ಬೀದರ್: ‘ನಟ ವಿಷ್ಣುವರ್ಧನ್ ಜೀವನ ಆಧರಿತ ‘ಚಾಮಯ್ಯ s/o ರಾಮಾಚಾರಿ’ ಚಲನಚಿತ್ರವನ್ನು ಸೆಪ್ಟೆಂಬರ್ 19ರಂದು ಬೀದರ್‌ನಲ್ಲಿ ರಿಲೀಸ್ ಮಾಡಲು ನಿರ್ಧರಿಸಲಾಗಿದೆ’ ಎಂದು ಚಿತ್ರದ ನಿರ್ದೇಶಕ ರಾಧಾಕೃಷ್ಣ ಪಲ್ಲಕ್ಕಿ ತಿಳಿಸಿದರು.

ಸೆಪ್ಟೆಂಬರ್ 18ರಂದು ವಿಷ್ಣುವರ್ಧನ್ ಅವರ ಜನ್ಮದಿನವಿದೆ. ಈ ಹಿನ್ನೆಲೆಯಲ್ಲಿ ಮರುದಿನ ಅಂದರೆ ಸೆಪ್ಟೆಂಬರ್ 19ರಂದು ಬೀದರ್‌ನಲ್ಲಿ ಸಿನಿಮಾ ರಿಲೀಸ್ ಮಾಡಲಾಗುತ್ತಿದೆ. 45 ವರ್ಷಗಳ ಹಿಂದೆ ವಿಷ್ಣುವರ್ಧನ್ ಅವರಿಗೆ ಬೀದರ್‌ನ ಗುರುದ್ವಾರದಲ್ಲಿ ಕಡಗ ತೊಡಿಸಿ ಗೌರವಿಸಲಾಗಿತ್ತು. ಇದರ ಸವಿ ನೆನಪಿಗಾಗಿ ಅಣ್ಣ ಬಸವಣ್ಣನವರ ಕರ್ಮಭೂಮಿ ಬೀದರ್‌ನಲ್ಲೇ ಚಿತ್ರ ರಿಲೀಸ್ ಮಾಡಲಾಗುತ್ತಿದೆ. ಇದರ ಮುಖೇನ ರಾಜ್ಯದ ಮೂರು ಕೋಟಿ ಯುವಜನರಿಗೆ ಹೊಸ ಸಂದೇಶ ರವಾನೆಯಾಗಲಿದೆ ಎಂದು ನಗರದಲ್ಲಿ ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ವಿವರಿಸಿದರು.

ಸುಮಾರು 66 ಜನ ಕಲಾವಿದರು ಈ ಚಿತ್ರದಲ್ಲಿ ನಟಿಸಿದ್ದಾರೆ. ಸಿನಿಮಾ ನಿರ್ಮಾಣಕ್ಕೆ ಸುಮಾರು ₹2 ಕೋಟಿ ಖರ್ಚಾಗಿದೆ. ಭಾರತ ಯುವಕರ ದೇಶ. ಈ ಚಿತ್ರದ ಮೂಲಕ ಯುವಜನರಿಗೆ ಸಂದೇಶ ಕೊಡುವ ಪ್ರಯತ್ನ ವಿಷ್ಣುವರ್ಧನ್ ಅವರ ಜೀವನದ ಮೂಲಕ ಮಾಡಲಾಗುತ್ತಿದೆ. ಈ ಚಲನಚಿತ್ರವನ್ನು ನೋಡಿ ಕಲಾವಿದರನ್ನು ಪ್ರೋತ್ಸಾಹಿಸಬೇಕು ಎಂದು ಮನವಿ ಮಾಡಿದರು.

ಕಾಲಜ್ಞಾನಿ ಕೈವಾರ ತಾತಯ್ಯ, ದೇವನಹಳ್ಳಿ ಸೇರಿದಂತೆ ಇತರೆ ಚಲನಚಿತ್ರಗಳನ್ನು ಬಿಡುಗಡೆ ಮಾಡಿದ ಸಂದರ್ಭದಲ್ಲಿ ವಿಷ್ಣುವರ್ಧನ್ ಅವರ ಜೀವನಾಧಾರಿತ ಚಿತ್ರ ನಿರ್ಮಿಸಲು ನಿರ್ಧರಿಸಿದ್ದೆ. ಬಳಿಕ ವಿಷ್ಣುವರ್ಧನ್ ಅವರ ಅನುಮತಿ ಕೂಡ ಪಡೆದಿದ್ದೆ. ಕೆಲವೇ ದಿನಗಳಲ್ಲಿ ಅವರು ನಿಧನ ಹೊಂದಿದರು. ಬಳಿಕ ಮಧ್ಯದಲ್ಲಿ ಕೆಲಕಾಲ ಕೆಲಸ ನಿಂತು ಹೋಯಿತು. ಆನಂತರ ಪುನಃ ಆರಂಭಿಸಿ ಈಗ ವೀಕ್ಷಕರೆದುರು ಬಂದಿದ್ದೇವೆ. 2022ರಲ್ಲಿ ಚಿತ್ರದುರ್ಗದಲ್ಲಿ ಗಣಪತಿ ವಿಸರ್ಜನೆ ಸಂದರ್ಭದಲ್ಲಿ ಸಹಸ್ರಾರು ಜನರ ನಡುವೆ ಈ ಚಿತ್ರದ ಚಿತ್ರೀಕರಣ ನಡೆಸಿದ್ದು ವಿಶೇಷ ನೆನಪು ಎಂದು ಹೇಳಿದರು.

