ತುಮಕೂರು: ಬಿಜೆಪಿ ಮುಖಂಡರೊಬ್ಬರ ಕೊಲೆಗೆ ಯತ್ನಿಸಿದ ಆರೋಪದ ಮೇಲೆ ಲೋಕೋ ಪಯೋಗಿ ಇಲಾಖೆ ಇಬ್ಬರು ಸಹಾಯಕ ಎಂಜಿನಿಯರುಗಳನ್ನು ಅಮಾನತು ಮಾಡಲಾಗಿದೆ.

ತುಮಕೂರು ಲೋಕೋಪ ಯೋಗಿ ವೃತ್ತದ ಸಹಾಯಕ ಎಂಜಿನಿ ಯರ್ ಆರ್.ಶಂಭುಕುಮಾರ್ ಹಾಗೂ ಬೆಂಗಳೂರು ಕೆ.ಆರ್.ವೃತ್ತದ ಲೋಕೋಪಯೋಗಿ ಇಲಾಖೆಪಿಆರ್ಎಎಂಸಿ ವಿಭಾಗದಲ್ಲಿ ಕಾರ್ಯನಿರ್ವಹಿಸುತ್ತಿರುವ ಎಂಜಿನಿಯರ್ ಎಂ.ಅಶ್ವಿನಿ ಅವರನ್ನು ಅಮಾನತು ಮಾಡಿ ಆದೇಶಿಸಲಾಗಿದೆ.

ಶಂಭುಕುಮಾರ್, ಅಶ್ವಿನಿ ಹಾಗೂ ಮತ್ತೊಬ್ಬ ಮಹಿಳೆ ಸೇರಿಕೊಂಡು ಬಿಜೆಪಿ ಎಸ್ಸಿ ಮೋರ್ಚಾ ತುಮ ಕೂರು ಜಿಲ್ಲಾ ಘಟಕದ ಅಧ್ಯಕ್ಷ ಓಂಕಾರೇಶ್ವರ ಅವರ ಕೊಲೆಗೆ ಬೆಂಗಳೂರಿನಲ್ಲಿ ಯತ್ನಿಸಿದ್ದರು. ಕಾರು ಹರಿಸಿ ಕೊಲೆ ಪ್ರಯತ್ನ ನಡೆಸಲಾಗಿತ್ತು. ಈ ಸಂಬಂಧ ಏಪ್ರಿಲ್ 12ರಂದು ಮಹಾಲಕ್ಷ್ಮಿ ಲೇಔಟ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ಅಶ್ವಿನಿ ಪ್ರಸ್ತುತ ನ್ಯಾಯಾಂಗ ಬಂಧನದಲ್ಲಿ ಇದ್ದಾರೆ. ದೂರು ದಾಖಲಾಗುತ್ತಿದ್ದಂತೆ ಶಂಭುಕುಮಾರ್ ತಲೆ ಮರೆಸಿಕೊಂಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.