ಬೆಂಗಳೂರು: ಅಮೆರಿಕದ ವಾಷಿಂಗ್ಟನ್ ಡಿಸಿಯ ನ್ಯಾಷನಲ್ ಮಾಲ್‌ನಲ್ಲಿ ಮೂರು ದಿನಗಳ ಕಾಲ ನಡೆದ ವಿಶ್ವ ಸಾಂಸ್ಕೃತಿಕ ಉತ್ಸವವು ಮುಕ್ತಾಯಗೊಂಡಿತು.

ದಕ್ಷಿಣ ಏಷ್ಯಾ, ಲ್ಯಾಟಿನ್ ಅಮೆರಿಕ ಮತ್ತು ಕೆರಿಬಿಯನ್ ದ್ವೀಪಗಳಿಂದ ಬಂದ ತಂಡಗಳ ಭವ್ಯ ಸಾಂಸ್ಕೃತಿ ಪ್ರದರ್ಶನಗಳೊಂದಿಗೆ ಉತ್ಸವಕ್ಕೆ ತೆರೆ ಎಳೆಯಲಾಯಿತು.

ವಿಶ್ವದ 180 ದೇಶಗಳ 10 ಲಕ್ಷಕ್ಕೂ ಹೆಚ್ಚು ಮಂದಿ ಕಾರ್ಯಕ್ರಮದಲ್ಲಿ ಪಾಲ್ಗೊಂಡು ತಮ್ಮದೇ ಆದ ರೀತಿಯಲ್ಲಿ ವಿಶ್ವಶಾಂತಿಗಾಗಿ ಪ್ರಾರ್ಥಿಸಿದರು. ನೃತ್ಯ, ಸಂಗೀತ, ಧ್ಯಾನ ಮತ್ತು ಸಂಸ್ಕೃತಿಯೊಡನೆ ಮಾನವತ್ವ ಸಾರಲಾಯಿತು.

ಯುಕ್ರೇನ್‌ನ ಜನರಿಗಾಗಿ ಶ್ರೀಶ್ರೀಶ್ರೀ ರವಿಶಂಕರ ಗುರೂಜಿ ನೇತೃತ್ವದಲ್ಲಿ ಹೃದಯಾಳದ ಪ್ರಾರ್ಥನೆ ಸಲ್ಲಿಸಲಾಯಿತು. ಲಿಂಕನ್ ಸ್ಮಾರಕದ ಮುಂದೆ ಯೋಗ ಜ್ಞಾನ ಪಸರಿಸಲಾಯಿತು. ವಿವಿಧ ಕಲಾವಿದರಿಂದ ಗೀತ ಗಾಯನ ಕಾರ್ಯಕ್ರಮ ನಡೆಯಿತು. ಭಾರತದ ಐದು ಪಾರಂಪರಿಕ ನೃತ್ಯಗಳಾದ ಭರತನಾಟ್ಯ, ಕಥಕ್, ಒಡಿಸ್ಸಿ, ಕೂಚುಪುಡಿ ಮತ್ತು ಮೋಹಿನಿಆಟ್ಟಂ ಸಾಂಸ್ಕೃತಿಕ ವೈಭವಕ್ಕೆ ಮೆರುಗು ನೀಡಿದವು. ಗರ್ಭಾ ನೃತ್ಯ, ಭಾಂಗ್ರ ನೃತ್ಯ ಸಹಿತ ವಿವಿಧ ಕಲೆಗಳು ಪ್ರದರ್ಶನಗೊಂಡವು.

ಭಾರತದ ವಿದೇಶಾಂಗ ವ್ಯವಹಾರಗಳ ಸಚಿವ ಎಸ್. ಜಯಶಂಕರ್, ಲೋಕಸಭೆಯ ಮಾಜಿ ಸ್ಪೀಕರ್ ಸುಮಿತ್ರಾ ಮಹಾಜನ್, ವಿಶ್ವಸಂಸ್ಥೆಯ 8ನೇ ಪ್ರಧಾನ ಕಾರ್ಯದರ್ಶಿಯಾಗಿದ್ದ ಎಚ್.ಇ. ಬಾನ್ ಕಿ ಮೂನ್ ಸಹಿತ ವಿವಿಧ ದೇಶಗಳ ರಾಜಕೀಯ, ಸಾಂಸ್ಕೃತಿಕ, ಧಾರ್ಮಿಕ ನಾಯಕರು ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.