ಬೀದರ್: ‘ರಾಮಕೃಷ್ಣ ವಿವೇಕಾನಂದ ಆಶ್ರಮ ಹಾಗೂ ಇಲ್ಲಿನ ಗೋಶಾಲೆ ಅಭಿವೃದ್ಧಿಗಾಗಿ ವಿಧಾನ ಪರಿಷತ್ ಪ್ರಧೇಶಾಭಿವೃದ್ಧಿ ನಿಧಿಯಿಂದ ₹ 5 ಲಕ್ಷ ಅನುದಾನ ನೀಡಲಾಗುವುದು’ ಎಂದು ವಿಧಾನ ಪರಿಷತ್ ಸದಸ್ಯ ವಿಜಯಸಿಂಗ್ ಭರವಸೆ ನೀಡಿದರು.

ಶಿವನಗರದಲ್ಲಿರುವ ಆಶ್ರಮಕ್ಕೆ ಭೇಟಿ ನೀಡಿ ಗೋಶಾಲೆ ವೀಕ್ಷಿಸಿದ ನಂತರ ಮಾತನಾಡಿದ ಅವರು, ‘ಧಾರ್ಮಿಕ-ಆಧ್ಯಾತ್ಮಿಕ ಕಾರ್ಯಕ್ರಮ ಜತೆಗೆ ಸ್ವಾಮೀಜಿ ಅವರು ಗೋವುಗಳ ಪಾಲನೆ, ಪೋಷಣೆ ಮಾಡುತ್ತಿರುವುದು ಖುಷಿಯಾಗಿದೆ. ಗೋಶಾಲೆ ಅಭಿವೃದ್ಧಿಗಾಗಿ ಶೀಘ್ರದಲ್ಲಿ ಅನುದಾನ ಒದಗಿಸಲಾಗುವುದು’ ಎಂದು ಹೇಳಿದರು.

‘ಗೋಶಾಲೆ ನಡೆಸುವುದು ಅತ್ಯಂತ ಕಷ್ಟ್ಟಕರ ಮತ್ತು ಕಠಿಣ ಕೆಲಸ. ಇಂಥದರಲ್ಲೂ ಶ್ರೀ ಜ್ಯೋತಿರ್ಮಯಾನಂದ ಮಹಾರಾಜ ಅವರು ಗೋಸೇವೆ ಮಾಡುತ್ತಿರುವುದು ಮಾದರಿ. ಗೋವು ಪಾಲನೆ ಜತೆಯಲ್ಲಿ ಹಾಲು, ತುಪ್ಪ, ಗೋಮೂತ್ರ ಸೇರಿದಂತೆ ಇತರ ಗೋ ಉತ್ಪನ್ನ ಸಿದ್ಧಪಡಿಸಲಾಗುತ್ತಿದೆ. ಗೋಶಾಲೆಗೆ ಬೇಕಾಗುವ ಸಹಾಯ, ಸಹಕಾರ ನೀಡಲಾಗುವುದು’ ಎಂದು ತಿಳಿಸಿದರು.

‘ಕೃಷಿ ಜತೆಯಲ್ಲಿ ರೈತರು ಹೈನೋದ್ಯಮಕ್ಕೆ ಆದ್ಯತೆ ನೀಡಬೇಕು. ಜಾನುವಾರು ಸಾಗಾಣಿಕೆ ಜತೆಯಲ್ಲಿ ಅದರ ವಿವಿಧ ಉತ್ಪನ್ನಗಳಿಂದ ಕೃಷಿಕರಿಗೆ ಬಹಳಷ್ಟು ಲಾಭವಿದೆ. ಪ್ರತಿಯೊಬ್ಬ ರೈತರು ಹೈನು ಉದ್ಯಮವನ್ನು ಅಳವಡಿಸಿಕೊಳ್ಳಬೇಕು’ ಎಂದರು.

ಆಶ್ರಮದ ಪೂಜ್ಯ ಶ್ರೀ ಜ್ಯೋತಿರ್ಮಯಾನಂದ ಮಹಾರಾಜ, ಗೋಶಾಲೆ ವ್ಯವಸ್ಥಾಪಕ ಅರವಿಂದ ಇತರರಿದ್ದರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.