ವಾಷಿಂಗ್ಟನ್ : ದೇಶದಲ್ಲಿ ಜಾರಿಯಲ್ಲಿರುವ ವಲಸೆ ಕಾನೂನುಗಳನ್ನು ‘ಕೆಲಸಕ್ಕೆ ಬಾರದ್ದು’ ಎಂದು ಜರಿದಿರುವ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಅಕ್ರಮ ವಲಸಿಗರನ್ನು ‘ಪ್ರಾಣಿಗಳು’ ಎಂದು ಮೂದಲಿಸಿದ್ದಾರೆ.

ಶ್ವೇತಭವನದಲ್ಲಿ ಕ್ಯಾಲಿಫೋರ್ನಿಯಾ ರಾಜಕೀಯ ನಾಯಕರು ಮತ್ತು ಕಾನೂನು ಜಾರಿ ಅಧಿಕಾರಿಗಳ ಜೊತೆಗೆ ಸಭೆ ನಡೆಸಿದ ಟ್ರಂಪ್, ದುರ್ಬಲವಾಗಿರುವ ವಲಸೆ ಕಾನೂನುಗಳನ್ನು ಬಿಗಿಗೊಳಿಸುವುದಾಗಿ ತಿಳಿಸಿದರು.

‘ಹೆಚ್ಚು ಹೆಚ್ಚು ಜನರು ನಮ್ಮ ದೇಶಕ್ಕೆ ಅಕ್ರಮ ವಲಸಿಗರಾಗಿ ಬರುತ್ತಿದ್ದಾರೆ. ನಾವು ಇದನ್ನು ತಡೆಯಲು ಸಾಕಷ್ಟು ಶ್ರಮ ಹಾಕುತ್ತಿದ್ದೇವೆ. ಅಕ್ರಮ ವಲಸಿಗರನ್ನು ಪತ್ತೆಹಚ್ಚಿ ಹೊರದಬ್ಬಿದರೆ ಅವರು ಮತ್ತೆ ನುಸುಳಿ ಬರುತ್ತಿದ್ದಾರೆ’ ಎಂದು ಕಿಡಿಕಾರಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.