ಚಿತ್ರನಟ ಜಯಶ್ರೀ ರಾಜ್ ಮಾತನಾಡಿ,‘ನಾನು ವಿಷ್ಣುವರ್ಧನ್ ಅವರ ಪಕ್ಕಾ ಅಭಿಮಾನಿ. ಮೂಲತಃ ರಂಗಭೂಮಿ ಕಲಾವಿದ. ಅನೇಕ ನಾಟಕಗಳಲ್ಲಿ ಅಭಿನಯಿಸಿರುವೆ. ವಿಷ್ಣುವರ್ಧನ್ ಅವರಂತೆ ನಾನು ಬೆಳೆಯಬೇಕು. ಜ್ಯೂನಿಯರ್ ವಿಷ್ಣುವರ್ಧನ್ ಆಗಬೇಕೆಂದು ಸಾಕಷ್ಟು ಆಸೆ ಇಟ್ಟುಕೊಂಡಿದ್ದೆ. ವಿಷ್ಣು ಸರ್ ಅವರ ಜೀವನಾಧಾರಿತ ಚಿತ್ರದಲ್ಲಿ ನಟಿಸಲು ಅವಕಾಶ ಸಿಕ್ಕಿರುವುದು ನನ್ನ ಪುಣ್ಯ’ ಎಂದರು.

ನಟಿ ರಾಜೂವೇಣಿ ಮಾತನಾಡಿ,‘ನಾನು ವಿಷ್ಣುವರ್ಧನ್ ಅವರ ದೊಡ್ಡ ಅಭಿಮಾನಿ. ನನ್ನೂರಿನಲ್ಲಿ ಅವರು ಅಭಿನಯಿಸಿದ ಯಜಮಾನ ಚಿತ್ರ ನೋಡಲು ಹೋದಾಗ ಟಿಕೆಟ್ ಸಿಗದೇ ನಿರಶಳಾಗಿ ಆತ್ಮಹತ್ಯೆಗೆ ಮುಂದಾಗಿದ್ದೆ. ನನ್ನ ತಾಯಿ ಧೈರ್ಯ ತುಂಬಿ ವಿಷ್ಣುವರ್ಧನ್ ಅವರನ್ನು ಕಾಣಲು ಬೆಂಗಳೂರಿಗೆ ಕಳಿಸಿದ್ದರು. ಆನಂತರ ಹಲವು ಧಾರಾವಾಹಿಗಳಲ್ಲಿ ನಟಿಸುವ ಸೌಭಾಗ್ಯ ಒದಗಿ ಬಂತು’ ಎಂದು ನೆನಪಿಸಿಕೊಂಡರು.

ವಿಷ್ಣು ಸರ್ ಅವರೊಂದಿಗೆ ಒಂದು ಸಲ ನೃತ್ಯ ಮಾಡುವ ಸೌಭಾಗ್ಯ ಒದಗಿ ಬಂದಿತ್ತು. ಮತ್ತೊಂದು ಚಿತ್ರದಲ್ಲಿ ಅವರ ಹೆಂಡತಿಯಾಗಿ ನಟಿಸಿದ್ದೆ. ಹಳ್ಳಿ ಹುಡುಗಿಯಿಂದ ನಟಿಯಾಗಿ ಹೊರ ಹೊಮ್ಮಲು ವಿಷ್ಣು ಸರ್ ಕೊಟ್ಟ ಅವಕಾಶವೇ ಕಾರಣ. ಅದಕ್ಕೆ ಸದಾ ಚಿರರುಣಿ ಎಂದು ಭಾವುಕರಾದರು.

ನಿರ್ಮಾಪಕ ವಿ.ಗೋವಿಂದರಾಜು ಹಾಜರಿದ್ದರು. ವಿಷ್ಣುವರ್ಧನ್ ಅವರಿಗೆ ಬೀದರ್ ಗುರುದ್ವಾರದಿಂದ ನೀಡಿದ ಕಡಗವನ್ನು ಚಲನಚಿತ್ರ ನಟ ವಿಷ್ಣುಕಾಂತ ಅವರಿಗೆ ಹಸ್ತಾಂತರಿಸಲಾಯಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.