ಬೆಂಗಳೂರು: ‘ದೇಶದ ಎಲ್ಲ ಕ್ಷೇತ್ರಗಳ ಬೆಳವಣಿಗೆಗಳಿಗೂ ಶಿಕ್ಷಣವೇ ಮೂಲ. ಆದರೆ, ಅದಕ್ಕೆ ಆಂತರಿಕ ನಿವ್ವಳ ಉತ್ಪನ್ನದ (ಜಿಡಿಪಿ) ಶೇ 1ರಷ್ಟು ಹಣವನ್ನೂ ಶಿಕ್ಷಣಕ್ಕಾಗಿ ಖರ್ಚು ಮಾಡಲಾಗುತ್ತಿಲ್ಲ’ ಎಂದು ಹಿರಿಯ ವಿಜ್ಞಾನಿ ಡಾ.ಸಿಎನ್‌ಆರ್ ರಾವ್ ವಿಷಾದ ವ್ಯಕ್ತಪಡಿಸಿದರು.
ಆಬ್ಸರ್ವರ್ ರಿಸರ್ಚ್ ಫೌಂಡೇಷನ್ (ಒಆರ್‌ಎಫ್) ಸಂಘಟನೆಯಿಂದ ಶುಕ್ರವಾರ ನಗರದಲ್ಲಿ ಏರ್ಪಡಿಸಿದ್ದ ವಿಜ್ಞಾನ ಶಿಕ್ಷಣದ ಮೇಲೆ ನಡೆದ ಚರ್ಚೆಯಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

‘ರಾಜೀವ್ ಗಾಂಧಿ ಅವರ ಸಂಪುಟದಲ್ಲಿ ಮಾನವ ಸಂಪನ್ಮೂಲ ಖಾತೆ ಸಚಿವರಾಗಿದ್ದ ಪಿ.ವಿ. ನರಸಿಂಹರಾವ್, ಜಿಡಿಪಿಯ ಶೇ 6ರಷ್ಟು ಹಣವನ್ನು ಶಿಕ್ಷಣದ ಮೇಲೆ ಖರ್ಚು ಮಾಡಬೇಕು ಎನ್ನುವ ಶಿಫಾರಸು ಮಾಡಿದ್ದರು. ಆದರೆ, ಮುಂದೆ ಅವರೇ ಪ್ರಧಾನಿಯಾದರೂ ಶಿಕ್ಷಣಕ್ಕೆ ಹೆಚ್ಚಿನ ಹಣ ಕೊಡಲು ಸಾಧ್ಯವಾಗಲಿಲ್ಲ’ ಎಂದು ಹೇಳಿದರು.

‘ವಿಜ್ಞಾನ ಶಿಕ್ಷಣಕ್ಕಾಗಿ ಸರ್ಕಾರಿ ಸಂಸ್ಥೆಗಳನ್ನೇ ಅವಲಂಬಿಸುವ ಸ್ಥಿತಿ ಇದೆ. ಆದರೆ, ಅವುಗಳಿಗೆ ಬೇಕಾದ ಅನುದಾನವನ್ನು ಸರ್ಕಾರ ಕೊಡುತ್ತಿಲ್ಲ. ಸಂಶೋಧನಾ ಕ್ಷೇತ್ರಕ್ಕೆ ಹೆಚ್ಚೆಂದರೆ ವಾರ್ಷಿಕ ₨ 5,000 ಕೋಟಿ ಬೇಕು. ಯಾವ ಸರ್ಕಾರವೂ ಅಷ್ಟು ಅನುದಾನ ನೀಡಲು ಮನಸ್ಸು ಮಾಡುತ್ತಿಲ್ಲ’ ಎಂದು ತಿಳಿಸಿದರು.

‘ಮುಂದಿನ ಹತ್ತು ವರ್ಷಗಳಲ್ಲಿ 4 ಕೋಟಿ ವಿದ್ಯಾರ್ಥಿಗಳು ಉನ್ನತ ಅಧ್ಯಯನಕ್ಕಾಗಿ ಬರಲಿದ್ದಾರೆ. ಅವರ ಶಿಕ್ಷಣಕ್ಕೆ ಬೇಕಾದ ಮೂಲಸೌಕರ್ಯವನ್ನು ಅಭಿವೃದ್ಧಿ ಮಾಡಬೇಕಿದೆ’ ಎಂದು ಹೇಳಿದರು.

ಒಆರ್‌ಎಫ್‌ನ ಸಂಶೋಧಕಿ ಡಾ. ಲೀನಾ ಚಂದ್ರನ್ ವಾಡಿಯಾ, ‘ದೇಶದ ಬಹುತೇಕ ಕಾಲೇಜುಗಳ ಪ್ರಯೋಗಾಲಯಗಳು ದುಸ್ಥಿತಿಯಲ್ಲಿವೆ. ಚೀನಾಕ್ಕೆ ಹೋಲಿಸಿದರೆ ವಿಶ್ವವಿದ್ಯಾಲಯಗಳ ಸಂಖ್ಯೆ ತುಂಬಾ ಕಡಿಮೆಯಾಗಿದೆ’ ಎಂದರು. ಹೆಣ್ಣು ಮಕ್ಕಳಿಗೂ ವಿಜ್ಞಾನ ಶಿಕ್ಷಣದಲ್ಲಿ ಸಮಾನ ಆದ್ಯತೆ ಸಿಗಬೇಕು, ಮಾತೃಭಾಷೆಯಲ್ಲೇ ವಿಜ್ಞಾನವನ್ನು ಕಲಿಸಬೇಕು, ಪದವಿ ಕೋರ್ಸ್‌ಗಳ ಅವಧಿ ಕಡಿಮೆ ಮಾಡಿದರೂ ಗುಣಮಟ್ಟದಲ್ಲಿ ರಾಜಿ ಮಾಡಿಕೊಳ್ಳಬಾರದು ಎಂಬ ಸಲಹೆಗಳು ಕೇಳಿಬಂದವು. ಪ್ರೊ.ಟಿ.ವಿ.ರಾಮಕೃಷ್ಣನ್ ಅಧ್ಯಕ್ಷತೆ ವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.