ಬೆಂಗಳೂರು: ‘ನಗರದ ರಾಕ್‌ಲೈನ್ ಮಾಲ್‌ನ ಮಾಲೀಕ ರಾಕ್‌ಲೈನ್ ವೆಂಕಟೇಶ್ ಮತ್ತು ಪದ್ಮಕುಮಾರಿ ಅವರು ಬಿಬಿಎಂಪಿಗೆ ₹8.5 ಕೋಟಿ ಅಧಿಕ ಮೊತ್ತದ ತೆರಿಗೆ ವಂಚಿಸಿದ್ದಾರೆ’ ಎಂದು ಬಿಜೆಪಿ ಬೆಂಗಳೂರು ದಕ್ಷಿಣ ಜಿಲ್ಲಾ ಘಟಕದ ಅಧ್ಯಕ್ಷ ಎನ್.ಆರ್. ರಮೇಶ್ ಆರೋಪಿಸಿದ್ದಾರೆ.

‘ಬಿಬಿಎಂಪಿಯ ದಾಸರಹಳ್ಳಿ ವಲಯದ ವ್ಯಾಪ್ತಿಯಲ್ಲಿರುವ ರಾಕ್‌ಲೈನ್ ಮಾಲ್ ಕೇವಲ 48,500 ಚದರ ಅಡಿ ವಿಸ್ತೀರ್ಣ ಇದೆ ಎಂದು ಬಿಬಿಎಂಪಿಗೆ ಸುಳ್ಳು ಮಾಹಿತಿ ನೀಡಿದ್ದಾರೆ. ಆದರೆ, ಆರು ಮಹಡಿ ಸೇರಿದಂತೆ 1,22,743 ಚದರ ಅಡಿ ವಿಸ್ತಾರದಲ್ಲಿ ಈ ಮಾಲ್ ನಿರ್ಮಾಣಗೊಂಡಿದೆ’ ಎಂದು ಅವರು ದೂರಿದರು.

‘ಪಾಲಿಕೆಗೆ ಬೃಹತ್ ಮೊತ್ತದ ತೆರಿಗೆ ವಂಚಿಸಿರುವ ಬಗ್ಗೆ ಮಹಾಲೆಕ್ಕಪರಿಶೋಧಕರ ಕಚೇರಿಯ ಅಧಿಕಾರಿಗಳು ಮತ್ತು ದಾಸರಹಳ್ಳಿ ಉಪವಿಭಾಗದ ಸಹಾಯಕ ಕಂದಾಯ ಅಧಿಕಾರಿಗಳು ನಡೆಸಿದ ಜಂಟಿ ಸಮೀಕ್ಷೆ ಕಾರ್ಯದಲ್ಲಿ ತಿಳಿದು ಬಂದಿದೆ. 74,243 ಚದರ ಅಡಿ ವಿಸ್ತೀರ್ಣವನ್ನು ಮುಚ್ಚಿಟ್ಟು, ಪಾಲಿಕೆಗೆ ತೆರಿಗೆ ವಂಚಿಸಲಾಗಿದೆ’ ಎಂದು ಹೇಳಿದರು.

‘2012ರ ಅ.25ರಂದು ₹3.78 ಲಕ್ಷ ಮಾತ್ರ ತೆರಿಗೆ ಪಾವತಿಸಿದ್ದಾರೆ. ಬಡ್ಡಿ ಸೇರಿದಂತೆ ₹2.63 ಕೋಟಿ ಪಾವತಿಸುವಂತೆ 2015ರಲ್ಲಿಯೇ ಬಿಬಿಎಂಪಿಯು ರಾಕ್‌ಲೈನ್ ವೆಂಕಟೇಶ್ ಅವರಿಗೆ ನೋಟಿಸ್ ನೀಡಿತ್ತು. ಆದರೆ, ಪಾಲಿಕೆಯು ನೀಡಿದ್ದ ನೋಟಿಸ್‌ಗಳನ್ನು ಪ್ರಶ್ನಿಸಿ, ಅವರು ನ್ಯಾಯಾಲಯದಲ್ಲಿ ತಡೆಯಾಜ್ಞೆ ತಂದಿದ್ದರು. ಆದರೆ, ನ್ಯಾಯಾಲಯ ಈ ಅರ್ಜಿಯನ್ನು ವಜಾಗೊಳಿಸಿದೆ’ ಎಂದರು.

‘2011–12ರಿಂದ 2020–21ರವರೆಗಿನ ಅವಧಿಯವರೆಗೆ ಒಟ್ಟು ₹3.8 ಕೋಟಿ ಆಸ್ತಿ ತೆರಿಗೆ, ವಾರ್ಷಿಕ ಬಡ್ಡಿದರ, ದಂಡ ಸೇರಿ, ₹8.51 ಕೋಟಿ ತೆರಿಗೆ ಪಾವತಿಸಬೇಕಾಗಿದೆ’ ಎಂದೂ ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.