ಬೆಂಗಳೂರು: ‘ಶಬರಿಮಲೈ ದೇವಸ್ಥಾನಕ್ಕೆ ಮಹಿಳೆಯರ ಪ್ರವೇಶವನ್ನು, ಮಹಿಳೆಯರೇ ವಿರೋಧಿಸುತ್ತಿರುವುದು ಎಂತಹ ಅಣಕ’ ಎಂದು ಮುರುಘಾಮಠದ ಶಿವಮೂರ್ತಿ ಮುರುಘಾ ಶರಣರು ಬೇಸರ ವ್ಯಕ್ತಪಡಿಸಿದರು.

ಬಸವಕೇಂದ್ರ,ಶರಣ ಸಂಸ್ಕೃತಿ ಉತ್ಸವ ಸಮಿತಿನಗರದಲ್ಲಿ ಶನಿವಾರ ಆಯೋಜಿಸಿದ್ದ ಶರಣ ಸಂಸ್ಕೃತಿ ಉತ್ಸವದಲ್ಲಿ ‘ಬದುಕು ಮತ್ತು ಧನ್ಯತೆಯ ಮಾರ್ಗ’ ಚಿಂತನಾಗೋಷ್ಠಿಯಲ್ಲಿ ಅವರು ಮಾತನಾಡಿದರು. ಅಂದಿನ ಮೂಲಭೂತವಾದಿ, ಸಂಪ್ರದಾಯವಾದಿತ್ವದ ವಾತಾವರಣ
ದಲ್ಲಿಮಹಿಳೆಯರಿಗೆ ಧಾರ್ಮಿಕ ಸ್ವಾತಂತ್ರ್ಯ ಸಿಗಲುಬಸವಣ್ಣನೇ ಕಾರಣ. ಆದರೆ, ಇಂದು ಮಹಿಳೆಯರ ಧಾರ್ಮಿಕ ಸ್ವಾತಂತ್ರ್ಯ ಏನಾಗುತ್ತಿದೆ ಎಂಬುದನ್ನು ಚಿಂತಿಸಬೇಕಿದೆ’ ಎಂದರು.

‘ಶರೀರವನ್ನು ಶಿವಾಲಯವಾಗಿಸಿಕೊಳ್ಳಲು ಶೂದ್ರಾದಿ ಶೂದ್ರರಿಗೆ ಲಿಂಗ ಕಟ್ಟಿ, ವರ್ಗ ವೈಷಮ್ಯಗಳನ್ನು ತೊಡೆದು, ಸಮಾನತೆಯ ಬದುಕು ನೀಡಿದ ಬಸವ ಮಾರ್ಗ ನಿಜಕ್ಕೂ ಧನ್ಯತಾ ಮಾರ್ಗ. ಮಠದ ಶಾಂತವೀರ ಸ್ವಾಮೀಜಿಯ ಕರ್ತೃ ಗದ್ದುಗೆಗೆ 15 ವರ್ಷಗಳಿಂದ ಮಹಿಳೆಯರಿಗೆಪ್ರವೇಶವಿರಲಿಲ್ಲ. ನಾನು ಪೀಠಕ್ಕೆ ಬಂದ ಮೇಲೆ ಮಹಿಳೆಯರಿಗೆ ಮುಕ್ತ ಅವಕಾಶ ನೀಡಿರುವೆ. ಇದು ನನ್ನ ಬದುಕಿನ ಧನ್ಯತೆ’ ಎಂದರು.

‘ಸ್ವತಂತ್ರ ಭಾರತದಲ್ಲಿಂದು ಜಾತಿ, ವರ್ಗ–ವೈಷಮ್ಯಗಳ ರಾಜಕಾರಣದಿಂದ ಯುವಜನಾಂಗವನ್ನು ಜಾತಿಯ ಹೆಸರಿನಲ್ಲಿ ರೊಚ್ಚಿಗೆ ಎಬ್ಬಿಸುತ್ತಿರುವುದುನೋವಿನ ಸಂಗತಿ. ಇತಿಹಾಸ, ಸಿದ್ಧಾಂತ, ವೈಚಾರಿಕತೆಯನ್ನು ಹೇಳುವ ಸ್ವಾಮಿ ನಾನು. ಹಾಗಾಗಿ, ಯುವ ಜನತೆ ನಾಡಿನ ಸಂಸ್ಕೃತಿ, ವೈಚಾರಿಕತೆಯತ್ತ ಮುಖಮಾಡಬೇಕು’ ಎಂದು ನುಡಿದರು.

‘ಗಾಂಧಿ ಕನಸು ಕಂಡ ಸ್ವತಂತ್ರ ಭಾರತ, ಜಾತಿವರ್ಗೀಕರಣವಿಲ್ಲದ, ಸಮಾನತೆಯ ಭಾರತ. ಅದು ಇಂದಿಗೂ ಕಾಣಲಾಗುತ್ತಿಲ್ಲ.ಸಂಸತ್ತಿನಲ್ಲಿ ಮಹಿಳೆಯರಿಗೆಶೇಕಡ 33ರಷ್ಟು ಮೀಸಲಾತಿ ಇನ್ನೂ ಸಿಕ್ಕಿಲ್ಲ. ಮುಕ್ತವಾಗಿ ದೇವಸ್ಥಾನಗಳನ್ನು ಪ್ರವೇಶಿಸುವ ಅವಕಾಶಗಳೂ ಇಲ್ಲ. ಭವಿಷ್ಯದ ಭಾರತ ಬಸವಣ್ಣನ ಕಲ್ಪನೆಯಂತೆ ರೂಪುಗೊಳ್ಳಬೇಕು’ಎಂದು ಉಪಮುಖ್ಯಮಂತ್ರಿ ಜಿ.ಪರಮೇಶ್ವರ ಅಭಿಪ್ರಾಯಪಟ್ಟರು.

