ಬೆಂಗಳೂರು: ಡಿಜಿಟಲ್ ಮಾರ್ಗಗಳ ಮೂಲಕವೂ ನೀರಿನ ಶುಲ್ಕ ಪಾವತಿಸಲು ವ್ಯವಸ್ಥೆ ಮಾಡಿದ್ದ ಜಲಮಂಡಳಿ, ಈ ಸೌಲಭ್ಯ ಮುಂದುವರಿಸಿದೆ.

ಮಂಡಳಿಯ ಕಿಯೋಸ್ಕ್ ಗಳಲ್ಲಿ ಚೆಕ್ ಅಥವಾ ಡಿಡಿ ಮೂಲಕವೂ ಶುಲ್ಕ ತೆಗೆದುಕೊಳ್ಳಲಾಗುತ್ತಿತ್ತು. ಆದರೆ, ಚೆಕ್‌ಗಳು ಹೆಚ್ಚಿನ ಬ್ಯಾಂಕುಗಳಲ್ಲಿ ತಿರಸ್ಕೃತವಾಗುತ್ತಿದ್ದುದರಿಂದ ಮಂಡಳಿ ಡಿಜಿಟಲ್ ಪಾವತಿಗೆ ಅವಕಾಶ ನೀಡಿದೆ.

ಚೆಕ್ ಅಥವಾ ಡಿಡಿ ಬದಲಿಗೆ ಮಂಡಳಿಯ ಕಿಯೋಸ್ಕ್‌ಗಳಲ್ಲಿ ನಗದು ಮೂಲಕ ಮಾತ್ರ ಶುಲ್ಕ ಸ್ವೀಕರಿಸಲಾಗುತ್ತದೆ. ಅಲ್ಲದೆ, ಬಿಬಿಪಿಎಸ್, ಪೇಟಿಎಂ, ಭೀಮ್, ಅಮೇಜಾನ್, ಫೋನ್‌ಪೇ, ಗೂಗಲ್‌ಪೇ ಸೇರಿದಂತೆ ಡಿಜಿಟಲ್ ಮಾಧ್ಯಮದ ಮೂಲಕ ಪಾವತಿಸಬಹುದು ಎಂದು ಮಂಡಳಿ ಹೇಳಿದೆ.

ಮಂಡಳಿಯ ಜಾಲತಾಣ www.bwssb.gov.in ಗೆ ಲಾಗಿನ್ ಆಗಿಯೂ ಶುಲ್ಕ ಪಾವತಿಸಬಹುದು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.