ಬೆಂಗಳೂರು: ಭಾರತೀಯ ವಿಜ್ಞಾನ ಶಿಕ್ಷಣ ಹಾಗೂ ಸಂಶೋಧನಾ ಸಂಸ್ಥೆು (ಐಐಎಸ್ಇಆರ್) ಐದು ವರ್ಷಗಳ ಬಿಎಸ್–ಎಂಎಸ್ ದ್ವಿ–ಪದವಿ ಕೋರ್ಸ್ಗಾಗಿ ಪ್ರವೇಶ ಪ್ರಕ್ರಿಯೆಯನ್ನು ಆರಂಭಿಸಿದೆ. ದೇಶದ ಐದು ನಗರಗಳಲ್ಲಿ ತನ್ನ ಕೇಂದ್ರಗಳನ್ನು ಹೊಂದಿರುವ ಐಐಎಸ್ಇಆರ್ ಪ್ರವೇಶಕ್ಕಾಗಿ ಪ್ರತಿವರ್ಷ ಭಾರಿ ಪೈಪೋಟಿ ಕಂಡು ಬರುತ್ತದೆ.

ದೇಶದಲ್ಲಿ ವಿಜ್ಞಾನ ಶಿಕ್ಷಣ ಹಾಗೂ ಸಂಶೋಧನೆಗೆ ಉತ್ತೇಜನ ನೀಡಲು ಭಾರತ ಸರ್ಕಾರದ ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯದಿಂದ ಐಐಎಸ್ಇಆರ್ ಆರಂಭಿಸಲಾಗಿದೆ. ಭೋಪಾಲ್, ಕೋಲ್ಕತ್ತಾ, ಮೊಹಾಲಿ, ಪುಣೆ ಮತ್ತು ತಿರುವನಂತಪುರದಲ್ಲಿ ಐಐಎಸ್ಇಆರ್ ಕೇಂದ್ರಗಳಿವೆ. ಈ ಐದೂ ಕೇಂದ್ರಗಳಲ್ಲಿ ಬಿಎಸ್– ಎಂಎಸ್ ದ್ವಿ–ಪದವಿ ಕೋರ್ಸ್ ಅಧ್ಯಯನ ಮಾಡಬಹುದು.

ವಿಜ್ಞಾನ ವಿಷಯದಲ್ಲಿ ದ್ವಿತೀಯ ಪಿಯುಸಿ ಪೂರೈಸಿದ ವಿದ್ಯಾರ್ಥಿಗಳು ಈ ಐದು ವರ್ಷಗಳ ದ್ವಿ–ಪದವಿ ಕೋರ್ಸ್ ಸೇರಲು ಅವಕಾಶ ಇದೆ. ಅಧ್ಯಯನದ ಜತೆ–ಜತೆಗೆ ಸಂಶೋಧನೆಯನ್ನೂ ನಡೆಸಲು ಈ ಕೋರ್ಸ್ ಅವಕಾಶ ಒದಗಿಸುತ್ತದೆ. ಆಗಸ್ಟ್‌ನಿಂದ ಆರಂಭವಾಗಲಿರುವ ಕೋರ್ಸ್‌ಗೆ ಈಗಾಗಲೇ ಪ್ರವೇಶ ಪ್ರಕ್ರಿಯೆ ಆರಂಭವಾಗಿದೆ.

