ಬೆಂಗಳೂರು: ‘ಗೋಪಾಲಯ್ಯನವರ ಹಿಂದೆ ಬೇರೊಂದು ಶಕ್ತಿ ಇದೆ.ಅದನ್ನು ನಾನು ಈಗ ಹೇಳುವುದಿಲ್ಲ.ಹಣಬಲ ಇರುವ ಅವರನ್ನುಸೋಲಿಸಬೇಕು. ಅದಕ್ಕಾಗಿ ನಾನೇಪ್ರತಿಯೊಂದು ವಾರ್ಡ್‌ಗೂ ಬರುತ್ತೇನೆ’ ಎಂದುಜೆಡಿಎಸ್ ವರಿಷ್ಠ ಹೆಚ್.ಡಿ ದೇವೇಗೌಡ ಹೇಳಿದರು.

ಮಹಾಲಕ್ಷ್ಮಿ ಬಡಾವಣೆ ವಿಧಾನಸಭಾ ಕ್ಷೇತ್ರದಲ್ಲಿ ಜೆಡಿಎಸ್ ನಿಷ್ಠಾವಂತ ಕಾರ್ಯಕರ್ತರ ಸಭೆಯನ್ನು ಉದ್ದೇಶಿಸಿ ಅವರು ಮಾತನಾಡಿದರು.ಜೆಡಿಎಸ್ ಶಾಸಕ ಕೆ. ಗೋಪಾಲಯ್ಯ ಅನರ್ಹಗೊಂಡಬಳಿಕ ಕ್ಷೇತ್ರದಲ್ಲಿ ನಡೆಯುತ್ತಿರುವ ಮೊದಲ ಸಭೆ ಇದಾಗಿದೆ.

‘ವ್ಯಕ್ತಿ ನಿಂದನೆ ಮಾಡಲು ನಾನುಇಲ್ಲಿಗೆ ಬಂದಿಲ್ಲ. ಗೋಪಾಲಯ್ಯ ಅವರ ಪತ್ನಿಯನ್ನುಹಣಕಾಸು ಸಮಿತಿ ಅಧ್ಯಕ್ಷೆಯನ್ನಾಗಿ ಮಾಡಿದ್ದೆವು. ಆದರೆ, ಅವರು ಬಿಜೆಪಿಗೆಹೋಗಿ ಮೇಯರ್ ಆಗುವ ಯೋಚನೆ ಮಾಡುತ್ತಿದ್ದಾರೆ’ ಎಂದು ಟೀಕಿಸಿದರು.

‘ಗೋಪಾಲಯ್ಯನಿಗೆ ಈ ಪಕ್ಷ ಎಲ್ಲವನ್ನೂ ಕೊಟ್ಟಿದೆ. ಈ ಹಿಂದೆ ಅವರ ಮನೆ ಮುಂದೆ ಪೋಲಿಸರು ಬಂದು ನಿಂತಾಗ ಏನಾಯಿತು?ಅವರ ಪತ್ನಿಯನ್ನು ಉಪಮೇಯರ್ ಮಾಡಬೇಕೆಂದು ಪಟ್ಟು ಹಿಡಿದಿದ್ದರು.ಅದಕ್ಕೆ ಮರು ಮಾತಿಲ್ಲದೆ ಒಪ್ಪಿಕೊಂಡೆವು.ಅಲ್ಲದೆ, ಪ್ರತಿವರ್ಷ ಒಂದಲ್ಲ ಒಂದು ಸಮಿತಿ ಸದಸ್ಯರನ್ನಾಗಿ ಮಾಡಿದ್ದೇವೆ.ಇಷ್ಟೆಲ್ಲ ಇದ್ದರೂ ಅವರು ನಮ್ಮನ್ನು ಬಿಟ್ಟು ಹೊದರು.ಇದನ್ನು ನಾನು ಸವಾಲಾಗಿ ಸ್ವೀಕರಿಸಿದ್ದೇನೆ.ಈ ಕ್ಷೇತ್ರದ ಜನತೆ ಮೇಲೆ ನನಗೆ ನಂಬಿಕೆ ಇದೆ.ಈ ಪಕ್ಷವನ್ನು ಉಳಿಸಿಕೊಳ್ಳುವ ಶಕ್ತಿ ನಮಗಿದೆ’ ಎಂದು ಹೇಳಿದರು.

