ಬೆಂಗಳೂರು: ಇಂಡಿಯನ್ ಕ್ರಾಸ್ವರ್ಡ್ (ಪದಬಂಧ) ಲೀಗ್ನಲ್ಲಿ ಚೆನ್ನೈನ ರಾಮ್ಕಿ ಕೃಷ್ಣನ್ ಚಾಂಪಿಯನ್ ಆಗಿ ಹೊರಹೊಮ್ಮಿದರು. ಶಾಶ್ವತ್ ಸಿನಾಯ್ ಸಾಲ್ಗೋಕರ್ ಅವರು ರನ್ನರ್ ಅಪ್ ಪ್ರಶಸ್ತಿ ಪಡೆದರು.

ಎಕ್ಸ್ಟ್ರಾ–ಸಿ ಸಂಸ್ಥೆ ವತಿಯಿಂದ ಏರ್ಪಡಿಸಿದ್ದ ‘ಐಎಕ್ಸ್ಎಲ್ –2018’ ಸ್ಪರ್ಧೆಯ 6ನೇ ಆವೃತ್ತಿಯ ಅಂತಿಮ ಸುತ್ತು ನಗರದ ರಾಯಲ್ ಆರ್ಕಿಡ್ ಹೋಟೆಲ್ನಲ್ಲಿ ಭಾನುವಾರ ನಡೆಯಿತು. ದೇಶ ವಿದೇಶಗಳ30 ಸ್ಪರ್ಧಿಗಳು ಭಾಗವಹಿಸಿದ್ದರು. ಆನ್ಲೈನ್ ಮತ್ತು ಆಫ್ಲೈನ್ ಮಾದರಿಗಳಲ್ಲಿ ಈ ಸ್ಪರ್ಧೆ ನಡೆಯಿತು.

ಈ ಸ್ಪರ್ಧೆಯಲ್ಲಿ ಕಳೆದ ಬಾರಿಯ ಚಾಂಪಿಯನ್ ಆಗಿದ್ದ ಮುಂಬೈನ ವೆಂಕಟರಾಘವನ್ ಎಸ್., ನಾರಾಯಣ್ ಮಂಡಲ್, ಚೆನ್ನೈನ ಅಭಯ್ ಫಡ್ನಿಸ್ ಮತ್ತು ದೇವರಾಜ್ ಮೂರನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡರು.ಅಥ್ಲೀಟ್ ಅಶ್ವಿನಿ ನಾಚಪ್ಪ ಅವರು ವಿಜೇತರಿಗೆ ಬಹುಮಾನ ವಿತರಿಸಿದರು. ಸೆಪ್ಟೆಂಬರ್ನಲ್ಲಿ ಆನ್ಲೈನ್ ಮೂಲಕ 9 ಸುತ್ತುಗಳಲ್ಲಿ ಸ್ಪರ್ಧೆ ನಡೆಸಿ ಅಂತಿಮ ಸುತ್ತಿಗೆ ಸ್ಪರ್ಧಿಗಳನ್ನು ಆಯ್ಕೆ ಮಾಡಲಾಗಿತ್ತು. ಸ್ಪರ್ಧೆಯ ಈ ವರ್ಷದ ಆವೃತ್ತಿ ಪಾಟ್ನಾದಲ್ಲಿ ಆರಂಭವಾಗಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.