ಪ್ರವೇಶಕ್ಕೆ ಹೇಗೆ ಅವಕಾಶ?: ಕಿಶೋರ್ ವೈಜ್ಞಾನಿಕ ಪ್ರೋತ್ಸಾಹ ಯೋಜನೆ (ಕೆವಿಪಿವೈ) ಮೂಲಕ ಅರ್ಹತೆ ಗಿಟ್ಟಿಸಿದ ವಿದ್ಯಾರ್ಥಿಗಳು ಅರ್ಜಿ ಹಾಕಬಹುದು. ಐಐಟಿಗಳು ನಡೆಸುವ ಜಂಟಿ ಪ್ರವೇಶ ಪರೀಕ್ಷೆ (ಇಇಟಿ)ಗೆ ಹಾಜರಾಗಿ ಶ್ರೇಯಾಂಕ ಪಡೆದವರಿಗೂ ಅವಕಾಶ ಉಂಟು. ಹಾಗಾದರೆ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಉತ್ತಮ ಅಂಕಗಳನ್ನು ಗಳಿಸಿ ತೇರ್ಗಡೆ ಆದವರಿಗೆ ಅವಕಾಶ ಇಲ್ಲವೆ ಎನ್ನುವ ಪ್ರಶ್ನೆ ನಿಮ್ಮನ್ನು ಕಾಡುತ್ತಿದೆಯೇ? ಹಾಗೇನಿಲ್ಲ, ಅವರಿಗೂ ಅವಕಾಶ ಉಂಟು. ರಾಜ್ಯ ಹಾಗೂ ಕೇಂದ್ರ ಪರೀಕ್ಷಾ ಮಂಡಳಿಗಳು ನಡೆಸುವ ಪರೀಕ್ಷೆಗಳಲ್ಲಿ ಹೆಚ್ಚಿನ ಅಂಕ ಪಡೆದು ಉತ್ತೀರ್ಣರಾದ ವಿದ್ಯಾರ್ಥಿಗಳಿಗೂ ಇಲ್ಲಿ ಅವಕಾಶ ಇದೆ. ಆದರೆ, ಪ್ರವೇಶ ಪರೀಕ್ಷೆಯನ್ನು ಅವರು ಎದುರಿಸಬೇಕು.

ಐದು ಐಐಎಸ್ಇಆರ್‌ಗಳಿಗೆ ಪ್ರತ್ಯೇಕವಾಗಿ ಅರ್ಜಿ ಏನೂ ಸಲ್ಲಿಸಬೇಕಿಲ್ಲ. ಎಲ್ಲ ಕೇಂದ್ರಗಳಿಗೆ ಒಂದೇ ಸಾಮಾನ್ಯ ಪ್ರವೇಶ ಪರೀಕ್ಷೆ ಮೂಲಕ ಪ್ರವೇಶ ಪ್ರಕ್ರಿಯೆ ನಡೆಸಲಾಗುತ್ತದೆ. ಒಟ್ಟು 950 ಸೀಟುಗಳು ಲಭ್ಯವಿದ್ದು, ಕೆವಿಪಿವೈನಿಂದ ಶೇ 25 ಹಾಗೂ ಐಐಟಿ ಜೆಇಟಿಯಿಂದ ಶೇ 50 ಸೀಟುಗಳನ್ನು ಭರ್ತಿ ಮಾಡಲಾಗುತ್ತದೆ. ಉಳಿದ ಸೀಟುಗಳನ್ನು ರಾಜ್ಯ ಹಾಗೂ ಕೇಂದ್ರ ಪಿಯುಸಿ ಮಂಡಳಿಗಳ ಪರೀಕ್ಷೆಯಲ್ಲಿ ತೇರ್ಗಡೆಯಾದ ವಿದ್ಯಾರ್ಥಿಗಳಿಗೆ ಮೀಸಲಿಡಲಾಗುತ್ತದೆ. ಕೇಂದ್ರ ಸರ್ಕಾರದ ಮೀಸಲಾತಿ ನಿಯಮಾವಳಿ ಪ್ರಕಾರ ಎಸ್‌ಸಿ, ಎಸ್‌ಟಿ ಹಾಗೂ ಹಿಂದುಳಿದ ವಿದ್ಯಾರ್ಥಿಗಳಿಗೆ ಮೀಸಲಾತಿ ಸೌಲಭ್ಯವೂ ಉಂಟು.

ಆನ್‌ಲೈನ್ ಮೂಲಕವೇ
ಅರ್ಜಿ ಭರ್ತಿ ಮಾಡಬೇಕು (http://www.iiser-admissions.in/). ಅರ್ಜಿ ಸಲ್ಲಿಕೆ ಕುರಿತಂತೆ ಹೆಚ್ಚಿನ ವಿವರವನ್ನು ಈ ವೆಬ್‌ಸೈಟ್ ಮೂಲಕವೂ ಪಡೆಯಬಹುದು. ಅರ್ಜಿ ಭರ್ತಿ ಮಾಡುವಾಗ ₨ 600 ಫೀ (ಎಸ್‌ಸಿ, ಎಸ್‌ಟಿ ವಿದ್ಯಾರ್ಥಿಗಳು ₨ 300) ತುಂಬಬೇಕು. ಆಯ್ಕೆಯಾದ ವಿದ್ಯಾರ್ಥಿಗಳಿಗೆ ಪ್ರತಿ ತಿಂಗಳು ₨ 5,000 ಶಿಷ್ಯವೇತನ ನೀಡಲಾಗುತ್ತದೆ. ವಸತಿಸೌಲಭ್ಯ ಹೊಂದಿದ ಕೇಂದ್ರಗಳು ಇವಾಗಿದ್ದು, ಆಯ್ಕೆಯಾದ ವಿದ್ಯಾರ್ಥಿಗಳು ಕ್ಯಾಂಪಸ್‌ನಲ್ಲೇ ಉಳಿಯಲು ಸಿದ್ಧರಿರಬೇಕು.

