ಬೆಂಗಳೂರು: ರಾಷ್ಟ್ರೀಯ ಮಾನಸಿಕ ಆರೋಗ್ಯ ಹಾಗೂ ನರವಿಜ್ಞಾನ ಸಂಸ್ಥೆಯು (ನಿಮ್ಹಾನ್ಸ್) ಎನ್ಎಬಿಎಚ್ (ಆಸ್ಪತ್ರೆಗಳು ಮತ್ತು ಆರೋಗ್ಯ ಪೂರೈಕೆದಾರರ ರಾಷ್ಟ್ರೀಯ ಮಾನ್ಯತೆ ಮಂಡಳಿ) ಮಾನ್ಯತೆ ಪಡೆದಿದೆ.

ಇದೇ ವರ್ಷ ಮಾರ್ಚ್ ತಿಂಗಳಲ್ಲಿ ಸಂಸ್ಥೆಯನ್ನು ಮೌಲ್ಯಮಾಪನಕ್ಕೆ ಒಳಪಡಿಸಲಾಗಿತ್ತು. ಆರೋಗ್ಯ ಕ್ಷೇತ್ರದಲ್ಲಿನ ಗುಣಮಟ್ಟದ ಸೇವೆ, ರೋಗಿಗಳ ಸುರಕ್ಷತೆ ಹಾಗೂ ಸೇವೆಯಲ್ಲಿನ ಸಮರ್ಪಣಾ ಭಾವ ಮಾನದಂಡದ ಆಧಾರದಲ್ಲಿ ಎನ್ಎಬಿಎಚ್ ಐದನೇ ಆವೃತ್ತಿಯ ಮಾನ್ಯತೆ ಒದಗಿಸಲಾಗಿದೆ.

ಈ ಹಿಂದೆಯೂ ನಿಮ್ಹಾನ್ಸ್ ಈ ಮಾನ್ಯತೆಯನ್ನು ಹೊಂದಿತ್ತು. 2028ರ ಮಾ.3ರವರೆಗಿನ ಅವಧಿಗೆ ನೀಡಲಾದ ಐದನೇ ಆವೃತ್ತಿಯ ಮಾನ್ಯತೆ ಪಡೆಯುವಲ್ಲಿ ಸಂಸ್ಥೆ ಯಶಸ್ವಿಯಾಗಿದೆ.

‘ಸಂಸ್ಥೆಯಲ್ಲಿ ಲಭ್ಯವಿರುವ ಉನ್ನತ ದರ್ಜೆಯ ಆರೋಗ್ಯ ಸೇವೆಗಳನ್ನು ಹಾಗೂ ಅದನ್ನು ಜನಸಾಮಾನ್ಯರಿಗೆ ತಲುಪಿಸುತ್ತಿರುವ ಬದ್ಧತೆಯನ್ನು ಈ ಮಾನ್ಯತೆ ಸಾಕ್ಷೀಕರಿಸುತ್ತದೆ. ಈ ಮಾನ್ಯತೆ ದೊರೆಯಲು ಸಹಕರಿಸಿದ ಸಂಸ್ಥೆಯ ಎಲ್ಲ ವೈದ್ಯರು ಹಾಗೂ ಸಿಬ್ಬಂದಿಗೆ ಅಭಿನಂದನೆಗಳು’ ಎಂದು ಸಂಸ್ಥೆಯ ನಿದೇರ್ಶಕಿ ಡಾ. ಪ್ರತಿಮಾ ಮೂರ್ತಿ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.