‘ಚೆನ್ನಾಗಿ ಬೆಳೆದಿದ್ದಾರೆ. ಹಣದ ಶಕ್ತಿ ಅವರಿಗಿದೆ, ನಮಗಿಲ್ಲ.ಅವರ ಮುಂದೆ ನೀವು ಪ್ರಾಮಾಣಿಕವಾಗಿ ಹೋರಾಡಬೇಕು.ಯಾವುದೇ ಆಮಿಷಕ್ಕೆ ಒಳಗಾಗಬೇಡಿ.ಪ್ರತಿವಾರ ನಿಮ್ಮ ಬಳಿ ಬರುತ್ತೇನೆ, ವಾರ್ಡ್‌ಗೆಬಂದು ಪಕ್ಷ ಕಟ್ಟುತ್ತೇನೆ’ ಎಂದರು.

‘ಉಪ ಚುನಾವಣೆ ಇರಬಹುದು, ನೇರ ಚುನಾವಣೆಯೇ ಬರಬಹುದು, ನೀವೆಲ್ಲಾ ಸಿದ್ಧರಾಗಿರಿ.ಕುಮಾರಸ್ವಾಮಿ ಅವರನ್ನು ಮುಖ್ಯಮಂತ್ರಿಯನ್ನಾಗಿ ಮಾಡಿ ಎಂದುಕಾಂಗ್ರೆಸ್ ಬಳಿ ನಾನು ಹೋಗಿರಲಿಲ್ಲ. ಮುಖ್ಯಮಂತ್ರಿ ಸ್ಥಾನಕ್ಕೆಖರ್ಗೆ ಅವರ ಹೆಸರನ್ನೇ ನಾನು ಸೂಚಿಸಿದ್ದೆ.ಹಿಂದೆ ಅನುಭವಿಸಿದ ನೋವು, ಮತ್ತೆ ಬರುವುದು ಬೇಡ ಎಂದು ಹಾಗೆಹೇಳಿದ್ದೆ. ಆದರೆ, ಕುಮಾರಸ್ವಾಮಿ ಅವರೇ ಮುಖ್ಯಮಂತ್ರಿಆಗಲಿಕಾಂಗ್ರೆಸ್‌ನವರುಹೇಳಿದರು.ಗುಲಾಂ ನಬಿ ಅಜಾದ್, ಗೆಹ್ಲೊಟ್ ಹಠ ಹಿಡಿದರು.ಹಾಗಾಗಿಯೇ ನಾನು ಒಪ್ಪಿಕೊಂಡೆ’ ಎಂದು ಮನಬಿಚ್ಚಿ ಮಾತನಾಡಿದರು.

‘ದೇಶದಲ್ಲಿ ಪ್ರಜಾಪ್ರಭುತ್ವ ವ್ಯವಸ್ಥೆಗೆ ಗಂಡಾಂತರ ಬಂದಿದೆ.ಏಕಚಕ್ರಾಧಿಪತಿ ವ್ಯವಸ್ಥೆ ಬರುತ್ತಿದೆ.ಇದನ್ನು ನೀವೆಲ್ಲಾ ಎದುರಿಸಬೇಕು.ಕೈ ಮುಗಿದು ನಿಮ್ಮಲ್ಲಿ ಪ್ರಾರ್ಥನೆ ಮಾಡುತ್ತೇನೆಈ ಕ್ಷೇತ್ರವನ್ನು ಮತ್ತೆ ನಾವು ಗೆದ್ದು,ಪ್ರಾದೇಶಿಕ ಪಕ್ಷಗಳು ಇವೆ ಎಂಬುದನ್ನ ತೋರಿಸಬೇಕಿದೆ’ ಎಂದು ಮನವಿ ಮಾಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.