ಬೆಂಗಳೂರು: ಮಾನಸಿಕ ಅನಾರೋಗ್ಯ ಸಮಸ್ಯೆಗಳಿಗೆ ಸಂಬಂಧಿಸಿದಂತೆ ವಿಡಿಯೊ ಕರೆಗಳ ಮೂಲಕವೂ ಆಪ್ತ ಸಮಾಲೋಚಕರನ್ನು ಸಂಪರ್ಕಿಸಿ, ಪರಿಹಾರೋಪಾಯ ಕಂಡುಕೊಳ್ಳುವ ಅವಕಾಶವನ್ನು ರಾಷ್ಟ್ರೀಯ ಮಾನಸಿಕ ಆರೋಗ್ಯ ಹಾಗೂ ನರವಿಜ್ಞಾನ ಸಂಸ್ಥೆಯ (ನಿಮ್ಹಾನ್ಸ್) ‘ಟೆಲಿ ಮನಸ್’ ಸಹಾಯವಾಣಿಯಡಿ ಒದಗಿಸಲಾಗಿದೆ.

ಕೌಟುಂಬಿಕ ಸಮಸ್ಯೆ, ಆರ್ಥಿಕ ಸಂಕಷ್ಟ, ಉದ್ಯೋಗ ನಷ್ಟ, ಶೈಕ್ಷಣಿಕ ಒತ್ತಡ ಸೇರಿ ವಿವಿಧ ಕಾರಣಗಳಿಂದ ಎಲ್ಲ ವಯೋಮಾನದವರು ಇತ್ತೀಚಿನ ವರ್ಷಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಮಾನಸಿಕ ಅನಾರೋಗ್ಯ ಸಮಸ್ಯೆಗಳಿಗೆ ಒಳಗುತ್ತಿದ್ದಾರೆ. ಈ ಸಮಸ್ಯೆ ಹಾಗೂ ಒತ್ತಡಕ್ಕೆ ಒಳಗಾದವರಿಗೆ ನೆರವಾಗಲು ಸಂಸ್ಥೆಯು 2022ರಲ್ಲಿ ‘ಟೆಲಿ ಮನಸ್’ ಉಚಿತ ಸಹಾಯವಾಣಿಯನ್ನು ಪ್ರಾರಂಭಿಸಿತ್ತು. ಈ ಸಹಾಯವಾಣಿಗೆ ದೇಶದ ವಿವಿಧೆಡೆಯಿಂದ ದೂರವಾಣಿ ಕರೆಗಳು ಬರುತ್ತಿದ್ದು, ಈವರೆಗೆ 15 ಲಕ್ಷ ಕರೆಗಳನ್ನು ಸ್ವೀಕರಿಲಾಗಿದೆ. ಕೆಲ ಸಂಕೀರ್ಣ ಸಮಸ್ಯೆಗಳನ್ನು ದೂರವಾಣಿ ಕರೆಗಳ ಮೂಲಕ ನಿವಾರಿಸುವುದು ಕಷ್ಟ ಸಾಧ್ಯವಾದ್ದರಿಂದ ಪ್ರಾಯೋಗಿಕವಾಗಿ ಉಚಿತ ವಿಡಿಯೊ ಕರೆ ಪ್ರಾರಂಭಿಸಲಾಗಿದೆ.

ಸಂಸ್ಥೆಯ ಬೆಂಗಳೂರು ಹಾಗೂ ಧಾರವಾಡದ ಕೇಂದ್ರದಲ್ಲಿ ಟೆಲಿ ಮನಸ್ ಘಟಕ ಕಾರ್ಯನಿರ್ವಹಿಸುತ್ತಿದೆ. ವಾರದ ಎಲ್ಲ ದಿನಗಳು 24 ಗಂಟೆಗಳೂ ದೂರವಾಣಿ ಕರೆಗಳನ್ನು 20 ಭಾಷೆಗಳಲ್ಲಿ ಸ್ವೀಕರಿಸಲಾಗುತ್ತಿದೆ. ಅಂತರರಾಷ್ಟ್ರೀಯ ಮಾಹಿತಿ ತಂತ್ರಜ್ಞಾನ ಸಂಸ್ಥೆಯು (ಐಐಐಟಿ–ಬಿ) ಈ ಸಹಾಯವಾಣಿಗೆ ತಾಂತ್ರಿಕ ನೆರವು ಒದಗಿಸುತ್ತಿದೆ. ವಿಡಿಯೊ ಕರೆಗೆ ಸಂಬಂಧಿಸಿದಂತೆಯೂ ಐಐಐಟಿ–ಬಿ ರೂಪುರೇಷೆ ಸಿದ್ಧಪಡಿಸಿತ್ತು. ರಾಜ್ಯದಲ್ಲಿ ಪ್ರಾರಂಭಿಸಲಾದ ವಿಡಿಯೊ ಕರೆ ಸೇವೆಯನ್ನು ಮುಂದಿನ ದಿನಗಳಲ್ಲಿ ದೇಶದಾದ್ಯಂತ ವಿಸ್ತರಿಸಲು ಉಭಯ ಸಂಸ್ಥೆಗಳು ನಿರ್ಧರಿಸಿವೆ.

