ಕೆ.ಆರ್.ಪುರ: ಮನೆಯ ಕಸ, ಕಟ್ಟಡ ನಿರ್ಮಾಣದ ತ್ಯಾಜ್ಯಗಳ ರಾಶಿಯಿಂದ ತುಂಬಿಕೊಂಡಿದ್ದ ಮಾರಗೊಂಡನಹಳ್ಳಿಯ ಸರ್ಕಾರಿ ಗುಂಡುತೋಪನ್ನು ಊರಿನ ಗ್ರಾಮಸ್ಥರು ಸಾಷ ಫೌಂಡೇಶನ್ ಸಹಯೋಗದಲ್ಲಿ ಸ್ವಚ್ಛಗೊಳಿಸಿ, ನೂರಕ್ಕೂ ಹೆಚ್ಚು ಸಸಿಗಳನ್ನು ನೆಟ್ಟಿದ್ದಾರೆ.

ಬೆಂಗಳೂರು ಪೂರ್ವ ತಾಲ್ಲೂಕಿನ ಬಿದರಹಳ್ಳಿ ಹೋಬಳಿಯ ಬಿದರಹಳ್ಳಿ ಗ್ರಾಮ ಪಂಚಾಯತಿಗೆ ವ್ಯಾಪ್ತಿಯಲ್ಲಿರುವ ಮಾರಗೊಂಡನಹಳ್ಳಿಯಲ್ಲಿ ಸರ್ವೆ ನಂಬರ್ 59 ರಲ್ಲಿ 2.30 ಎಕರೆ ವಿಸ್ತೀರ್ಣದ ಸರ್ಕಾರಿ ಗುಂಡುತೋಪಿದೆ. ಈ ಜಾಗದಲ್ಲಿ ಸುತ್ತಮುತ್ತಲಿನ ಬಡಾವಣೆ ನಿವಾಸಿಗಳು ಮತ್ತು ವಿವಿಧ ಅಂಗಡಿ ಮುಂಗಟ್ಟುಗಳ ಮಾಲೀಕರು ಕಸ ಸುರಿಯುತ್ತಿದ್ದರು. ಇದರಿಂದ ತೋಪು ಕಸದ ತಿಪ್ಪೆಯಾಗಿತ್ತು.

ಮಾರಗೊಂಡನಹಳ್ಳಿಯ ಹಿರಿಯ ನಾಗರಿಕರು, ಸಮಾನ ಮನಸ್ಕರು ಸೇರಿ ಸ್ವಂತ ಹಣದಿಂದ ಗುಂಡುತೋಪು ಸ್ವಚ್ಛಗೊಳಿಸಿದ್ದಾರೆ. ಸಾಷ ಫೌಂಡೇಷನ್ ಯುವಕರು ಪುನಶ್ಚೇತನಕ್ಕೆ ಕೈ ಜೋಡಿಸಿದ್ದಾರೆ. ಬಹುಪಯೋಗಿ ಅರಣ್ಯ ಗಿಡಗಳು ಹಾಗೂ ವಿವಿಧ ರೀತಿಯ ಮರವಾಗುವಮತಹ ಸಸ್ಯಗಳನ್ನು ನಾಟಿ ಮಾಡಿದ್ದಾರೆ.

ಸಾಮಾಜಿಕ ಕಾಳಜಿಯೊಂದಿಗೆ ಗುಂಡುತೋಪು ಪುನಶ್ಚೇತನ ಕಾರ್ಯಕ್ಕೆ ಯುವಕರ ತಂಡ ಮುಂದಾಗಿದೆ. ಸರ್ಕಾರಿ ಆಸ್ತಿ ನಮ್ಮೆಲ್ಲರ ಆಸ್ತಿ. ಊರಿಗೆ ಅನುಕೂಲವಾಗಲಿ ಎಂಬ ದೃಷ್ಟಿಯಿಂದ ಉತ್ತಮ ಕಾರ್ಯ ಮಾಡುತ್ತಿದ್ದಾರೆ. ಇದಕ್ಕೆ ಗ್ರಾಮಸ್ಥರೆಲ್ಲರೂ ಕೈಜೋಡಿಸುತ್ತೇವೆ’ ಎಂದು ಗ್ರಾಮದ ಮುಖಂಡ ಎಂ.ಆರ್.ವೆಂಕಟೇಶ್ ತಿಳಿಸಿದರು.

’ಗುಂಡು ತೋಪು ಪುನಶ್ಚೇತನಗೊಂಡ ನಂತರ, ಈ ಜಾಗವನ್ನು ಮುಂದೆ ಮಕ್ಕಳಿಗೆ ಆಟವಾಡಲು ಆಟದ ಮೈದಾನ ಮತ್ತು ಉದ್ಯಾನಕ್ಕಾಗಿ ಮೀಸಲಿಡಲಿ’ ಎಂದು ಗ್ರಾಮದ ಹಿರಿಯ ಮುಖಂಡ ನಾಗರಾಜರೆಡ್ಡಿ ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.