ಅಕ್ಕರೆಯಿಂದ ಕರೆದರು: ತಾಯಿ ಯೊಬ್ಬಳು ಮಗು ಹುಟ್ಟಿದ ದಿನವೇ ಅದನ್ನು ಅನಾಥವಾಗಿಸಿ ಮಠಕ್ಕೆ ಬಿಟ್ಟು ಹೋಗಿದ್ದ ಹಸುಳೆಗೆಶ್ರೀಗಳು ಚಿಗುರು ಎಂದು ಹೆಸರಿಟ್ಟು ಅಕ್ಷರ ಸಂಸ್ಕೃತಿಯನ್ನು ನೀಡುತ್ತಿದ್ದಾರೆ. ವೇದಿಕೆ ಮೇಲೆ ಆಕಂದ ಓಡಾಡುತ್ತಿದ್ದಾಗ ಗಣ್ಯರು ಮಗುವಿನತ್ತ ಕೈ ಮಾಡಿ ಅಕ್ಕರೆ ತೋರಿದರೆ, ಹಾಲ್ಗೆನ್ನೆಯ ನಗುವ ಬೀರುತ್ತಲೆ ಓಡಾಡುತ್ತಿದ್ದುದು ನೆರೆದವರನ್ನು ಆಕರ್ಷಿಸಿತು. ಅನಾಥ ಮಕ್ಕಳಿಗೆ ಆಶ್ರಯವಾಗಿ,ಅಕ್ಷರ ಸಂಸ್ಕೃತಿಯನ್ನುಪಡೆಯುತ್ತಿರುವ ಮಠದಮಕ್ಕಳುವಚನಾಭಿನಯ ಪ್ರದರ್ಶಿಸಿದರು. ಇದಕ್ಕೆ ಕೆಲವುಚಿಣ್ಣರೂ ಹೆಜ್ಜೆ ಹಾಕಿದರು. ಶರಣೆಯರಿಂದ ವಚನ ಗಾಯನ ಮೊಳಗಿತು.

‘ನನ್ ಹತ್ರ ಪವರ್ ಇಲ್ರಪ್ಪಾ...’

ಸಚಿವ ಡಿ.ಕೆ.ಶಿವಕುಮಾರ್, ವೇದಿಕೆಯತ್ತ ಬರುತ್ತಿದ್ದಂತೆ ನೆರೆದವರು ಪವರ್ ಬಂತು..., ಪವರ್ ಮಿನಿಸ್ಟರ್ ಬಂದ್ರು, ಪವರ್,ಪವರ್ ಎಂದು ಘೋಷಣೆಕೂಗುತ್ತಿದ್ದರು. ‘ನನ್ನ ಹತ್ರ ಪವರ್ ಇಲ್ಲ ಎಂದು ಶಿವಕುಮಾರ್ ಕೈಸನ್ನೆ ಮೂಲಕ ಪ್ರತಿಕ್ರಿಯಿಸಿದರು.

ಭಾಷಣದ ನಡುವೆಇದನ್ನೇ ಪುನರುಚ್ಚರಿಸಿದ ಅವರು, ‘ಹಿಂದಿನ ಕಾಲದಲ್ಲಿ ರಾಜಕಾರಣಿಗಳನ್ನು ದೇವರಂತೆ ಗೌರವಿಸುತ್ತಿದ್ದರು. ಆದರೆ,
ಇಂದಿನ ದಿನಗಳಲ್ಲಿ ಟಿ.ವಿ. ಮಾಧ್ಯಮಗಳು ದಿನವಿಡೀ ನಮ್ಮನ್ನು,ತೋರಿಸಿ ಕಳ್ಳನಂತೆ ಬಿಂಬಿಸಿವೆ. ಒಟ್ಟಾರೆಯಾಗಿ ಅವುಗಳ ಬಾಯಿಗೆ ಆಹಾರವಾಗಿ ಬಿಟ್ಟಿದ್ದೇವೆ’ಎಂದು ಹಾಸ್ಯ ಚಟಾಕಿ ಹಾರಿಸುತ್ತಲೇ ಬೇಸರವ್ಯಕ್ತಪಡಿಸಿದರು.

‘ಅಧಿಕಾರ ಹೆಚ್ಚಿದ್ದರೆ, ಶತ್ರುಗಳೂ ಹೆಚ್ಚಾಗುತ್ತಾರೆ.ಕಡಿಮೆ ಅಧಿಕಾರವಿದ್ದರೆ ಕಡಿಮೆ ಶತ್ರುಗಳಿರುತ್ತಾರೆ. ಅಧಿಕಾರ ಇಲ್ಲದಿದ್ದರೆ, ಶತ್ರುಗಳೇ ಇರಲ್ಲ’ ಎಂದು ವ್ಯಾಖ್ಯಾನಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.