ಬೆಂಗಳೂರು: ದೇಶ, ರಾಜ್ಯವನ್ನು ಆಳುತ್ತಿರುವಈಗಿನ ಸರ್ಕಾರಗಳು ನಂಬಿಕೆಗೆ ಅರ್ಹವಾಗಿಲ್ಲ. ವಿವಾದಿತ ಕೃಷಿ ಕಾಯ್ದೆಗಳು ರದ್ದಾದರೂ, ಮತ್ತೆ ಜಾರಿಯಾಗುವ ಸಾಧ್ಯತೆಯನ್ನು ಅಲ್ಲಗಳೆಯುವಂತಿಲ್ಲ ಎಂದು ನಿವೃತ್ತ ನ್ಯಾಯಮೂರ್ತಿ ಎಚ್.ಎನ್.ನಾಗಮೋಹನ್ ದಾಸ್ ಎಚ್ಚರಿಸಿದರು.

ಜನಪರ ಸಂಘಟನೆಗಳು ’ನಮ್ಮೂರ ಭೂಮಿ ನಮಗಿರಲಿ; ಅನ್ಯರಿಗಲ್ಲ’ ವಿಷಯ ಕುರಿತುಮಂಗಳವಾರ ಹಮ್ಮಿಕೊಂಡಿದ್ದ ಕಾರ್ಯಾಗಾರದಲ್ಲಿ ಅವರು ಮಾತನಾಡಿದರು.

ರೈತರ ನಿರಂತರ ಹೋರಾಟದ ಫಲವಾಗಿ ಕೇಂದ್ರ ಸರ್ಕಾರ ಮೂರು ವಿವಾದಿತ ಕೃಷಿ ಕಾಯ್ದೆಗಳನ್ನು ಹಿಂಪಡೆದಿದೆ. ಒತ್ತಡಕ್ಕೆ ಮಣಿದು ಪ್ರಾದೇಶಿಕ ಸಮಗ್ರ ಆರ್ಥಿಕ ಸಹಭಾಗಿತ್ವ ಒಪ್ಪಂದಕ್ಕೆ (ಆರ್‌ಸಿಇಪಿ) ಸಹಿ ಹಾಕಿಲ್ಲ. ಆದರೆ, ಯಾವ ಸಮಯದಲ್ಲಾದರೂ ನಿರ್ಧಾರ ಬದಲಿಸಬಹುದು. ಏಷ್ಯಾದ 16 ದೇಶಗಳೊಂದಿಗಿನ ಮುಕ್ತ ವ್ಯಾಪಾರಕ್ಕೆ ಭಾರತದ ಬಾಗಿಲು ತೆರೆಯಬಹುದು. ಇದರಿಂದ ಭಾರತದ ಹಲವು ಕ್ಷೇತ್ರಗಳು ನೆಲಕಚ್ಚಲಿವೆ. ಹಲವು ಕೋಟಿ ಜನರು ಉದ್ಯೋಗ ಕಳೆದುಕೊಳ್ಳಲಿದ್ದಾರೆ ಎಂದು ಆತಂಕ ವ್ಯಕ್ತಪಡಿಸಿದರು.

1894 ಬ್ರಿಟಿಷರು ಭೂ ಸುಧಾರಣೆ ಕಾಯ್ದೆಯೇ ಇಲ್ಲಿಯವರೆಗೂ ಜಾರಿಯಲ್ಲಿತ್ತು. 2013ರ ಕಾಯ್ದೆ ಸ್ವಲ್ಪಮಟ್ಟಿಗೆ ಅನುಕೂಲಕರವಾಗಿತ್ತು. ಅದರ ನ್ಯೂನತೆಗಳನ್ನು ಜನರು ಅರ್ಥ ಮಾಡಿಕೊಳ್ಳುವ ಮೊದಲೇ ಕರಾಳ ಕಾಯ್ದೆಗಳನ್ನು ಜಾರಿಗೆ ತರಲಾಯಿತು.ಇಂತಹ ಕಾಯ್ದೆಗಳಿಂದಾಗಿರೈತರು ಕಾರ್ಮಿಕರು, ಕಾರ್ಪೊರೇಟ್ ಕಂಪನಿಗಳ ಮೇಸ್ತ್ರಿಗಳಾಗುತ್ತಿದ್ದಾರೆ ಎಂದರು.

ಜಮೀನ್ದಾರಿ ಪದ್ಧತಿ ನಿರ್ಮೂಲನೆ ರಾಜಕೀಯ ನಿರ್ಧಾರವಾದರೂ ಅಂದು ಹಸಿರು ಕ್ರಾಂತಿಗೆ ನಾಂದಿಹಾಡಿತು. ಬಡವರಿಗೆ ಭೂಮಿ ದೊರೆತ ಪರಿಣಾಮ ಬಡತನ ರೇಖೆ ಶೇ 70ರಿಂದ 20ಕ್ಕೆ ಇಳಿಯಿತು ಎಂದು ಸ್ವಾತಂತ್ರ್ಯೋತ್ತರದ ದಿನಗಳನ್ನು ಮೆಲುಕು ಹಾಕಿದರು.

ಕೃಷಿ ಬೆಲೆ ಆಯೋಗದ ಮಾಜಿ ಅಧ್ಯಕ್ಷ ಪ್ರಕಾಶ್ ಕಮ್ಮರಡಿ, ಜನಪರ ಸಂಘಟನೆಗಳ ಮುಖಂಡರಾದ ಆಂಜನೇಯ ರೆಡ್ಡಿ, ಭಾಸ್ಕರ ರಾವ್, ವೀರಸಂಗಯ್ಯ, ವಿ.ಗಾಯತ್ರಿಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.