ಬೆಂಗಳೂರು: ಯುವಜನರಲ್ಲಿ ಆತ್ಮಹತ್ಯೆ ತಡೆಗೆ ಸಂಬಂಧಿಸಿದಂತೆ ರಾಷ್ಟ್ರೀಯ ಮಾನಸಿಕ ಆರೋಗ್ಯ ಹಾಗೂ ನರವಿಜ್ಞಾನ ಸಂಸ್ಥೆಯು (ನಿಮ್ಹಾನ್ಸ್) ಎರಡನೇ ಆವೃತ್ತಿಯ ಕಿರುಚಿತ್ರ ಉತ್ಸವ ಹಮ್ಮಿಕೊಂಡಿದೆ.

ಸಂಸ್ಥೆಯ ಸೈಕಿಯಾಟ್ರಿಕ್ ಸೋಶಿಯಲ್ ವರ್ಕ್ ವಿಭಾಗವು ಈ ಉತ್ಸವ ಹಮ್ಮಿಕೊಂಡಿದೆ. ಈ ಉತ್ಸವಕ್ಕೆ ಪ್ರವೇಶ ಉಚಿತ ಇರಲಿದ್ದು, ವಿಜೇತರಿಗೆ ₹1 ಲಕ್ಷ ನಗದು ಬಹುಮಾನ ನೀಡಲಾಗುತ್ತದೆ.

ಕಿರುಚಿತ್ರಕ್ಕೆ 6 ನಿಮಿಷ ಸಮಯ ನಿಗದಿಪಡಿಸಲಾಗಿದ್ದು, ಯಾವುದೇ ಭಾಷೆಯಲ್ಲಿ ಕಿರುಚಿತ್ರವನ್ನು ನಿರ್ಮಿಸಬಹುದಾಗಿದೆ. ಆದರೆ, ಕಿರುಚಿತ್ರವು ಇಂಗ್ಲಿಷ್ ಉಪ ಶೀರ್ಷಿಕೆಯನ್ನು (ಸಬ್ ಸೈಟಲ್) ಹೊಂದಿರಬೇಕು. ಅರ್ಜಿ ಸಲ್ಲಿಸುವವರು ಕಿರುಚಿತ್ರದ ನಿರ್ದೇಶಕರಾಗಿರಬೇಕು. ಕಿರುಚಿತ್ರ ಸಲ್ಲಿಕೆಗೆ ಆ.10 ಕಡೆಯ ದಿನಾಂಕವಾಗಿದೆ ಎಂದು ಸಂಸ್ಥೆ ತಿಳಿಸಿದೆ.

‘ಮೊದಲ ಆವೃತ್ತಿಯ ಕಿರುಚಿತ್ರ ಉತ್ಸವಕ್ಕೆ ಉತ್ತಮ ಸ್ಪಂದನೆ ವ್ಯಕ್ತವಾಗಿತ್ತು. ಆತ್ಮಹತ್ಯೆ ತಡೆ ಹಾಗೂ ಈ ಬಗ್ಗೆ ಜಾಗೃತಿ ಮೂಡಿಸುವ ಉದ್ದೇಶದಿಂದ ಕಿರುಚಿತ್ರ ಉತ್ಸವ ಹಮ್ಮಿಕೊಳ್ಳಲಾಗಿದೆ. ಮಾನಸಿಕ ಆರೋಗ್ಯ ಸುಧಾರಿಸುವುದು ನಮ್ಮ ಆದ್ಯತೆಯಾಗಿದೆ. ಈ ಉತ್ಸವದಲ್ಲಿ ಭಾಗವಹಿಸಲು ಮುಕ್ತ ಅವಕಾಶ ನೀಡಲಾಗಿದೆ. ಆಸಕ್ತರು ಹೆಸರು ನೋಂದಾಯಿಸಿಕೊಳ್ಳಬಹುದು’ ಎಂದು ಉತ್ಸವದ ಸಂಯೋಜಕ ಡಾ.ಅವಿನಾಶ್ ವಿ. ಚೆರಿಯನ್ ತಿಳಿಸಿದ್ದಾರೆ.

ಸಂಪರ್ಕಕ್ಕೆ: 9901446798

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.