ಬೆಂಗಳೂರು: ‘ಎಲ್ಲ ಸಾಹಿತಿಗಳಿಗೂ ನಾಡಿನ ನೆಲ, ಜಲ, ನುಡಿಯ ಕುರಿತು ಕಳಕಳಿ ಇದೆ. ಬೀದಿಗೆ ಬಂದು ಹೋರಾಟಗಳಲ್ಲಿ ಭಾಗವಹಿಸಿಲ್ಲ ಎಂಬ ಮಾತ್ರಕ್ಕೆ ಅವರ ಕನ್ನಡದ ಕಾಳಜಿ, ಬದ್ಧತೆ ಪ್ರಶ್ನಿಸಬೇಡಿ’ ಎಂದು ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ನಿಯೋಜಿತ ಅಧ್ಯಕ್ಷ ಚಂದ್ರಶೇಖರ ಪಾಟೀಲ ಹೇಳಿದರು.

ಕನ್ನಡ ಒಕ್ಕೂಟವು ನಗರದಲ್ಲಿ ಸೋಮವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಸನ್ಮಾನ ಸ್ವೀಕರಿಸಿ ಅವರು ಮಾತನಾಡಿದರು.

‘ನಾಡಿನ ಹೋರಾಟಗಳಿಗೆ ಕುವೆಂಪು ವ್ಯಾಕರಣ ಕೊಟ್ಟರು. ಅವರಂತೆಯೇ ಕೆಲವರು ಬರಹದ ಮೂಲಕ, ಹಲವರು ಹೋರಾಟಗಳ ಮೂಲಕ ನಾಡನ್ನು ಕಟ್ಟುತ್ತಿದ್ದಾರೆ. ಈ ಎರಡು ಸಮೂಹಗಳಲ್ಲಿ ಯಾರು ಮೇಲು ಎಂಬ ತುಲನೆಯನ್ನು ನಾವು ಮಾಡಬಾರದು’ ಎಂದರು.

ಕನ್ನಡ ಚಳವಳಿ ವಾಟಾಳ್ ಪಕ್ಷದ ಅಧ್ಯಕ್ಷ ವಾಟಾಳ್ ನಾಗರಾಜ್, ‘ಸಾಹಿತ್ಯ ಸಮ್ಮೇಳನವಿಂದು ಮೂರು ದಿನದ ಜಾತ್ರೆಯಂತಾಗಿದೆ. ಅಧ್ಯಕ್ಷರ ಭಾಷಣ ಹಿಂದಿನ ವರ್ಷದ ನಿರ್ಣಯಗಳ ನಕಲಾಗಿರುತ್ತದೆ. ಈ ಬಾರಿಯಾದರೂ ಸಮ್ಮೇಳನದಲ್ಲಿ ನಾಡಿನ ಜ್ವಲಂತ ಸಮಸ್ಯೆಗಳ ಗಂಭೀರ ಚರ್ಚೆಗಳು ಆಗಬೇಕು’ ಎಂದು ಒತ್ತಾಯಿಸಿದರು.

ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯ ಅಧ್ಯಕ್ಷ ಸಾ.ರಾ.ಗೋವಿಂದು,‘ರಾಜ್‌ಕುಮಾರ್ ಅವರನ್ನು ಗೋಕಾಕ್ ಚಳವಳಿಯ ಕಣಕ್ಕೆ ತರುವಲ್ಲಿ ಚಂಪಾ ಶ್ರಮಿಸಿದ್ದರು. ಸಮ್ಮೇಳನಾಧ್ಯಕ್ಷರ ಭಾಷಣದಲ್ಲಿ ರಾಜ್ಯದ ಶಾಶ್ವತ ನೀರಾವರಿ ಯೋಜನೆಗಳ ಪರವಾಗಿ ಧ್ವನಿ ಎತ್ತಬೇಕು’ ಎಂದು ಮನವಿ ಮಾಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.