ನಗರದ ಕೆಂಗೇರಿ ಸ್ಯಾಟಲೈಟ್ ಬಸ್ ನಿಲ್ದಾಣದ ಕಡೆಯಿಂದ ಸ್ಕೈ ವಾಕ್ ಹತ್ತುವ ಸ್ಥಳದಲ್ಲಿ ಮಳೆ ನೀರು ನಿಂತಿರುವುದು
ಹಿರಿಯರಿಗೆ ಸ್ಕೈವಾಕ್ ಮೆಟ್ಟಿಲು ಹತ್ತುವುದು ಕಷ್ಟವಿದೆ. ಆದರೆ, ಯುವ ಜನರು ಆರಾಮವಾಗಿ ಬಳಸಬಹುದು. ಸೋಮಾರಿತನದಿಂದಾಗಿ ಅವರು ಸ್ಕೈವಾಕ್ ಕಡೆ ಬರುತ್ತಿಲ್ಲ. ಶೀಘ್ರವೇ ಲಿಫ್ಟ್ ಅಥವಾ ಎಸ್ಕಲೇಟರ್ ನಿರ್ಮಿಸಿ, ಎಲ್ಲರೂ ಸ್ಕೈವಾಕ್ ಮೂಲಕವೇ ಸಾಗುವಂತೆ ಮಾಡಬೇಕು.
-ಪ್ರತೀಕ್ಷಾ, ಐಟಿ ಉದ್ಯೋಗಿ
ಜನದಟ್ಟಣೆ ಹೆಚ್ಚಿರುವಾಗ ಪೊಲೀಸರು ಬರುತ್ತಾರೆ. ಜನ ಸ್ಕೈವಾಕ್ ಅನ್ನೇ ಬಳಸಲಿ ಎಂದು ಬ್ಯಾರಿಕೇಡ್ ಹಾಕಿ ರಸ್ತೆ ವಿಭಜಕವನ್ನು ಮುಚ್ಚುತ್ತಾರೆ. ಅವರ ಜೊತೆಗೆ ನಾವೂ ಕೈಜೋಡಿಸಿ ಬ್ಯಾರಿಕೇಡ್ ಅಳವಡಿಕೆ ಸಹಾಯ ಮಾಡುತ್ತೇವೆ. ಆದರೆ, ಪೊಲೀಸರು ಆ ಕಡೆ ಹೋಗುತ್ತಿದ್ದಂತೆ ಪಾದಚಾರಿಗಳು ಬ್ಯಾರಿಕೇಡ್ ಬದಿಗೆ ಸರಿಸಿ ಅಲ್ಲಿಂದಲೇ ಓಡಾಡುತ್ತಾರೆ.
-ದಿನೇಶ್ ಮದ್ದೂರು, ಪೇರಳೆಹಣ್ಣು ವ್ಯಾಪಾರಿ, ಕೆಂಗೇರಿ
ರಸ್ತೆ ದಾಟುವಾಗ ವಾಹನಗಳು ಎಲ್ಲಿ ಮೈಮೇಲೆ ಬಂದು ಬಿಡುತ್ತಾವೊ ಅಂತ ಭಯ ಆಗುತ್ತೆ. ಅದಕ್ಕೆ ನಾನು ಮೆಟ್ಟಿಲು ಹತ್ತಿಕೊಂಡು ಸ್ಕೈವಾಕ್ ಮೂಲಕ ರಸ್ತೆ ದಾಟುತ್ತೇನೆ. ಮಂಡಿನೋವಿದೆ, ಮೆಟ್ಟಿಲು ಹತ್ತುವುದೂ ಕಷ್ಟ. ನಮ್ಮಂಥವರು ಸುಲಭವಾಗಿ ಹತ್ತಲು ಅನುಕೂಲವಾಗುವಂತೆ ಏನಾದರೂ ವ್ಯವಸ್ಥೆ ಮಾಡ್ರಪ್ಪ.
-ಸಾವಿತ್ರಮ್ಮ, ಗಾರ್ಮೆಂಟ್ ಉದ್ಯೋಗಿ
ಬಿಬಿಎಂಪಿ ಅವರಿಗೂ ಸೆನ್ಸ್ ಇಲ್ಲ, ಜನರಿಗೂ ಸೆನ್ಸ್ ಇಲ್ಲ. ಈ ಸ್ಕೈವಾಕ್ ಹತ್ತಿ ಬರುವುದು ಹಿರಿಯರಿಗೆ ಕಷ್ಟ. ಆದರೆ, ರಸ್ತೆ ದಾಟುತ್ತಿರುವವರಲ್ಲಿ ಶೇ 90ರಷ್ಟು ಮಂದಿ ಯುವಜನರೇ ಇದ್ದಾರೆ. ಸ್ಕೈವಾಕ್ ಬಳಸುವಂತೆ ಅವರಿಗೆ ಅರಿವು ಮೂಡಿಸಬೇಕು.
-ಸಂತೋಷ್, ಕಾಲೇಜು ವಿದ್ಯಾರ್ಥಿ
ಸ್ಕೈವಾಕ್ ಮಾಡಿದ ಮೇಲೆ ಲಿಫ್ಟ್ ನಿರ್ಮಾಣ ಮಾಡುತ್ತಿದ್ದಾರೆ. ಕಾಮಗಾರಿ ಬಹಳ ನಿಧಾನವಾಗಿದೆ. ವೇಗವಾಗಿ ಕೆಲಸ ಮುಗಿಸಿದರೆ, ಜನರಿಗೆ ಉಪಯೋಗವಾಗುತ್ತದೆ.