ಬೆಂಗಳೂರು: ಕಟೀಲು ಮೇಳದಿಂದ ಪ್ರಸಿದ್ಧ ಭಾಗವತ ಪಟ್ಲ ಸತೀಶ್ ಶೆಟ್ಟಿ ಅವರನ್ನು ಹೊರಹಾಕಿರುವುದನ್ನು ಖಂಡಿಸಿ ಪುರಭವನದ ಮುಂಭಾಗದಲ್ಲಿ ಪಟ್ಲ ಅಭಿಮಾನಿಗಳು ಗುರುವಾರ ಪ್ರತಿಭಟನೆ ನಡೆಸಿದರು.

‘ಕಟೀಲು ದೇವಸ್ಥಾನದ ಆವರಣ ದಲ್ಲಿ ಯಕ್ಷಗಾನ ನಡೆಯುತ್ತಿದ್ದ ಸಂದ ರ್ಭದಲ್ಲಿ, ಭಾಗವತಿಕೆ ಆರಂಭಿಸಲು ಸಜ್ಜಾಗಿದ್ದ ಕ್ಷಣದಲ್ಲೇ ಪಟ್ಲ ಅವ ರನ್ನು ಮೇಳದ ವ್ಯವಸ್ಥಾಪಕರು ರಂಗ ಸ್ಥಳದಿಂದ ಕೆಳಕ್ಕೆ ಇಳಿಸಿ, ಹೊರಕ್ಕೆ ಕಳುಹಿಸಿರುವುದು ಸರಿಯಲ್ಲ’ ಎಂದು ಪ್ರತಿಭಟನೆಕಾರರು ಆಕ್ರೋಶ ವ್ಯಕ್ತಪಡಿಸಿದರು.

‘ಯಕ್ಷಗಾನ ಮತ್ತು ಕಲಾವಿದರ ಬಗ್ಗೆ ವಿಶೇಷ ಕಾಳಜಿ ವಹಿಸಿದ್ದ ಪಟ್ಲ ಅವರು, ತಮ್ಮ ಪಟ್ಲ ಫೌಂಡೇಷನ್ ಮೂಲಕ ಬಡ ಕಲಾವಿದರಿಗೆ ಸಹಾಯ ಹಸ್ತ ಚಾಚುತ್ತಿದ್ದರು. ಕಟೀಲು ಮೇಳದ ವ್ಯವಸ್ಥಾಪಕರು ಪಟ್ಲ ಅವರ ಮೇಲೆ ತೋರಿಸಿದ ವರ್ತನೆ ಖಂಡನೀಯ’ ಎಂದು ಪಟ್ಲ ಅಭಿಮಾನಿ ಬಳಗದ ದಿನೇಶ್ ವೈದ್ಯ ಹೇಳಿದರು.

‘ಬಡ, ಅಶಕ್ತ ಯಕ್ಷಗಾನ ಕಲಾವಿ ದರನ್ನು ಗುರುತಿಸಿ 100 ಮನೆಗಳನ್ನು ಕಟ್ಟಿಸಿಕೊಡಲು ಪಟ್ಲ ಅವರು ಮುಂದಾ ಗಿದ್ದಾರೆ. ಅಲ್ಲದೆ, ಕಲಾವಿದರಿಗೆ ವಿಮೆ ಮಾಡಿಸುವ ಮೂಲಕ ಭವಿಷ್ಯದ ದಾರಿ ತೋರಿಸುತ್ತಿದ್ದಾರೆ. ಅಂಥ ಕಲಾವಿದನೊಬ್ಬನನ್ನು ರಂಗಸ್ಥಳದಿಂದ ಇಳಿಸಿ ಅವಮಾನ ಮಾಡಿರುವ ಧೋರಣೆ ಯಾವುದೇ ಕಾರಣಕ್ಕೆ ಒಪ್ಪಲು ಸಾಧ್ಯವಿಲ್ಲ’ ಎಂದು ಅವರು ಹೇಳಿದರು.

ಆರ್.ಕೆ. ಭಟ್ ಬೆಳ್ಳಾರೆ, ಶ್ರೀನಿವಾಸ ರಾವ್, ಮಧುಕರ ಶೆಟ್ಟಿ ಮತ್ತಿತರರು ಪ್ರತಿಭಟನೆಯ ನೇತೃತ್ವ ವಹಿಸಿದ್ದರು. 250ಕ್ಕೂ ಹೆಚ್ಚು ಪಟ್ಲ ಅಭಿಮಾನಿಗಳು ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.