ಅರ್ಜಿಯನ್ನು ಭರ್ತಿ ಮಾಡುವಾಗ ವಿದ್ಯಾರ್ಥಿಗಳಿಗೆ ಬೇಕಾದ ಕೇಂದ್ರವನ್ನು ಆದ್ಯತೆ ಮೇಲೆ ಆಯ್ಕೆ ಮಾಡಿಕೊಳ್ಳಲು ಅವಕಾಶ ಇದೆ. ಆಯ್ಕೆಯಾದ ವಿದ್ಯಾರ್ಥಿಗಳಿಗೆ ಮಾಹಿತಿ ನೀಡಿ, ಕೌನ್ಸೆಲಿಂಗ್‌ಗೆ ಆಹ್ವಾನಿಸಲಾಗುತ್ತದೆ.

₨ 19,000 ಪ್ರವೇಶ ಧನ (ಆಯಾ ಕೇಂದ್ರಕ್ಕೆ ಅನುಗುಣವಾಗಿ ಈ ಧನದಲ್ಲಿ ತುಸು ವ್ಯತ್ಯಾಸ ಇರುತ್ತದೆ) ತುಂಬ ಬೇಕಾಗುತ್ತದೆ. ಊಟದ ವೆಚ್ಚ ಪ್ರತ್ಯೇಕವಾಗಿದ್ದು, ವಾರ್ಷಿಕ ₨ 15,000ದಷ್ಟು ಬರಬಹುದು. ಅರ್ಜಿ ಸಲ್ಲಿಕೆಗೆ ಕೊನೆಯ ದಿನಾಂಕ ಜೂನ್ 15. ಜುಲೈ 20ರಂದು ಪ್ರವೇಶ ಪರೀಕ್ಷೆ ನಡೆಯಲಿದ್ದು, ಆಯ್ಕೆಯಾದ ವಿದ್ಯಾರ್ಥಿಗಳು ಪ್ರವೇಶ ಪಡೆದುಕೊಳ್ಳಲು ಕೊನೆಯ ದಿನಾಂಕ ಜುಲೈ 29.

ಪ್ರವೇಶ ಪರೀಕ್ಷೆ
ಪ್ರವೇಶ ಪರೀಕ್ಷೆಯು ಬಹುಉತ್ತರ ಆಯ್ಕೆ ಹಾಗೂ ಲಿಖಿತ ಎರಡೂ ಪದ್ಧತಿಯನ್ನೂ ಒಳಗೊಂಡಿರುತ್ತದೆ. ಪರೀಕ್ಷೆಗೆ ಆಯ್ಕೆ ಮಾಡಲಾಗಿರುವ ಪಠ್ಯವನ್ನು http://www.iiser-admissions.in/syllabus.php ವೆಬ್‌ಸೈಟ್‌ನಲ್ಲಿ ಪಡೆಯಬಹುದು. ಮಾದರಿ ಪ್ರಶ್ನೆ ಪತ್ರಿಕೆಗಳು http://www.iiser-admissions.in/Model_1_Eng.pdf ವೆಬ್‌ಸೈಟ್‌ನಲ್ಲಿ ಲಭ್ಯ ಇರುತ್ತವೆ.

