ಬೆಂಗಳೂರು: ಐ.ಟಿ ಸಿಟಿ ಇನ್ನೂ ಬಯಲು ಶೌಚದಿಂದ ಸಂಪೂರ್ಣವಾಗಿ ಮುಕ್ತಿ ಕಂಡಿಲ್ಲ ಎಂಬುದು ಒಂದೆಡೆಯಾದರೆ, ಬಯಲು ಶೌಚಕ್ಕೂ ಇಲ್ಲಿ ಬಾಡಿಗೆ ಕೊಡಬೇಕಿದೆ!

ಕೂಲಿ ಕೆಲಸ ಹುಡುಕಿಕೊಂಡು ರಾಜ್ಯ, ಹೊರರಾಜ್ಯಗಳಿಂದ ಕುಟುಂಬ ಸಮೇತ ಬರುವ ಕಾರ್ಮಿಕರು ನಗರದ ಸುತ್ತಲೂ ಹೊರ ವಲಯಕ್ಕೆ ಹೊಂದಿಕೊಂಡಿರುವ ಬಡಾವಣೆಗಳಲ್ಲಿ ಜೋಪಡಿಗಳನ್ನು ನಿರ್ಮಿಸಿಕೊಂಡು ವಾಸವಿದ್ದಾರೆ. ಇವುಗಳಲ್ಲಿ ಬಹುತೇಕ ಕಡೆ ಶೌಚಕ್ಕೆ ಬಯಲೇ ಗತಿಯಾಗಿದೆ.

ತೆಲಂಗಾಣದ 200ಕ್ಕೂ ಹೆಚ್ಚು ಕುಟುಂಬಗಳು ಹೊರಮಾವು ಸಮೀಪದ ಖಾಸಗಿ ವ್ಯಕ್ತಿಯೊಬ್ಬರಿಗೆ ಸೇರಿದ ಖಾಲಿ ಜಾಗದಲ್ಲಿ ನೆಲೆಸಿವೆ. ಕಳೆದ 25ಕ್ಕೂ ಹೆಚ್ಚು ವರ್ಷಗಳಿಂದ ಒಂದೇ ಜಾಗದಲ್ಲಿ ತಳ ಊರಿವೆ. ಇಷ್ಟು ವರ್ಷಗಳ ಕಾಲ ಒಂದು ಸಾವಿರಕ್ಕೂ ಹೆಚ್ಚು ಜನ ಇದೇ ಜಾಗದಲ್ಲಿ ಉಳಿಯಲು ಕಾರಣವೂ ಇದೆ. ಸರ್ಕಾರಿ ಜಾಗದಲ್ಲಿ ಜೋಪಡಿ ನಿರ್ಮಿಸಿಕೊಂಡರೆ ಆಗಾಗ ಸಂಬಂಧಪಟ್ಟ ಅಧಿಕಾರಿಗಳು ತೆರವುಗೊಳಿಸುತ್ತಾರೆ. ಆದರೆ, ಇದು ಖಾಸಗಿ ವ್ಯಕ್ತಿಯೊಬ್ಬರ ಜಾಗ. ಬಡ ಕಾರ್ಮಿಕರು ಉಳಿದುಕೊಳ್ಳಲು ಅವರು ಉಚಿತವಾಗಿ ಜಾಗ ಕೊಟ್ಟಿದ್ದಾರೆ.

ಶೌಚಕ್ಕೂ ಇಲ್ಲಿ ತೊಂದರೆ ಇಲ್ಲ, ಹಾಗೆಂದು ಮಾತ್ರಕ್ಕೆ ಶೌಚಾಲಯವನ್ನೂ ಅವರೇ ಕಟ್ಟಿಸಿಕೊಟ್ಟಿಲ್ಲ. ಆದರೇ, ಅದರ ಪಕ್ಕದಲ್ಲೇ ಮರ ಮತ್ತು ಪೊದೆಗಳು ಬೆಳೆದಿರುವ ಅವರದೇ ಜಾಗವಿದೆ. ಅಲ್ಲೇ ಬಯಲು ಶೌಚಕ್ಕೆ ಅವರು ಅವಕಾಶ ಮಾಡಿಕೊಟ್ಟಿದ್ದಾರೆ. ಇದಕ್ಕಾಗಿ ತಿಂಗಳಿಗೆ ಪ್ರತಿ ಕುಟುಂಬ ತಲಾ ₹200 ಬಾಡಿಗೆ ಪಾವತಿಸುತ್ತಿದೆ.

