ಬೆಂಗಳೂರು: ಆನೆಯಂತಹ ದೇಹ, ಚಿಕ್ಕದಾದ ಕಣ್ಣು, ಕುಂಬಳಕಾಯಿ ಆಕಾರದ ತಲೆ, ಸುರುಳಿ ಸುತ್ತಿರುವ ಕೊಂಬುಗಳ ಜಾಫರಾಬಾದಿ ಎಮ್ಮೆಗಳೆರಡು ಬೆಂಗಳೂರು ಕೃಷಿ ಮೇಳದಲ್ಲಿ ಎಲ್ಲರ ಆಕರ್ಷಣೆಯ ಕೇಂದ್ರವಾಗಿದ್ದವು.

ಜೆಕೆವಿಕೆ ಆವರಣದಲ್ಲಿ ನಡೆದ ಕೃಷಿ ಮೇಳದ ಕೊನೆಯ ದಿನ ಹಸು, ಎಮ್ಮೆ, ಕುರಿ, ಕೋಳಿ, ಮೀನುಗಳನ್ನು ನೋಡಲು ಜನರ ದಂಡು ಸಾಗಿತ್ತು. ಗುಜರಾತಿನ ಗೀರ್ ಪ್ರದೇಶದ ಕಾಡೆಮ್ಮೆ ರೀತಿ ಕಾಣುವ ಈ ಸಾಕು ಎಮ್ಮೆಯನ್ನು ನೋಡಲು ಜನರು ಮುಗಿಬಿದ್ದಿದ್ದರು.

ದೇಶಿಯ ತಳಿಗಳಾದ ಹಳ್ಳಿಕಾರ್, ಅಮೃತ ಮಹಲ್, ಜವಾರಿ, ಕೆಂಪು ಸಿಂಧಿ, ಕಪಿಲ ಸಾಯಿ, ಡಂಗಿ, ಖಿಲಾರಿ, ನಾಗೋರಿ, ಮಲೆನಾಡು ಗಿಡ್ಡ, ಗಂಗಾತಿರಿ ಮುಂತಾದ ತಳಿಗಳ ಹಸುಗಳ ಮಧ್ಯೆ ಜಾಫರಾಬಾದಿ ತಳಿಯ ಎಮ್ಮೆಯೇ ಕೇಂದ್ರಬಿಂದು ಆಗಿತ್ತು.

‘ಗುಜರಾತಿನ ಗೀರ್ ಅರಣ್ಯ ಪ್ರದೇಶದಿಂದ ತಂದು ಸಾಕಲಾಗಿರುವ ಈ ಎಮ್ಮೆಯು ಒಂದು ಹೊತ್ತಿಗೆ 15 ರಿಂದ 25 ಲೀಟರ್ ಹಾಲು ಕೊಡುತ್ತದೆ. ನಮ್ಮ ಗೋಶಾಲೆಯಲ್ಲಿ ಈ ಎಮ್ಮೆಯ ಸಾಕಾಣಿಕೆ ತರಬೇತಿ ನೀಡುತ್ತೇವೆ’ ಎಂದು ಶ್ರೀ ಕೃಷ್ಣ ಗೋಶಾಲೆಯ ಕೃಷ್ಣಮೂರ್ತಿ ಸಿ.ಎನ್. ಮಾಹಿತಿ ನೀಡಿದರು.

ಈ ತಳಿಯ ಎಮ್ಮೆಗಳು ಹುಲಿ ಸಹಿತ ವಿವಿಧ ಪ್ರಾಣಿಗಳಿಂದ ತಮ್ಮನ್ನು ತಾವು ರಕ್ಷಣೆ ಮಾಡಿಕೊಳ್ಳುವ ಬಲವನ್ನು ಹೊಂದಿವೆ. ಮನುಷ್ಯರ ಜತೆಗೆ ಪಳಗಿದ ನಂತರ ಸ್ನೇಹಮಯಿಯಾಗಿ ವರ್ತಿಸುತ್ತವೆ. ಸುಮಾರು 5 ರಿಂದ 6 ಅಡಿ ಎತ್ತರವಿರುವ ಈ ಎಮ್ಮೆಗಳು ಒಂದು ಟನ್ಗಿಂತಲೂ ಅಧಿಕ ತೂಕ ಇರುತ್ತವೆ.

‘ಬೃಹತ್ ಆಕಾರ ಹೊಂದಿರುವ ಈ ಎಮ್ಮೆಗಳಿಗೆ ಅಧಿಕ ಮೇವು ಬೇಕಾಗುತ್ತದೆ. ಗುಜರಾತಿನ ಕಛ್ ಹಾಗೂ ಜಾಮ್ ನಗರಗಳ ಜನರು ಹೆಚ್ಚಾಗಿ ಈ ತಳಿಯ ಎಮ್ಮೆಗಳನ್ನು ಸಾಕುತ್ತಾರೆ. ಮಲ್ಡಾರಿಸ್ ಬುಡಕಟ್ಟು ಜನಾಂಗ ಈ ಎಮ್ಮೆಯನ್ನು ಪಳಗಿಸುವಲ್ಲಿ ಪರಿಣಿತಿ ಹೊಂದಿದೆ. ಭಾರತದಲ್ಲಿ 6 ಲಕ್ಷಕ್ಕೂ ಅಧಿಕ ಜಾಫರಾಬಾದಿ ಎಮ್ಮೆಗಳಿವೆ. ಈ ಎಮ್ಮೆ 35 ರಿಂದ 40 ತಿಂಗಳಿಗೊಮ್ಮೆ ಗರ್ಭ ಧರಿಸುತ್ತದೆ. ಇದರ ಕರು ಜನಿಸುವಾಗಲೇ 35 ರಿಂದ 40 ಕೆ.ಜಿ. ತೂಕವಿರುತ್ತದೆ. ಬೇರೆ ತಳಿಯ ಎಮ್ಮೆಗಳಿಗಿಂತ ದೈಹಿಕವಾಗಿ ಭಿನ್ನವಾಗಿರುವ ಈ ಎಮ್ಮೆಯ ವರ್ಷಪೂರ್ತಿ ಹಾಲು ಕೊಡುತ್ತದೆ’ ಎಂದು ಕೃಷ್ಣಮೂರ್ತಿ ಸಿ.ಎನ್. ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.