ಬೆಂಗಳೂರು: ‘ಸಿದ್ದರಾಮಯ್ಯ ಅವರಿಗೆ ₹1.50 ಕೋಟಿ ಮೌಲ್ಯದ ಬೆಂಜ್ ಕಾರು ಕೊಟ್ಟಿದ್ದೇನೆ ಎಂಬ ಸುದ್ದಿ ಸುಳ್ಳು’ ಎಂದು ಹೆಬ್ಬಾಳ ಶಾಸಕ ಭೈರತಿ ಸುರೇಶ್ ಸ್ಪಷ್ಟನೆ ನೀಡಿದರು.

ಸಿದ್ದರಾಮಯ್ಯ ಅವರು ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿದ ಬಳಿಕ ಇನೋವಾ ಕಾರಿನಲ್ಲಿ ಓಡಾಡುತ್ತಿದ್ದರು. ಆಗ ಅವರ ಆಪ್ತರಾದ ಸಚಿವ ಕೆ.ಜೆ. ಜಾರ್ಜ್ ಅವರು ಹೊಸ ಐಷಾರಾಮಿ ಕಾರು ನೀಡಿದ್ದರು. ಈಗ ಕಪ್ಪು ಬಣ್ಣದ ಐಷಾರಾಮಿ ಕಾರನ್ನು ಸುರೇಶ್ ಗಿಫ್ಟ್ ಕೊಟ್ಟಿದ್ದಾರೆ ಎಂದು ಸುದ್ದಿಯಾಗಿತ್ತು. ಈ ಬಗ್ಗೆ ಪ್ರತಿಕ್ರಿಯಿಸಿದ ಸುರೇಶ್, ‘ಗಿಫ್ಟ್ ಕೊಟ್ಟಿಲ್ಲ, ಓಡಾಡಲು ಕೊಟ್ಟಿದ್ದೇನೆ' ಎಂದು ಹೇಳಿದರು.

‘ನಿನ್ನೆ (ಶನಿವಾರ) ಸಂಜೆ ಸಾಹೇಬ್ರ (ಸಿದ್ದರಾಮಯ್ಯ) ಮನೆಗೆ ಹೋಗಿದ್ದಾಗ ಅವರ ಮನೆಯಲ್ಲೇ ಕಾರು ನಿಲ್ಲಿಸಿ, ಬಸ್ನಲ್ಲಿ ಈಗಲ್ಟನ್ ರೆಸಾರ್ಟ್ಗೆ ಹೋಗಿದ್ದೆ. ಇಂದು ಚಾಲಕ ಕಾರು ತಕ್ಕೊಂಡು ಓಡಾಡುತ್ತಿದ್ದಾನೆ. ದೂರದ ಪ್ರಯಾಣಕ್ಕೆ ಸಾಹೇಬ್ರು 7–8 ವರ್ಷಗಳಿಂದ ನನ್ನ ಕಾರನ್ನೇ ಬಳಸುತ್ತಿದ್ದಾರೆ. ನನ್ನ ಕಾರಿನಲ್ಲಿ ಅವರು ಹೋದರೆ ತಪ್ಪೇನಿದೆ’ ಎಂದರು.

‘ಈ ಹೊಸ ಕಾರು ನನ್ನ ಪತ್ನಿ ಹೆಸರಿನಲ್ಲಿದೆ. ನನ್ನ ಕಾರನ್ನು ಅವರು ಉಪಯೋಗಿಸಿದ ತಕ್ಷಣ ಗಿಫ್ಟ್ ಅಂದರೆ ಹೇಗೆ. ಈ ಹಿಂದೆ ಸಾಹೇಬ್ರು ಓಡಾಡುತ್ತಿದ್ದ ಆಡಿ ಕಾರು ಕೂಡಾ ನನ್ನದೇ. ಇದೂ ನನ್ನದೇ. ಅವರು ದೂರದ ಪ್ರಯಾಣಕ್ಕೆ ಕೆ.ಜೆ ಜಾರ್ಜ್ ಅಥವಾ ನನ್ನ ಕಾರು ಬಳಸುತ್ತಾರೆ. ಇದಕ್ಕಿಂತ ದುಬಾರಿ ಕಾರು ಅವರಲ್ಲಿದೆ. ಹೀಗೆಲ್ಲ ಊಹಾಪೋಹ ಸುದ್ದಿ ಮಾಡಿದರೆ ಹೇಗೆ’ ಎಂದು ಪ್ರಶ್ನಿಸಿದರು.

‘ಗೆಳೆಯರಿಗೆ ಓಡಾಡಲು ಕಾರು ಕೊಡುವುದು ಸಾಮಾನ್ಯ. ಹಾಗೆಂದು ಸಿದ್ದರಾಮಯ್ಯ ಅವರಿಗೆ ಯಾವ ಶಾಸಕರೂ ಉಡುಗೊರೆಯಾಗಿ ಕಾರು ಕೊಟ್ಟಿಲ್ಲ’ ಎಂದು ಸಚಿವ ಡಿ.ಕೆ. ಶಿವಕುಮಾರ್ ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.