ಐದು ವಿಭಾಗಗಳಲ್ಲಿ ಅಧ್ಯಯನ
ಐದು ವಿಭಾಗಗಳಲ್ಲಿ (ಜೀವವಿಜ್ಞಾನ, ರಸಾಯನಶಾಸ್ತ್ರ, ಭೌತಶಾಸ್ತ್ರ, ಗಣಿತ ಮತ್ತು ಮಾನವಿಕ ವಿಜ್ಞಾನ) ಬಿಎಸ್–ಎಂಎಸ್ ದ್ವಿ–ಪದವಿ ಕೋರ್ಸ್ ಕಲಿಕೆಗೆ ಅವಕಾಶ ಉಂಟು. ಆದರೆ, ಮೊದಲ ನಾಲ್ಕು ಸೆಮಿಸ್ಟರ್‌ಗಳಲ್ಲಿ ಎಲ್ಲರಿಗೂ ಸಾಮಾನ್ಯ ಶಿಕ್ಷಣವನ್ನು ನೀಡಲಾಗುತ್ತದೆ. ಐದನೇ ಸೆಮಿಸ್ಟರ್‌ನಿಂದ ಆಯಾ ವಿಶೇಷ ವಿಭಾಗಗಳಲ್ಲಿ ಅಧ್ಯಯನ ಆರಂಭವಾಗುತ್ತದೆ. ಕೊನೆಯ ವರ್ಷದ ಅವಧಿಯನ್ನು ಸಂಶೋಧನೆಗೆ ಮೀಸಲು ಇಡಲಾಗಿರುತ್ತದೆ.

ಐಐಎಸ್‌ಸಿಯಲ್ಲೂ ಅವಕಾಶ
ದ್ವಿತೀಯ ಪಿಯುಸಿ (ವಿಜ್ಞಾನ) ಓದಿದ ವಿದ್ಯಾರ್ಥಿಗಳಿಗೆ ನಮ್ಮ ಬೆಂಗಳೂರಿನ ಭಾರತೀಯ ವಿಜ್ಞಾನ ಸಂಸ್ಥೆ (ಐಐಎಸ್‌ಸಿ)ಯಲ್ಲಿ ಏಳು ಕೋರ್ಸ್‌ಗಳ ಪದವಿ ಅಧ್ಯಯನಕ್ಕೆ ಅವಕಾಶವಿದೆ. ಆದರೆ, ಅರ್ಜಿ ಸಲ್ಲಿಕೆಗೆ ಈ ವರ್ಷ ಏಪ್ರಿಲ್ 30 ಕೊನೆಯ ದಿನವಾಗಿತ್ತು. ಹಿಂದಿನ ಶೈಕ್ಷಣಿಕ ಸಾಲಿನಲ್ಲಿ ಪಿಯುಸಿ ಓದಿದವರಿಗೂ ಪದವಿ ಓದಲು ಐಐಎಸ್ಸಿಯಲ್ಲಿ ಅವಕಾಶ ನೀಡಲಾಗುತ್ತದೆ.

ಕೇಂದ್ರ ಇಲ್ಲವೆ ರಾಜ್ಯ ಪಿಯುಸಿ ಮಂಡಳಿ ಪರೀಕ್ಷೆಯಲ್ಲಿ ಮಾಡಲಾದ ಸಾಧನೆ ಜತೆಗೆ ವಿವಿಧ ಪ್ರವೇಶ ಪರೀಕ್ಷೆಗಳಲ್ಲಿ ಪಡೆದ ಅಂಕಗಳನ್ನೂ ಗಣನೆಗೆ ತೆಗೆದುಕೊಂಡು ಐಐಎಸ್‌ಸಿ ಪ್ರತ್ಯೇಕವಾದ ಶ್ರೇಯಾಂಕ ಪಟ್ಟಿ ಸಿದ್ಧಪಡಿಸುತ್ತದೆ. ಆ ಶ್ರೇಯಾಂಕ ಪಟ್ಟಿ ಆಧಾರದ ಮೇಲೆ ಮೀಸಲಾತಿ ನಿಯಮಾವಳಿ ಅನುಸಾರ ಪ್ರವೇಶ ನೀಡಲಾಗುತ್ತದೆ. ಐಐಎಸ್‌ಸಿ ಪದವಿ ತರಗತಿಗೆ ಯಾವುದೇ ಪ್ರವೇಶ ಪರೀಕ್ಷೆ ಇರುವುದಿಲ್ಲ. ಆದರೆ, ಏಪ್ರಿಲ್ 30ರ ಮುನ್ನ ಅರ್ಜಿ ಹಾಕದ ವಿದ್ಯಾರ್ಥಿಗಳು ಇಲ್ಲಿ ಪ್ರವೇಶದ ಅವಕಾಶ ಪಡೆಯಲು ಮುಂದಿನ ಫೆಬ್ರುವರಿವರೆಗೆ ಈಗ ಕಾಯಬೇಕಿರುವುದು ಅನಿವಾರ್ಯ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.