರಂಭದಲ್ಲಿ ಪಾರ್ಸೆಲ್ ತೆರೆದಾಗ ಸೌಂದರ್ಯವರ್ಧಕಗಳು ಮಾತ್ರ ಕಂಡಿದ್ದವು. ಅವುಗಳನ್ನು ಸಂಪೂರ್ಣವಾಗಿ ತೆರೆದು ನೋಡಿದಾಗ ಎಂಡಿಎಂಎ ಡ್ರಗ್ಸ್ ಪತ್ತೆಯಾಯಿತು’ ಎಂದೂ ತಿಳಿಸಿವೆ.

‘ಆಫ್ರಿಕಾ ಪ್ರಜೆಗಳ ಜೊತೆ ನಂಟು ಹೊಂದಿದ್ದ ಆರೋಪಿ ಯೋಗಿತಾ, ಪಾರ್ಸೆಲ್‌ನಲ್ಲಿ ಡ್ರಗ್ಸ್ ತರಿಸಿ ನಗರದ ಹಲವರಿಗೆ ಮಾರುತ್ತಿದ್ದರು. ಮೂರು ವರ್ಷಗಳಿಂದ ಆರೋಪಿ ಕೃತ್ಯ ಎಸಗುತ್ತಿರುವ ಮಾಹಿತಿ ಇದೆ. ಆಕೆಯನ್ನು ಕಸ್ಟಡಿಗೆ ಪಡೆದು ವಿಚಾರಣೆ ನಡೆಸಬೇಕಿದೆ’ ಎಂದೂ ಎನ್‌ಸಿಬಿ ಮೂಲಗಳು ಹೇಳಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.