ಬೆಂಗಳೂರು: ‘ವೀರಶೈವ ಸಮಾಜ ಯಾರನ್ನೂ ವಿರೋಧಿಸಿಲ್ಲ. ಜಾತಿ ಭೇದ ಮಾಡದೆಯೇ ಎಲ್ಲ ಸಮುದಾಯಗಳಿಗೆ ಶಿಕ್ಷಣ, ದಾಸೋಹ ನೀಡುವ ಪರಂಪರೆ ಹೊಂದಿದೆ’ ಎಂದು ಶಿವಗಂಗಾ ಕ್ಷೇತ್ರದ ಮೇಲಣಗವಿ ವೀರಸಿಂಹಾಸನ ಸಂಸ್ಥಾನ ಮಠದ ಪಟ್ಟಾಧ್ಯಕ್ಷ ಡಾ.ಮಲಯ ಶಾಂತಮುನಿ ಶಿವಾಚಾರ್ಯ ಸ್ವಾಮೀಜಿ ಹೇಳಿದರು.

ನಗರದ ಅರಳೇಪೇಟೆಯಲ್ಲಿ ಭಾನುವಾರ ನಡೆದ ಸೋಮೇಶ್ವರಸ್ವಾಮಿ ವೀರಶೈವ ಸಮಾಜ ಸೇವಾ ಸಂಘದ ಶತಮಾನೋತ್ಸವ, ರೇಣುಕಾ ಚಾರ್ಯರು ಮತ್ತು ಬಸವೇಶ್ವರ ಜಯಂತಿ ಸಮಾರಂಭದಲ್ಲಿ ಮಾತನಾಡಿದ ಅವರು,‘100 ವರ್ಷಗಳಿಂದಲೂ ವಿವಿಧ ಸಾಮಾಜಿಕ ಕಾರ್ಯಗಳನ್ನು ಕೈಗೊಳ್ಳುತ್ತಿರುವ ಸಂಘದ ಚಟುವಟಿಕೆಗಳು ಶ್ಲಾಘನೀಯ’ ಎಂದರು.

ವಿಭೂತಿಪುರ ಮಠದ ಮಹಾಂತಲಿಂಗ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ, ‘ಆರ್ಥಿಕವಾಗಿ, ಸಾಮಾಜಿಕವಾಗಿ ಮತ್ತು ಶೈಕ್ಷಣಿಕವಾಗಿ ಪ್ರಗತಿ ಸಾಧಿಸಿದ್ದರೂ ಧರ್ಮ, ಸಂಪ್ರದಾಯಗಳ ಆಚರಣೆಗಳಲ್ಲಿ ಜನರು ಎಂದಿಗೂ ಹಿಂದೆ ಬಿದ್ದಿಲ್ಲ. ಇದು ನಮ್ಮ ದೇಶದ ಹೆಮ್ಮೆಯ ಪ್ರತೀಕ' ಎಂದು ನುಡಿದರು.

‘ಸೋಮೇಶ್ವರಸ್ವಾಮಿ ವೀರಶೈವ ಸಮಾಜ ಸೇವಾ ಸಂಘದ ಯಶಸ್ಸಿನ ಹಿಂದೆ ಸಾಕಷ್ಟು ಜನರ ಶ್ರಮ ಅಡಗಿದೆ. ಪ್ರತಿ ವರ್ಷ ನಾನಾ ಕಾರ್ಯಕ್ರಮಗಳನ್ನು ಕೈಗೊಳ್ಳುವ ಮೂಲಕ ಬಸವಾದಿ ಶರಣರ ಚಿಂತನೆಗಳನ್ನು ಎತ್ತಿ ಹಿಡಿಯುವ ಕೆಲಸ ಮಾಡುತ್ತಿದೆ’ ಎಂದು ಶ್ಲಾಘಿಸಿದರು.

ಕಾರ್ಯಕ್ರಮದಲ್ಲಿ ‘ಅರುಣಶ್ರೀ' ಶತಮಾನೋತ್ಸವದ ಸ್ಮರಣ ಸಂಚಿಕೆಯನ್ನು ಬಿಡುಗಡೆ ಮಾಡಲಾಯಿತು. ಪಿಎಚ್.ಡಿ ಪದವಿ ಪಡೆದ ಡಾ. ಮಲಯಶಾಂತಮುನಿ ಶಿವಾಚಾರ್ಯ ಸ್ವಾಮೀಜಿ ಅವರನ್ನುಇದೇ ವೇಳೆ ಅಭಿನಂದಿಸಲಾಯಿತು. ಮಾಜಿ ಶಾಸಕ ಪಿ.ಎಸ್. ಪ್ರಕಾಶ್, ಬಾಳೆಹೊನ್ನೂರು ಶಾಖಾ ಮಠದ ಯಡಿಯೂರು ಕ್ಷೇತ್ರದ ರೇಣುಕ ಶಿವಾಚಾರ್ಯ ಸ್ವಾಮೀಜಿ, ಮಾಜಿ ಸಚಿವ ಮಾಲೂರು ಎಸ್.ಎನ್. ಕೃಷ್ಣಯ್ಯ ಶೆಟ್ಟಿ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.