ಬೆಂಗಳೂರು: ರಾಜ್ಯದ ನದಿಗಳನ್ನು ಮೊದಲು ಶುದ್ಧ ಮಾಡಿ. ನಂತರ ದೇಶದ ನದಿಗಳ ಶುದ್ಧೀಕರಣಕ್ಕೆ ಕೈಹಾಕಿ. – ಇದು ಸಾಣೇಹಳ್ಳಿಯ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಅವರ ಮಾತು.

ಗ್ರಾಮಸೇವಾ ಸಂಘ, ಲೋಕಸೇವಾ ವೇದಿಕೆ, ಕರ್ನಾಟಕ ಗಾಂಧಿ ಸ್ಮಾರಕ ನಿಧಿ, ಭಾರತ ಯಾತ್ರಾ ಕೇಂದ್ರದ ಆಶ್ರಯದಲ್ಲಿ ಸಂತ ವಿಜ್ಞಾನಿ ಡಿ.ಜಿ.ಅಗರ್‌ವಾಲ್ ಸ್ಮರಣಾರ್ಥ ಹಮ್ಮಿಕೊಂಡ ‘ನದಿಗಳನ್ನು ಉಳಿಸೋಣ ಬನ್ನಿ’ ವಿಷಯ ಕುರಿತ ವಿಚಾರ ಸಂಕಿರಣದಲ್ಲಿ ಅವರು ಮಾತನಾಡಿದರು.

‘ನಮ್ಮ ರಾಜ್ಯದಲ್ಲಿ 17 ನದಿಗಳಿವೆ. ಮೊದಲು ಅವುಗಳನ್ನು ಉಳಿಸಬೇಕು. ನಮ್ಮಲ್ಲಿ ಸಾಕಷ್ಟು ಆಯೋಗಗಳು, ಸಮಿತಿಗಳು ಇವೆ. ಆದರೆ, ರಚನಾತ್ಮಕ ಕೆಲಸ ಆಗಬೇಕಿದೆ’ ಎಂದರು.

‘ಹಿಂದೆ ತುಂಗಾ ಪಾನ– ಗಂಗಾ ಸ್ನಾನ ಎಂಬ ಮಾತು ಇತ್ತು. ಈಗ ಅದು ಸಾಧ್ಯವೇ? ಎರಡೂ ನದಿಗಳು ಮಲಿನಗೊಂಡಿವೆ. ನಮ್ಮ ಸಂಸ್ಕೃತಿ ನದಿ ದಂಡೆಗಳಿಂದ ಆರಂಭವಾಗಿವೆ. ಹಾಗೆ ಬೆಳೆದ ಅದೇ ನಾಗರಿಕತೆ ಇಂದು ನದಿ ಮೂಲವನ್ನೇ ಬರಿದು ಮಾಡುತ್ತಿದೆ. ಮನುಷ್ಯನ ಸಂಗ್ರಹ ಪ್ರವೃತ್ತಿಯಿಂದ ನದಿ ಮೂಲಗಳು ನಾಶವಾಗುತ್ತಿವೆ. ಶರಣರಲ್ಲಿ ಕಾಯಕ – ದಾಸೋಹ ಸಿದ್ಧಾಂತ ಇತ್ತು. ಅದೇ ಪ್ರಜ್ಞೆ ಇಂದೂ ಮುಂದುವರಿದಿದ್ದರೆ ನದಿಗಳಿಗೆ ಈ ಪರಿಸ್ಥಿತಿ ಬರುತ್ತಿರಲಿಲ್ಲ. ಇಂದು ಜೀವಜಲವನ್ನು ದುಡ್ಡು ಕೊಟ್ಟು ಖರೀದಿಸುವ ಪರಿಸ್ಥಿತಿ ಬಂದಿದೆ’ ಎಂದು ವಿಷಾದ ವ್ಯಕ್ತಪಡಿಸಿದರು.

ಗಂಗೆ ಶುದ್ಧೀಕರಣದ ₹20 ಸಾವಿರ ಕೋಟಿ ವ್ಯರ್ಥ: ರಾಷ್ಟ್ರೀಯ ಸ್ವಾಭಿಮಾನಿ ಆಂದೋಲನದ ರಾಷ್ಟ್ರೀಯ ಸಂಚಾಲಕ ಬಸವರಾಜ ಪಾಟೀಲ ಮಾತನಾಡಿ, ‘ಗಂಗಾ ನದಿ ಶುದ್ಧೀಕರಣದ ಹೆಸರಿನಲ್ಲಿ ₹ 20 ಸಾವಿರ ಕೋಟಿ ವ್ಯರ್ಥವಾಗಿದೆ. ಆದರೆ, ನದಿ ಪಾತ್ರದಲ್ಲಿ ಯಾವುದೇ ಗಂಗಾನದಿ ಶುದ್ಧೀಕರಣದ ಉಸ್ತುವಾರಿ ಹೊತ್ತಿರುವ ಉಮಾಭಾರತಿ ಅವರೂ ಕೂಡಾ ತಟಸ್ಥರಾಗಿದ್ದಾರೆ’ ಎಂದರು.

‘ಜಲ ಸಂಬಂಧಿಸಿ ನಾವು ಮಾಡುವ ಸಣ್ಣ ಚಟುವಟಿಕೆಗಳೂ ನದಿ ಮೇಲೆ ಪರಿಣಾಮ ಬೀರುತ್ತವೆ. ಮೊದಲು ಮರಳುಗಾರಿಕೆ ನಿಲ್ಲಿಸಬೇಕು. ಅಣೆಕಟ್ಟೆ ಕಟ್ಟಬಾರದು, ನದಿಗಳನ್ನು ಉಳಿಸುವಲ್ಲಿ ನಾಗರಿಕರಾದ ನಾವೇ ವಿಫಲರಾದರೆ ಹೇಗೆ?’ ಎಂದು ಜಲ ಸಂರಕ್ಷಣಾ ತಜ್ಞ ವಿಶ್ವನಾಥ ಶ್ರೀಕಂಠಯ್ಯ ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.