ಬೆಂಗಳೂರು: ಶ್ರೀ ತ್ಯಾಗರಾಜ ಕೋ–ಆಪರೇಟಿವ್ ಬ್ಯಾಂಕ್, ನಾಗರಿಕರ ಅನುಕೂಲಕ್ಕಾಗಿ ‘ಶ್ರೀ ತ್ಯಾಗರಾಜ ಗೃಹ ಸಾಲ’ ಹಾಗೂ ‘ಶ್ರೀ ತ್ಯಾಗರಾಜ ಅಡಮಾನ ಸಾಲ’ ಯೋಜನೆಗಳನ್ನು ಪರಿಚಯಿಸಿದೆ.

‘ಈ ಯೋಜನೆಗಳ ಅಡಿ ಶೇ 7.25 ಬಡ್ಡಿದರದಲ್ಲಿ ಗೃಹ ಸಾಲ ಹಾಗೂ ಶೇ 8.50 ಬಡ್ಡಿದರದಲ್ಲಿ ಅಡಮಾನ ಸಾಲ ನೀಡಲಾಗುತ್ತದೆ. ಸಾಲಕ್ಕಾಗಿ ಅರ್ಜಿ ಸಲ್ಲಿಸುವವರಿಗೆ ಅಕ್ಷಯ ತೃತೀಯ ಪ್ರಯುಕ್ತ ಪ್ರೊಸೆಸಿಂಗ್ ಶುಲ್ಕದಲ್ಲಿ ಶೇ 0.50ರಷ್ಟು ರಿಯಾಯಿತಿ ನೀಡಲು ನಿರ್ಧರಿಸಲಾಗಿದೆ. ಗುಂಪು ಸಾಲದ ಯೋಜನೆಯ ಅಡಿಯಲ್ಲಿ ಸಣ್ಣ ವ್ಯಾಪಾರಿಗಳು ಹಾಗೂ ಸ್ವ–ಉದ್ಯೋಗ ಕೈಗೊಳ್ಳುವವರಿಗೆ ಸಾಲ–ಸೌಲಭ್ಯ ಒದಗಿಸಲಾಗುತ್ತದೆ’ ಎಂದು ಪ್ರಕಟಣೆ ತಿಳಿಸಿದೆ.

‘2021–22ನೇ ಸಾಲಿನಲ್ಲಿ ಬ್ಯಾಂಕ್ನಲ್ಲಿ ಸುಮಾರು ₹4,621 ಕೋಟಿಗೂ ಅಧಿಕ ವಹಿವಾಟು ನಡೆದಿದೆ. ಕೋವಿಡ್ ನಡುವೆಯೂ ಸುಮಾರು ₹602 ಕೋಟಿಗೂ ಅಧಿಕ ಠೇವಣಿ ಸಂಗ್ರಹಿಸಲಾಗಿದೆ. ಪ್ರಸಕ್ತ ಸಾಲಿನಲ್ಲಿ ₹14.12 ಕೋಟಿಗೂ ಹೆಚ್ಚು ಲಾಭ ಗಳಿಸಲಾಗಿದೆ’ ಎಂದೂ ಹೇಳಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.