ಬೆಂಗಳೂರು: ಶ್ರೀರಾಮಚಂದ್ರಾಪುರ ಮಠದ ರಾಘವೇಶ್ವರ ಭಾರತಿ ಸ್ವಾಮೀಜಿಯವರ 28ನೇ ಚಾತುರ್ಮಾಸ್ಯ ಆಚರಣೆಯು ಇದೇ 24ರಿಂದ ಸೆ.20ರವರೆಗೆ ಗಿರಿನಗರದ ಶ್ರೀರಾಮಾಶ್ರಮದಲ್ಲಿ ನಡೆಯಲಿದೆ.

ಚಾತುರ್ಮಾಸ್ಯ ಪೂರ್ವಭಾವಿಯಾಗಿ ಗುರುವಾರ ಮಧ್ಯಾಹ್ನ ಶ್ರೀಗಳ ಪುರಪ್ರವೇಶ ವೈಭವದಿಂದ ನಡೆಯಿತು

ಗುರುಕುಲಗಳ ಬಗ್ಗೆ ಮಾಹಿತಿ ಪ್ರಸಾರ, ಘನ ಪಾರಾಯಣ, ವೇದ ಪಾರಾಯಣ, ಧನ್ವಂತರಿ ಹವನ, ಶ್ರೀಗಳ ವರ್ಧಂತಿ ಉತ್ಸವ ಸೇರಿದಂತೆ ಹಲವು ವಿಶೇಷ ಕಾರ್ಯಕ್ರಮಗಳು ಈ ಅವಧಿಯಲ್ಲಿ ನಡೆಯಲಿವೆ.

‘ಅರಿವಿನ ಹಣತೆಯ ಹಚ್ಚೋಣ- ವಿದ್ಯಾವಿಶ್ವವ ಕಟ್ಟೋಣ ಎಂಬ ಧ್ಯೇಯವಾಕ್ಯದೊಂದಿಗೆ ಈ ಚಾತುರ್ಮಾಸ್ಯವನ್ನು ಆಚರಿಸಲಾಗುತ್ತಿದೆ’ ಎಂದು ಚಾತುರ್ಮಾಸ್ಯ ಸಮಿತಿ ಅಧ್ಯಕ್ಷ ಯು.ಎಸ್.ಜಿ. ಭಟ್ ಪ್ರಕಟಣೆಯಲ್ಲಿ ಹೇಳಿದ್ದಾರೆ.

‘ಆಚರಣೆಯ ವೇಳೆ, ಕೋವಿಡ್ ಮಾರ್ಗಸೂಚಿಗಳನ್ನು ಕಟ್ಟುನಿಟ್ಟಾಗಿ ಪಾಲಿಸಲಾಗುವುದು. ಭಿಕ್ಷಾಸೇವೆ, ಪಾದುಕಾಪೂಜೆಯಂಥ ಧಾರ್ಮಿಕ ವಿಧಿವಿಧಾನದಲ್ಲಿ ಬದಲಾವಣೆಗಳನ್ನು ಮಾಡಿಕೊಳ್ಳಲಾಗಿದೆ’ ಎಂದು ಅವರು ತಿಳಿಸಿದ್ದಾರೆ.

‘ಚಾತುರ್ಮಾಸ್ಯದಲ್ಲಿ ಸಂಗ್ರಹವಾಗುವ ಮೊತ್ತದಲ್ಲಿ ದೊಡ್ಡ ನಿಧಿಯೊಂದನ್ನು ವಿಶ್ವವಿದ್ಯಾಪೀಠದ ವಾರ್ಷಿಕ ನಿರ್ವಹಣೆಗಾಗಿ ಸಮರ್ಪಿಸಲು ಉದ್ದೇಶಿಸಲಾಗಿದೆ’ ಎಂದು ಅವರು ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.