ಬೀದರ್: ‘ಮರೆಯಾಗುತ್ತಿರುವ ಶಾಸ್ತ್ರೀಯ ಮತ್ತು ಸುಗಮ ಸಂಗೀತವನ್ನು ಉಳಿಸಿ, ಬೆಳೆಸುವುದು ನಮ್ಮೆಲ್ಲರ ಕರ್ತವ್ಯ’ ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಸಿದ್ರಾಮ ಸಿಂಧೆ ಹೇಳಿದರು.

ನಗರದ ಚನ್ನಬಸವ ಪಟ್ಟದ್ದೇವರು ರಂಗಮಂದಿರದಲ್ಲಿ ಭಾನುವಾರ 2023-24ನೇ ಸಾಲಿನ ಸಂಘ ಸಂಸ್ಥೆಗಳ ಧನ ಸಹಾಯ ವಿಶೇಷ ಘಟಕ ಯೋಜನೆಯಡಿ ಡಾ.ಬಿ.ಆರ್. ಅಂಬೇಡ್ಕರ್ ಸಾಂಸ್ಕೃತಿಕ ಪ್ರಚಾರ ಕಾರ್ಯ ಸಮಿತಿ ಮಳಚಾಪೂರ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಯೋಗದಲ್ಲಿ ಏರ್ಪಡಿಸಿದ್ದ ಸಂಗೀತ ಮಹೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

‘ಸಂಗೀತದಿಂದ ಮಾನಸಿಕ ಶಾಂತಿ, ನೆಮ್ಮದಿ, ಸಮಾಧಾನ ದೊರಕುತ್ತದೆ. ಪಾಲಕರು ಮಕ್ಕಳನ್ನು ಮೊಬೈಲ್, ಟಿವಿಯಿಂದ ದೂರವಿರಿಸಿ ಸಂಗೀತದ ಆಸಕ್ತಿ ಮೈಗೂಡಿಸಿಕೊಳ್ಳುವಂತೆ ಮಾಡಿದರೆ ಮಕ್ಕಳು ಓದಿನಲ್ಲಿ ಏಕಾಗ್ರತೆ ಬೆಳೆಸಿಕೊಳ್ಳಲು ಸಾಧ್ಯ’ ಎಂದು ತಿಳಿಸಿದರು.

ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರದ ಸದಸ್ಯ ಸಂಜೀವಕುಮಾರ ಅತಿವಾಳೆ ಮಾತನಾಡಿ, ‘ದೀಪಕ ರಾಗದಿಂದ ದೀಪ ಬೆಳಗಿಸಬಹುದು, ಮಳೆ ತರಿಸಬಹುದು. ಅಂಥಹ ಅದಮ್ಯ, ಅಗೋಚರ ಮಹಾಶಕ್ತಿ ಸಂಗೀತಕ್ಕೆ ಇದೆ’ ಎಂದು ಹೇಳಿದರು.

ಜಾನಪದ ಅಕಾಡೆಮಿ ಸದಸ್ಯ ವಿಜಯಕುಮಾರ ಸೋನಾರೆ ಮಾತನಾಡಿ, ‘ನಶಿಸಿ ಹೋಗುತ್ತಿರುವ ಜಾನಪದ ಕಲೆ ಬೆಳೆಸಲು ಜಾನಪದ ಕಲಾವಿದರನ್ನು ಗುರುತಿಸಿ ಅವರಿಗೆ ಪ್ರೋತ್ಸಾಹ ನೀಡಬೇಕು’ ಎಂದರು.

ಜೈ ಭಾರತ ಮಾತಾ ಸೇವಾ ಸಮಿತಿಯ ರಾಷ್ಟ್ರೀಯ ಸಂಸ್ಥಾಪಕ ಅಧ್ಯಕ್ಷ ನೀರಗುಡಿ ಮಲ್ಲಿನಾಥ ಮಹಾರಾಜ, ಸರಸ್ವತಿ ದೊಡ್ಡಿ, ನರಸಿಂಹಲು, ಸಾಹಿತಿ ಎಂ.ಜಿ. ದೇಶಪಾಂಡೆ, ಹಿರಿಯ ಕಲಾವಿದ ಶೇಶರಾವ್ ಬೆಳಕುಣಿ, ಗೌತಮ ಅರಳಿ, ಮಹೆಬೂಬ್ ವಸ್ತಾದ್, ಸುನೀಲ್ ಭಾವಿಕಟ್ಟಿ, ಸಂತೋಷ ಜೋಳದಾಪಕೆ, ಪಪ್ಪು ಪಾಟೀಲ ಖಾನಾಪೂರ, ನವಲಿಂಗ ಪಾಟೀಲ, ರವಿ ಗಾಯಕವಾಡ, ಬಸವರಾಜ ಕಟ್ಟಿಮನಿ ಹಾಜರಿದ್ದರು.

ಶಿವಕುಮಾರ ಪಾಂಚಾಳ, ರವಿ ಗಾಯಕವಾಡ, ಲಕ್ಷ್ಮೀಬಾಯಿ, ರಮಾಬಾಯಿ, ದಿಲೀಪ ಕಾಡವಾದ, ಮಲ್ಲಮ್ಮ, ಕಲ್ಲಮ್ಮ ಮರೂರ, ಶಾರದಾಬಾಯಿ, ಸಂಜುಕುಮಾರ ಉಜನಿ, ರಮೇಶ ಕೊಳಾರ ತಂಡದವರು ಕ್ರಾಂತಿಗೀತೆ, ಮೊಹರಂ ಪದ, ಜಾನಪದ ಗೀತೆ, ಸುಗಮ ಸಂಗೀತ, ಜಾನಪದ ನೃತ್ಯ, ಕೋಲಾಟ ಪ್ರಸ್ತುತ ಪಡಿಸಿದರು.

ಎಸ್.ಬಿ.ಕುಚಬಾಳ್ ಸ್ವಾಗತಿಸಿದರು. ದಿಲೀಪ ಮೋಗಾ ನಿರೂಪಿಸಿದರೆ, ರಮೇಶ ದೊಡ್ಡಿ ವಂದಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.