‘ಜಾಗದ ಮಾಲೀಕರು ಆಗಾಗ ಜೆಸಿಬಿ ಮೂಲಕ ಮಣ್ಣು ಬದಲಿಸಿ ಸ್ವಚ್ಛಗೊಳಿಸುತ್ತಾರೆ. ಇದಕ್ಕಾಗಿ ನಾವು ನೀಡುವ ₹200 ದೊಡ್ಡದಲ್ಲ. ಮಹಿಳೆಯರು ಒಂದು ಭಾಗಕ್ಕೆ, ಪುರುಷರು ಮತ್ತೊಂದು ಭಾಗದಲ್ಲಿ ಶೌಚಕ್ಕೆ ಹೋಗುತ್ತೇವೆ. ಬಡಾವಣೆ ಮಧ್ಯದಲ್ಲಿ ವಾಸವಿರಲು ನಮಗೆ ಜಾಗದ ಮಾಲೀಕರು ಅವಕಾಶ ಮಾಡಿಕೊಟ್ಟಿದ್ದಾರೆ. ನಮ್ಮ ಮಕ್ಕಳಿಗಾಗಿ ಟೆಂಟ್ ಶಾಲೆಯೊಂದನ್ನು ತೆರೆಸಿಕೊಟ್ಟಿದ್ದಾರೆ. ಅವರ ಮನೆಯಲ್ಲಿ ಏನೇ ಕಾರ್ಯಕ್ರಮವಾದರೂ ಊಟ ತಂದು ಕೊಡುತ್ತಾರೆ. ನಮ್ಮ ಕಷ್ಟ–ಸುಖಗಳನ್ನು ವಿಚಾರಿಸುತ್ತಾರೆ, ಅವರ ಬಗ್ಗೆ ನಮಗೆ ಗೌರವವಿದೆ’ ಎನ್ನುತ್ತಾರೆ ಕಾರ್ಮಿಕರು.

‘ಊಟದಷ್ಟೇ ಬಹಿರ್ದೆಸೆಯೂ ಮುಖ್ಯ. ಸಾಲ ಕೊಟ್ಟವನಿಗೆ ಮುಂದಿನ ವರ್ಷ ಕೊಡುತ್ತೇನೆ ಎಂದು ಸಮಾಧಾನ ಮಾಡಬಹುದು. ಶೌಚವನ್ನು ಹೀಗೆ ಸಮಾಧಾನ ಮಾಡಲು ಸಾಧ್ಯವೇ?’ ಎಂದು ಕಾರ್ಮಿಕರು ಪ್ರಶ್ನಿಸುತ್ತಾರೆ.

‘ಹಲವು ವರ್ಷಗಳಿಂದ ಇದೇ ಜಾಗದಲ್ಲಿ ಕಾರ್ಮಿಕ ಕುಟುಂಬಗಳು ನೆಲೆಸಿವೆ. ಪೊದೆಯ ನಡುವಿನ ಬಯಲನ್ನೇ ಶೌಚಾಲಯ ಮಾಡಿಕೊಂಡಿದ್ದಾರೆ. ಇದಕ್ಕೆ ಅವಕಾಶ ಕೊಟ್ಟವರದ್ದಾಗಲೀ, ಕಾರ್ಮಿಕರದ್ದಾಗಲಿ ತಪ್ಪೇನು ಇಲ್ಲ. ಇಷ್ಟು ಸಂಖ್ಯೆಯ ಜನರಿರುವ ಈ ಜಾಗದ ಸಮೀಪ ಸರ್ಕಾರಿ ಜಾಗ ಹುಡುಕಿ ಸಮುದಾಯ ಶೌಚಾಲಯವನ್ನು ಬಿಬಿಎಂಪಿ ಕಟ್ಟಿಸಬೇಕಿತ್ತು. ಅದನ್ನು ಬಿಟ್ಟು ಬಯಲು ಶೌಚ ಮುಕ್ತ ದೇಶ ಎಂದು ಹೇಳಿಕೊಂಡರೆ ಏನು ಪ್ರಯೋಜನ’ ಎಂದು ಸಮೀಪದ ಮನೆಯ ನಿವಾಸಿ ಪ್ರಕಾಶ್ ಹೇಳಿದರು.

ನಗರದಲ್ಲಿ ಸಾರ್ವಜನಿಕ ಶೌಚಾಲಯ ವಿರಳ

800 ಚದರ ಕಿ.ಮೀ. ವಿಸ್ತಾರದ ಬೆಂಗಳೂರಿನಲ್ಲಿ ಸಾರ್ಜಜನಿಕ ಶೌಚಾಲಯಗಳು ವಿರಳವಾಗಿ ಕಾಣಿಸುತ್ತವೆ. ಬಿಬಿಎಂಪಿಯೇ ತನ್ನ ವೆಬ್‌ಸೈಟ್‌ನಲ್ಲಿ ದಾಖಲಿಸಿರುವಂತೆ 479 ಶೌಚಾಲಯಗಳಿವೆ.

