ಬೆಂಗಳೂರು: ಜಾಮೀನು ಹಾಗೂ ಭದ್ರತಾ ನಿಯಮಗಳನ್ನು ಉಲ್ಲಂಘಿಸಿರುವ ರೌಡಿ ಅಮೀನುದ್ದೀನ್ ನಯೀಮ್ ಎಂಬಾತನನ್ನು ಪೂರ್ವ ವಿಭಾಗದ ಪೊಲೀಸರು ವಶಕ್ಕೆ ಪಡೆದು, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.

‘ಶಿವಾಜಿನಗರದ ಸ್ಲಾಟರ್ ಹೌಸ್ ನಿವಾಸಿಯಾಗಿರುವ ಆರೋಪಿಯು ಜಾಮೀನಿನ ಮೇಲೆ ಬಿಡುಗಡೆಯಾದ ನಂತರ ಸಮಾಜಘಾತುಕ ಚಟುವಟಿಕೆಗಳಲ್ಲಿ ತೊಡಗಿದ್ದ. ಸಮಾಜದಲ್ಲಿ ಶಾಂತಿ ಕದಡಲು ಮುಂದಾಗಿದ್ದ. ಸಾರ್ವಜನಿಕ ಆಸ್ತಿಪಾಸ್ತಿಗೂ ಹಾನಿಯುಂಟು ಮಾಡುತ್ತಿದ್ದ’ ಎಂದು ಪೊಲೀಸರು ತಿಳಿಸಿದ್ದಾರೆ.

‘ಭಾರತಿನಗರ ಠಾಣೆ ಪೊಲೀಸರು ಜ.13ರಂದು ಆರೋಪಿಯನ್ನು ಬಂಧಿಸಿದ್ದರು. ₹1 ಲಕ್ಷದ ಶ್ಯೂರಿಟಿ ಹಾಗೂ ವೈಯಕ್ತಿಕ ಮುಚ್ಚಳಿಕೆ ಪಡೆದು ಕೆಲ ಷರತ್ತುಗಳ ಮೇಲೆ ಆತನಿಗೆ ಜಾಮೀನು ಮಂಜೂರು ಮಾಡಲಾಗಿತ್ತು. ಕಾನೂನು ಬಾಹಿರ ಚಟುವಟಿಕೆಗಳಲ್ಲಿ ಭಾಗಿಯಾಗದಂತೆಯೂ ಸೂಚಿಸಲಾಗಿತ್ತು. ಹೀಗಿದ್ದರೂ ಆರೋಪಿ ಅಪರಾಧ ಕೃತ್ಯಗಳಲ್ಲಿ ತೊಡಗಿದ್ದ’ ಎಂದು ಹೇಳಿದ್ದಾರೆ.

ಶಬ್ಬೀರ್ ಬಂಧನ: ‘ವೈಯಕ್ತಿಯ ಮುಚ್ಚಳಿಕೆ ಮೇಲೆ ಜಾಮೀನು ಪಡೆದು ಜೈಲಿನಿಂದ ಬಿಡುಗಡೆಯಾಗಿದ್ದ ಶಬ್ಬೀರ್ (26) ಎಂಬಾತ ಮತ್ತೆ ಅಪರಾಧ ಕೃತ್ಯಗಳನ್ನು ಮುಂದುವರಿಸಿದ್ದ. ಹೀಗಾಗಿ ಆತನನ್ನೂ ಬಂಧಿಸಲಾಗಿದೆ’ ಎಂದು ಪೊಲೀಸರು ತಿಳಿಸಿದ್ದಾರೆ.

‘ಆರೋಪಿಯು ಆಗಸ್ಟ್ 25ರಂದು ಬಂಬೂ ಬಜಾರ್ನ ಎನ್.ಕೆ.ಹಾಲ್ ಬಳಿ ಅನುಮಾನಾಸ್ಪದವಾಗಿ ನಿಂತುಕೊಂಡಿದ್ದ.ಗಸ್ತಿನಲ್ಲಿದ್ದ ಹೆಡ್ಕಾನ್ಸ್ಟೆಬಲ್ ಮಾಝರ್ ಬೇಗ್ ಅವರು ವಿಚಾರಿಸಿದಾಗ ಸಕಾರಣ ನೀಡಿರಲಿಲ್ಲ. ಅವರು ನೀಡಿದ ದೂರಿನ ಆಧಾರದಲ್ಲಿ ಆರೋಪಿಯನ್ನು ಬಂಧಿಸಲಾಗಿದೆ’ ಎಂದು ಮಾಹಿತಿ ನೀಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.