ಕರೆ ಹೆಚ್ಚಳ: ಟೆಲಿ ಮನಸ್ ಸಹಾಯವಾಣಿಗೆ ಬರುವ ದೂರವಾಣಿ ಕರೆಗಳ ಸಂಖ್ಯೆ ಏರುಗತಿ ಪಡೆದಿದೆ. ಪ್ರತಿನಿತ್ಯ ಸರಾಸರಿ 3,500 ಕರೆಗಳನ್ನು ಸ್ವೀಕರಿಸಲಾಗುತ್ತಿದೆ. ನಿಮ್ಹಾನ್ಸ್ ವಿಶ್ಲೇಷಣೆ ಪ್ರಕಾರ ಈ ಸಹಾಯವಾಣಿಗೆ 15ರಿಂದ 30 ವರ್ಷದೊಳಗಿನವರು ಅಧಿಕ ಸಂಖ್ಯೆಯಲ್ಲಿ ಕರೆ ಮಾಡುತ್ತಿದ್ದಾರೆ. ಒತ್ತಡಕ್ಕೆ ಒಳಗಾದವರು, ವ್ಯಥೆಗೆ ಒಳಪಟ್ಟವರು, ಕೌಟುಂಬಿಕ ಸಮಸ್ಯೆಗೆ ಒಳಗಾದವರು, ಶೈಕ್ಷಣಿಕ ಒತ್ತಡಕ್ಕೆ ಒಳಗಾದವರು, ಆತ್ಮಹತ್ಯೆಯ ಆಲೋಚನೆ ಮಾಡುತ್ತಿರುವವರು, ಮಾದಕ ವಸ್ತುಗಳ ಸೇವನೆಯ ವ್ಯಸನಕ್ಕೆ ಒಳಗಾದವರು, ಜ್ಞಾಪಕ ಶಕ್ತಿ ತೊಂದರೆ ಇರುವವರು, ಆರ್ಥಿಕ ಸಂಕಷ್ಟ ಎದುರಿಸುತ್ತಿರುವವರು ಹೆಚ್ಚಾಗಿ ಕರೆ ಮಾಡುತ್ತಿದ್ದಾರೆ.

‘ವ್ಯಕ್ತಿಯ ಮನಸ್ಥಿತಿ ತಿಳಿಯಲು ಕೆಲ ಪ್ರಕರಣಗಳಲ್ಲಿ ಮುಖಾಮುಖಿ ಸಮಾಲೋಚನೆ ಅತ್ಯಗತ್ಯ. ಆದ್ದರಿಂದ ವಿಡಿಯೊ ಕರೆ ಅವಕಾಶ ಕಲ್ಪಿಸಲಾಗಿದೆ. ಮಾನಸಿಕ ಆರೋಗ್ಯದ ಬಗ್ಗೆ ಇತ್ತೀಚಿನ ವರ್ಷಗಳಲ್ಲಿ ಜಾಗೃತಿ ಮೂಡುತ್ತಿದೆ. ಇದರಿಂದಾಗಿ ಸಹಾಯವಾಣಿಗೂ ಮನೋವ್ಯಾಧಿಗೆ ಸಂಬಂಧಿಸಿದಂತೆ ಹೆಚ್ಚಿನ ಸಂಖ್ಯೆಯಲ್ಲಿ ಕರೆಗಳು ಬರುತ್ತಿವೆ’ ಎಂದು ನಿಮ್ಹಾನ್ಸ್ ವೈದ್ಯರೊಬ್ಬರು ತಿಳಿಸಿದರು.

ಎರಡೂವರೆ ವರ್ಷಗಳ ಸತತ ಪ್ರಯತ್ನದ ಬಳಿಕ ‘ಟೆಲಿ ಮನಸ್’ ಅಡಿ ವಿಡಿಯೊ ಕರೆ ಪ್ರಾರಂಭಿಸಲಾಗಿದೆ. ಸ್ಮಾರ್ಟ್ ಫೋನ್ಗಳ ನೆರವಿನಿಂದಲೇ ವಿಡಿಯೊ ಕರೆ ಮಾಡಬಹುದು
ಟಿ.ಕೆ.ಶ್ರೀಕಾಂತ್ ಐಐಐಟಿ-ಬಿ ಇ-ಆರೋಗ್ಯ ಸಂಶೋಧನಾ ವಿಭಾಗದ ಮುಖ್ಯಸ್ಥ

ವಿಡಿಯೊ ಕರೆ ಹೇಗೆ?

ಟೆಲಿ ಮನಸ್ ಅಡಿ ವಿಡಿಯೊ ಕರೆ ಸೇವೆ ಪಡೆಯುವವರು ಸ್ಮಾರ್ಟ್ ಫೋನ್ ಮೂಲಕ ಸಹಾಯವಾಣಿ ಸಂಖ್ಯೆ 14416ಕ್ಕೆ ಕರೆ ಮಾಡಬೇಕು. ಈ ವೇಳೆ ಆಪ್ತ ಸಮಾಲೋಚಕರು ಅಥವಾ ಮನೋರೋಗಿಗಳು ವಿಡಿಯೊ ಕರೆ ಬಯಸಿದಲ್ಲಿ ಕಂಪ್ಯೂಟರ್ ಜನರೇಟೆಡ್ ವಿಡಿಯೊ ಕರೆಯ ಲಿಂಕ್ ವ್ಯಕ್ತಿಯ ದೂರವಾಣಿ ಸಂಖ್ಯೆಗೆ ರವಾನೆಯಾಗಲಿದೆ. ಈ ಲಿಂಕ್ ಕ್ಲಿಕ್ಕಿಸಿದಾಗ ವಿಡಿಯೊ ಕರೆಯ ಅವಕಾಶ ತೆರೆದುಕೊಳ್ಳಲಿದೆ. ತುರ್ತು ಅಥವಾ ಅಗತ್ಯ ಸಂದರ್ಭದಲ್ಲಿ ಮಾತ್ರ ವಿಡಿಯೊ ಕಾಲ್ ಸೇವೆಯನ್ನು ಬಳಕೆ ಮಾಡಲಾಗುತ್ತದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.