ನೂರು ಜನ ಪುರುಷರಿಗೆ ಒಂದು ಮತ್ತು ನೂರು ಜನ ಮಹಿಳೆಯರಿಗೆ ಎರಡು ಶೌಚಾಲಯವಿರಬೇಕು ಎಂದು ಸ್ವಚ್ಛ ಸರ್ವೇಕ್ಷಣಾ ಮಿಷನ್ ಮಾರ್ಗದರ್ಶಿ ಸೂತ್ರದಲ್ಲಿ ತಿಳಿಸಲಾಗಿದೆ. ಪ್ರತಿ 7ಕಿ.ಮೀ.ಗೆ ಕನಿಷ್ಠ ಒಂದು ಸಾರ್ವಜನಿಕ ಶೌಚಾಲಯ ಇರಬೇಕು ಎಂದು ಸೂಚಿಸಿದೆ. ಆ ನಿಯಮದ ಪ್ರಕಾರ ನಗರದಲ್ಲಿ ಕನಿಷ್ಠ 1,600 ಶೌಚಾಲಯಗಳು ಇರಬೇಕು. ಅದರ ಅರ್ಧದಷ್ಟೂ ಶೌಚಾಲಯಗಳೂ ಇಲ್ಲ. ಇನ್ನು ಅಲ್ಲಲ್ಲಿ ಕಾಣಿಸುವ ಇ–ಶೌಚಾಲಯಗಳು ನಿರ್ವಹಣೆ ಇಲ್ಲದೆ ತುಕ್ಕು ಹಿಡಿಯುತ್ತಿವೆ.

ಮೆಜೆಸ್ಟಿಕ್, ಯಶವಂತಪುರ, ಕಲಾಸಿಪಾಳ್ಯ ರೀತಿಯ ಜನನಿಬಿಡ ಪ್ರದೇಶದಲ್ಲಿ ಮೂತ್ರ ವಿಸರ್ಜನೆಗೆ ಪುರುಷರು ಸಂದಿ–ಗೊಂದಿಗಳನ್ನು ಹುಡುವುದು ಇನ್ನೂ ತಪ್ಪಿಲ್ಲ. ಇನ್ನು ಮಹಿಳೆಯರ ಪಾಡು ಹೇಳ ತೀರದು. ಅದೃಷ್ಟವಶಾತ್ ಶೌಚಾಲಯ ಸಿಕ್ಕರೆ ಪುರುಷರು ಮೂತ್ರ ವಿಸರ್ಜನೆಗೆ ಉಚಿತ, ಮಹಿಳೆಯರು ಹಣ ಪಾವತಿಸಬೇಕು. ಹೊರ ನಗರಗಳಿಂದ ಬರುವ ಪ್ರಯಾಣಿಕರು ನಡುರಾತ್ರಿ ಮತ್ತು ಬೆಳಗಿನ ಜಾವ ಬಸ್ ಇಳಿದು ‘ಅರ್ಜೆಂಟ್’ ಎಂದು ಶೌಚಾಲಯಗಳನ್ನು ಹುಡುಕಿದರೂ ಸಿಗುವುದಿಲ್ಲ. ಕೆಲವೆಡೆ ಶೌಚಾಲಯಗಳು ಕಂಡರೂ ಬೀಗ ಹಾಕಿದ ಸ್ಥಿತಿಯಲ್ಲಿರುತ್ತವೆ.

‘ಯಶವಂತಪುರ ಬಸ್ ನಿಲುಗಡೆ ಸ್ಥಳದಲ್ಲಿ ಸಾರ್ವಜನಿಕ ಶೌಚಾಲಯವೊಂದಿದೆ. ಬೆಳ್ಳಂಬೆಳಿಗ್ಗೆ ಬಸ್ ಇಳಿದು ಶೌಚಾಲಯದ ಬಾಗಿಲು ತಟ್ಟಿದರೆ ಪ್ರಯೋಜನ ಆಗಲಿಲ್ಲ. ಅತ್ತಿತ್ತ ನೋಡಿ, ದೂರದಲ್ಲಿ ಕಂಡ ಮೆಟ್ರೊ ರೈಲು ನಿಲ್ದಾಣದ ಕಡೆಗೆ ಉಸಿರು ಬಿಗಿ ಹಿಡಿದು ಧಾವಿಸಿದೆ. ಮೆಟ್ಟಿಲು ಹತ್ತುವರಷ್ಟರಲ್ಲಿ ಜೀವ ಬಾಯಿಗೆ ಬಂದಿತ್ತು. ಹೆಗಲಿನಲ್ಲಿದ್ದ ಬ್ಯಾಗ್ ಅನ್ನು ಸ್ಕ್ಯಾನ್ ಮಷಿನ್‌ಗೆ ಬಿಸಾಡಿ ಶೌಚಾಲಯದ ಕಡೆ ಓಡಿದೆ’ ಎಂದು ಧಾರವಾಡದಿಂದ ಬಂದಿಳಿದಿದ್ದ ಪುರುಷೋತ್ತಮ ‘ಪ್ರಜಾವಾಣಿ’ ಬಳಿ ಹೇಳಿಕೊಂಡರು.

ಸಾರ್ವಜನಿಕ ಶೌಚಾಲಯಗಳ ಕೊರತೆಯ ಕಾರಣ ನಗರದಲ್ಲಿ ಅಲ್ಲಲ್ಲಿ ಬಯಲು ಶೌಚ ವ್ಯವಸ್ಥೆ ಇನ್ನೂ ಇದೆ. ನಗರದ ಒಳಗೆ ಹಾದು ಹೋಗುವ ರೈಲು ಹಳಿಗಳೇ ಬಯಲು ಶೌಚಕ್ಕೆ ಇರುವ ದೊಡ್ಡ ಜಾಗ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.